ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಸಿಡಿ ಚುನಾವಣೆ: ಬಿಜೆಪಿಯಿಂದ 7 ಲಕ್ಷ ಮನೆಗಳು, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಭರವಸೆ

|
Google Oneindia Kannada News

ದೆಹಲಿ ನವೆಂಬರ್ 25: ಗುಜರಾತ್ ವಿಧಾನಸಭೆ ಚುನಾವಣೆ ಸಮಯದಲ್ಲೇ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಕೂಡ ನಡೆಯುವುದರಿಂದ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಗೆ ಕೇಸರಿ ಪಕ್ಷ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್, ರಾಜ್ಯ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಮತ್ತು ಲೋಪಿ ರಾಮ್‌ವೀರ್ ಸಿಂಗ್ ಬಿಧುರಿ ಅವರು ಶುಕ್ರವಾರ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಗೆ 'ಸಂಕಲ್ಪ ಪತ್ರ'ವನ್ನು ಸಂಸದರೊಂದಿಗೆ ಬಿಡುಗಡೆ ಮಾಡಿದರು. ಈ ಸಂಕಲ್ಪ ಪತ್ರದಲ್ಲಿ ಆಡಳಿತಾರೂಢ ಬಿಜೆಪಿ ನೀಡಿದ ಪ್ರಮುಖ ಭರವಸೆಗಳು ಇಲ್ಲಿವೆ.

* ವ್ಯಾಪಾರ ಮತ್ತು ಆರೋಗ್ಯ ಪರವಾನಗಿಯನ್ನು ರದ್ದುಪಡಿಸುತ್ತದೆ. ಕಾರ್ಖಾನೆ ಪರವಾನಗಿಯನ್ನು ರದ್ದುಗೊಳಿಸುತ್ತದೆ ಎಂದು ಬಿಜೆಪಿ ಸಂಕಲ್ಪ ಪತ್ರದಲ್ಲಿ ತಿಳಿಸಲಾಗಿದೆ.

*ಪ್ರತಿ ಕೊಳೆಗೇರಿ ನಿವಾಸಿಗಳಿಗೆ ಫ್ಲಾಟ್‌ಗಳನ್ನು ಒದಗಿಸುವುದು. ಇದರಲ್ಲಿ 17,000 ಫ್ಲಾಟ್‌ಗಳು ಹಂಚಿಕೆಗೆ ಸಿದ್ಧವಾಗಿವೆ ಎಂದು ಬಿಜೆಪಿಯ ದೆಹಲಿ ಎಂಸಿಡಿ ಚುನಾವಣಾ ಪ್ರಣಾಳಿಕೆ ಹೇಳಿದೆ.

MCD Elections: BJP Releases Manifesto 7 Lakh Houses, Promises Free Cycle to Students

*ಹಸಿರು, ಸ್ವಚ್ಛ ಮತ್ತು ಸುಸ್ಥಿರ ದೆಹಲಿಗಾಗಿ ತ್ಯಾಜ್ಯದಿಂದ 100% ಕಸವನ್ನು ಸಂಸ್ಕರಿಸಲಾಗುವುದು

*ದೆಹಲಿ MCD ಯ ಎಲ್ಲಾ ಸೇವೆಗಳನ್ನು 100 ದಿನಗಳಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ಗೆ ತರಲಾಗುವುದು

*ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್

*ವಿದ್ಯಾರ್ಥಿಗಳ ಭದ್ರತೆಗಾಗಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು

ಮುಂಬರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಳೆದ ಗುರುವಾರ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ದೆಹಲಿ ಪಕ್ಷದ ರಾಜ್ಯಾಧ್ಯಕ್ಷ ಆದೇಶ್ ಗುಪ್ತಾ, ಸಂಸದ ಗೌತಮ್ ಗಂಭೀರ್, ಸಂಸದ ಮನೋಜ್ ತಿವಾರಿ ಮತ್ತು ಇತರ ನಾಯಕರು ಇದ್ದಾರೆ.

ಡಿಸೆಂಬರ್ 4ರಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 7ರಂದು ಫಳಿತಾಂಶ ಪ್ರಕಟವಾಗಲಿದೆ.

English summary
BJP has released 'Sankalp Patra' for Delhi Municipal Corporation (MCD) elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X