ಬಿಜೆಪಿಗೆ ಮತ ಹಾಕಿದರೆ ನಿಮ್ಮ ಮಕ್ಕಳಿಗೆ ಡೆಂಗ್ಯೂ ಗ್ಯಾರಂಟಿ: ಕೇಜ್ರಿವಾಲ್

Written By:
Subscribe to Oneindia Kannada

ನವದೆಹಲಿ, ಏ 21: ಮತದಾರರನ್ನು ಓಲೈಸಲು ಹೋಗಿ ಅತ್ಯಂತ ಕೀಳುಮಟ್ಟದ ಹೇಳಿಕೆಯನ್ನು ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಭಾನುವಾರ (ಏ 23) ನಡೆಯಲಿರುವ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ಎರಡು ದಿನದ ಮುನ್ನ ಕೇಜ್ರಿವಾಲ್ ನೀಡಿದ ಹೇಳಿಕೆ, ಚುನಾವಣೆಯಲ್ಲಿ ಪಕ್ಷದ ಮತಬ್ಯಾಂಕಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

ಶುಕ್ರವಾರ (ಏ 21) ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, ನೀವು ಬಿಜೆಪಿಗೆ ಮತಚಲಾಯಿಸಿದರೆ ನಿಮ್ಮ ಕುಟುಂಬದ ಮಕ್ಕಳಿಗೆ ಡೆಂಗ್ಯೂ ಕಾಯಿಲೆ ಬರುವುದಕ್ಕೆ ನೀವೇ ಕಾರಣರಾದಂತೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ದೆಹಲಿಯ ಜನತೆಗೆ ಬಿಜೆಪಿಯೆಂದರೆ ಡೆಂಗ್ಯೂ ಮತ್ತು ಚಿಕನ್ ಗುನ್ಯಾದ ಪಕ್ಷ ಎನ್ನುವ ಕೇಜ್ರಿವಾಲ್ ಅವರ ಟ್ವೀಟಿಗೆ, ಸಾಮಾಜಿಕ ತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದು ಆಮ್ ಆದ್ಮಿ ಪಕ್ಷದ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಲಾಗುತ್ತಿದೆ.

ಕಳೆದ ಹತ್ತು ವರ್ಷದಲ್ಲಿ ಬಿಜೆಪಿಗೆ ದೆಹಲಿಯನ್ನು ಕ್ಲೀನ್ ಮಾಡಲು ಸಾಧ್ಯವಾಗಲಿಲ್ಲ ಮತ್ತು ಡೆಂಗ್ಯೂ ಕಾಯಿಲೆ ಹರಡದಂತೆ ತಡೆಯಲಾಗಲಿಲ್ಲ. ದೆಹಲಿಯ ಎಲ್ಲಾ ಮತದಾರರು ಎಚ್ಚರಿಕೆಯಿಂದ ಮತಹಾಕಿ, ನೀವು ಬಿಜೆಪಿಗೆ ಮತಹಾಕಿದರೆ ಡೆಂಗ್ಯೂ ಕಾಯಿಲೆ ನಿಮ್ಮ ಮಕ್ಕಳಿಗೆ ಬರಲು ಪರೋಕ್ಷವಾಗಿ ನೀವೇ ಕಾರಣರಾದಂತೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

272 ಸ್ಥಾನವನ್ನು ಹೊಂದಿರುವ ದೆಹಲಿ (ಉತ್ತರ ಮತ್ತು ದಕ್ಷಿಣ ದೆಹಲಿ ತಲಾ 104, ಪೂರ್ವ ದೆಹಲಿ 64 ಸ್ಥಾನ) ಮುನ್ಸಿಪಲ್ ಚುನಾವಣೆ ಭಾನುವಾರ ನಡೆಯಲಿದ್ದು, ಫಲಿತಾಂಶ ಬುಧವಾರ (ಏ 26) ಹೊರಬೀಳಲಿದೆ. ಮುಂದೆ ಓದಿ..

ನಮಗೇ ಜಯ ಎಂದ ಕೇಜ್ರಿವಾಲ್

ನಮಗೇ ಜಯ ಎಂದ ಕೇಜ್ರಿವಾಲ್

ನಮ್ಮ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಜಯ ನಮಗೇ ಸಿಗಲಿದೆ. ಬಿಜೆಪಿ ದೆಹಲಿಯ ಪಾಲಿಗೆ ಡೆಂಗ್ಯೂ ಮತ್ತು ಚಿಕನ್ ಗುನ್ಯಾದಂತೆ. ಹಾಗಾಗಿ, ಮತದಾರರಲ್ಲಿ ಈ ಬಾರಿಯ ಚುನಾವಣೆಯಲ್ಲಿ ನಮಗೊಂದು ಅವಕಾಶ ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ - ಕೇಜ್ರಿವಾಲ್.

ಐಐಟಿ ಪದವೀಧರ ವ್ಯಕ್ತಿಯೊಬ್ಬರಿಂದ ಇಂತಹ ಹೇಳಿಕೆ

ಐಐಟಿ ಪದವೀಧರ ವ್ಯಕ್ತಿ ಅರವಿಂದ್ ಕೇಜ್ರಿವಾಲ್ ಅವರಿಂದ ಇಂತಹ ಹೇಳಿಕೆ. ಶೇಮ್

ಕೇಜ್ರಿ ಪ್ರಾಮಾಣಿಕ ವ್ಯಕ್ತಿಯಾ?

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಾಮಾಣಿಕ ವ್ಯಕ್ತಿಯ ಎನ್ನುವ ಟೈಮ್ಸ್ ನೌ ಸಮೀಕ್ಷೆಗೆ ದೆಹಲಿಯ ಶೇ. 9.5 ಜನತೆ ಹೌದು ಅಂದಿದ್ದಾರೆ.

ಕೇಜ್ರಿವಾಲ್ ಹಿಂದಿಯಲ್ಲಿ ಮಾಡಿದ ಡೆಂಗ್ಯೂ ಟ್ವೀಟ್

ಬಿಜೆಪಿಗೆ ಮತ್ತೆ ಅಧಿಕಾರ ನೀಡಿದರೆ ಡೆಂಗ್ಯೂ ಗ್ಯಾರಂಟಿ.

ಟೈಮ್ಸ್ ನೌ ಸಮೀಕ್ಷೆ ಆಶ್ಚರ್ಯ ತಂದಿದೆ

ಟೈಮ್ಸ್ ನೌ ಸಮೀಕ್ಷೆ ಆಶ್ಚರ್ಯ ತಂದಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If you vote for the BJP then you will be responsible if you have dengue in your family, Delhi Chief Minister Arvind Kejriwal controversial statement and series of tweets ahead of Sunday (Apr 23) election.
Please Wait while comments are loading...