ನಿಗೂಢ ಗಣಿಯಲ್ಲಿ 13 ಕಾರ್ಮಿಕರ ನಾಪತ್ತೆ, 2 ದಿನವಾದರೂ ಸುದ್ದಿಯಿಲ್ಲ!

ಶಿಲ್ಲಾಂಗ್(ಮೇಘಾಲಯ), ಡಿಸೆಂಬರ್ 15: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ 13 ಕಾರ್ಮಿಕರು ಗಣಿಯ ಆಳದಲ್ಲಿ ಸಿಲುಕಿಕೊಂಡಿದ್ದು ಎರಡು ದಿನವಾದರೂ ಒಬ್ಬರೂ ಪತ್ತೆಯಾಗಿಲ್ಲ.

ಘಟಣೆ ಡಿಸೆಂಬರ್ 12 ರಂದು ನಡೆದಿದ್ದು, ಇದುವರೆಗೂ ಕಾರ್ಮಿಕರ ಪತ್ತೆಯಾಗಿಲ್ಲದ ಕಾರಣ, ಅವರೆಲ್ಲರೂ ಮೃತರಾಗಿರಬಹುದು ಎಂದು ಶಂಕಿಸಲಾಗಿದೆ.

ಗಣಿಯೊಳಗೆ ಬಿಲದಂಥ ಪ್ರದೇಶವಿದ್ದು, ಅವರೆಲ್ಲರೂ ಅಲ್ಲಿಯೇ ಸಿಲುಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಿ, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಈ ಆಳ ಪ್ರದೇಶದಲ್ಲಿ ನೀರು ಸಹ ತುಂಬಿಕೊಂಡಿದ್ದು, ರಕ್ಷಣಾ ಸಿಬ್ಬಂದಿ ನೀರನ್ನು ಮೇಲಕ್ಕೆತ್ತುವ ಕಾರ್ಯ ಮಾಡುತ್ತಿದ್ದಾರೆ.

Meghalaya: 13 people trapped in a rat hole in Mine

ರಾಷ್ಟ್ರೀಯ ವಿಪತ್ತು ದಳ, ರಾಜ್ಯ ವಿಪತ್ತು ದಳದ ಸುಮಾರು ನೂರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಗಣಿಯಾಳದಲಲಿ ಸಿಲುಕಿಕೊಂಡರವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಎರಡು ದಿನವಾದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಗಣಿಯ ಯಾವುದೇ ನಕ್ಷೆ ಇಲ್ಲದ ಕಾರಣ, ಇವರೆಲ್ಲ ಎಲ್ಲಿರಬಹದು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ.

ಮೇಘಾಲಯದಲ್ಲಿ ಇಲಿಯ ಬಿಲದಂಥ ಈ ಗಣಿಗಳು ಸರ್ವೇಸಾಮಾನ್ಯವಾಗಿದ್ದು, ಇದನ್ನು ಸ್ಥಳೀಯರೇ ಅಗೆದು ಮಾಡಿರುವುದರಿಂದ ಸಾಕಷ್ಟು ಅಪಾಯಕಾರಿಯೂ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+