ಜಮ್ಮು-ಕಾಶ್ಮೀರ: ಪಿಡಿಪಿ ಅಧ್ಯಕ್ಷೆಯಾಗಿ ಮೆಹಬೂಬಾ ಮುಫ್ತಿ ಪುನರಾಯ್ಕೆ
ಶ್ರೀನಗರ, ಡಿಸೆಂಬರ್ 02: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ(ಪಿಡಿಪಿ)ಯ ಅಧ್ಯಕ್ಷೆಯಾಗಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪುನರಾಯ್ಕೆಯಾಗಿದ್ದಾರೆ.
2016 ಜನವರಿಯಿಂದ ಅವರೇ ಪಕ್ಷದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ತಂದೆ ಮುಫ್ತಿ ಮೊಹ್ಮದ್ ಅವರು ಜನವರಿ 7, 2016 ರಂದು ಮರಣವನ್ನಪ್ಪಿದ ನಂತರ ಅಧ್ಯಕ್ಷೆಯಾಗಿ ಅವರೇ ಕಾರ್ಯನಿರ್ವಹಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರದಲ್ಲಿ ಏಪ್ರಿಲ್ 4, 2016 ರಂದು ಪ್ರಮಾಣವಚನ ಸ್ವೀಕರಿಸಿ, ಮುಫ್ತಿ ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದರು.












Click it and Unblock the Notifications