ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

750 ರು ಜತೆಗೆ ಸಂಸತ್ತಿಗೆ ಪ್ರವೇಶದ ಬಯಕೆ

By Mahesh
|
Google Oneindia Kannada News

ತಿರುವನಂತಪುರಂ, ಮಾ.17: ಕೋಟಿಗಟ್ಟಲೇ ಆಸ್ತಿ ಪಾಸ್ತಿ ಹೊಂದಿರುವ ಅಭ್ಯರ್ಥಿಗಳು ಸಂಸತ್ತಿಗೆ ಪ್ರವೇಶ ಬಯಸಿ ಲೋಕಸಭೆ ಚುನಾವಣೆ ಕಣದಲ್ಲಿರುವಾಗ ಇಲ್ಲೊಬ್ಬ ಅಭ್ಯರ್ಥಿ ಅತಿ ಕಡಿಮೆ ಮೊತ್ತದ ಆಸ್ತಿ ಪ್ರಕಟಿಸಿ ಅಚ್ಚರಿಗೊಳಿಸಿದ್ದಾರೆ.

ಏ.10 ರಂದು ಕೇರಳದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವ ಮುನ್ನ ಆಸ್ತಿ ಘೋಷಣೆ ಮಾಡಿದ ಅಭ್ಯರ್ಥಿಯ ಬಳಿ ಇರುವ ಮೊತ್ತ ಕೇವಲ 750 ರು ಮಾತ್ರ. ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಟಿಕೆಟ್ ನಿಂದ ಕೊಟ್ಟಾಯಂನಲ್ಲಿ ಸ್ಪರ್ಧೆಗಿಳಿದಿರುವ ಅಭ್ಯರ್ಥಿ ಹೆಸರು ಬಿಜು. ಆತ ಸಲ್ಲಿಸಿರುವ ಅಫಿಡವಿಟ್ ನಂತೆ ಆತನ ಒಟ್ಟು ಆಸ್ತಿ 750 ರು ಮಾತ್ರ.

ಸ್ಥಳೀಯ ಕೋ ಆಪರೇಟಿವ್ ಬ್ಯಾಂಕಿನಲ್ಲಿರುವ ಮೊತ್ತ 250 ರು ಮಾತ್ರ. ಒಟ್ಟು 500 ರು ನಗದು ಮೊತ್ತ ಹೊಂದಿದ್ದಾರಂತೆ. 46 ವರ್ಷದ ಸಾಮಾಜಿಕ ಕಾರ್ಯಕರ್ತ ಬಿಜು ಅವರು ತಾನಾಗಲಿ ತನ್ನ ಪತ್ನಿಯಾಗಲಿ ಯಾವುದೇ ಚರಾಸ್ಥಿ ಹೊಂದಿಲ್ಲ ಎಂದು ಘೋಷಿಸಿದ್ದಾರೆ. ವಾಹನ, ಆಭರಣ, ಮನೆ ಯಾವುದನ್ನು ಹೊಂದಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.

Meet a Lok Sabha candidate whose total assets amount to just Rs 750

ತಿರುವನಂತಪುರಂನಲ್ಲಿ ನಾಮಪತ್ರ ಸಲ್ಲಿಸಿರುವ ಮತ್ತೊಬ್ಬ SUCI ಅಭ್ಯರ್ಥಿ ಘೋಷಿತ ಆಸ್ತಿ ಕೂಡಾ ಹುಬ್ಬೇರುವಂತೆ ಮಾಡಿದೆ. ಷಜಾರ್ ಖಾನ್ ಎಂಬ ಅಭ್ಯರ್ಥಿ ಘೋಷಿತ ಆಸ್ತಿ 1,500 ರು ನಗದು ಹಾಗೂ ಮೋಟರ್ ಸೈಕಲ್ ಹೊಂದಿದ್ದಾರೆ. ಒಟ್ಟಾರೆ ಬ್ಯಾಂಕಿನಲ್ಲಿ 26,800 ರು ಮೊತ್ತ ಮಾತ್ರ ಹೊಂದಿದ್ದಾರಂತೆ.

ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರದಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಕರ್ನಾಟಕದಲ್ಲಿ ಮಾ.19ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. [ಚುನಾವಣೆ 2014: ಈ ಅಂಕಿ ಅಂಶಗಳನ್ನು ನೆನಪಿಟ್ಕೊಳ್ಳಿ]

ಲೋಕಸಭಾ ಚುನಾವಣೆ 2014 ಏಪ್ರಿಲ್ 7 ರಿಂದ ಆರಂಭವಾಗಿ 9 ಹಂತಗಳಲ್ಲಿ ನಡೆಯಲಿದ್ದು ಮೇ 12ಕ್ಕೆ ಮುಗಿಯಲಿದೆ. ಮತ ಎಣಿಕೆ, ಫಲಿತಾಂಶ ಮೇ 16ರಂದು ಪ್ರಕಟವಾಗಲಿದೆ. ಮಾ.5ರಿಂದಲೇ ಚುನಾವಣಾ ನೀತಿ ಸಂಹಿತೆಯು ಜಾರಿ ಬಂದಿದ್ದು, ಚುನಾವಣೆಗಳು ಮುಗಿಯುವವರೆಗೂ ನೀತಿಸಂಹಿತೆ ಜಾರಿಯಲ್ಲಿದೆ.

ಕೇಂದ್ರ ಚುನಾವಣೆ ಆಯೋಗ ಲೋಕಸಭೆ ಚುನಾವಣೆ 2014 ವೇಳಾಪಟ್ಟಿ ಘೋಷಿಸಿದ ಬೆನ್ನಲ್ಲೇ ಅಭ್ಯರ್ಥಿಗಳಿಗೆ ಕೆಲ ವಿಶೇಷ ನಿರ್ದೇಶನಗಳನ್ನು ನೀಡಿದೆ.ಇದೇ ಮೊದಲ ಬಾರಿಗೆ ಮಹಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಹೆಚ್ಚಳ ಮಾಡಲಾಗಿದೆ. ಈ ಮೊದಲು 40 ಲಕ್ಷ ರು ಇದ್ದ ವೆಚ್ಚ ಈಗ 70 ಲಕ್ಷ ರು ತನಕ ಏರಿಕೆ ಮಾಡಿತ್ತು. ಇದರ ಜತೆಗೆ ಅಭ್ಯರ್ಥಿಗಳು ವಿದೇಶಿದಲ್ಲಿ ಇಟ್ಟಿರುವ ಬ್ಯಾಂಕ್ ಖಾತೆ ವಿವರಗಳನ್ನು ಬಹಿರಂಗಗೊಳಿಸುವುದು ಕಡ್ಡಾಯಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)

English summary
At a time when several crorepaties are seeking entry into Parliament, a candidate with a total asset of just Rs 750 has filed nomination papers in Kerala for the April 10 Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X