Cauvery Issue: ಸೆ.12ರ ನಂತರ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ: ಸುಪ್ರೀಂಗೆ ಕರ್ನಾಟಕ ಅಫಿಡವಿಟ್
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆ ಮುಂದುವರೆದಿದೆ. ಸೆಪ್ಟೆಂಬರ್ 12 ರ ನಂತರ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ನೀಡಿದ ಅಫಿಡವಿಟ್‌ನಲ್ಲಿ ತಿಳಿಸಿದೆ.
ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳೆರಡರಲ್ಲೂ ರಾಜ್ಯ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ಇದರಿಂದಾಗಿ ಸೆಪ್ಟೆಂಬರ್ 12 ರ ನಂತರ ತನ್ನ ಜಲಾಶಯಗಳಿಂದ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮುಂದಿನ 15 ದಿನಗಳವರೆಗೆ ಅಂದರೆ ಸೆಪ್ಟೆಂಬರ್ 12 ರವರೆಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಆಗಸ್ಟ್ 29 ರಂದು ಕೇಂದ್ರ ಜಲ ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ನಿರ್ದೇಶನವನ್ನು ಪಾಲಿಸುವುದಾಗಿ ಕರ್ನಾಟಕ ಹೇಳಿದೆ. ಆದರೆ ಇದರ ನಂತರ ತಮಿಳುನಾಡಿಗೆ ನೀರು ಬಿಡಲು ಸಾರ್ಧಯವಿಲ್ಲ ಎಂದಿದೆ. ಬರ ಪರಿಸ್ಥಿತಿಯು ರಾಜ್ಯ ಸರ್ಕಾರದ ಮೇಲೆ ಭಾರೀ ಹೊರೆ ಹಾಕಿದೆ ಎಂದು ಕರ್ನಾಟಕ ಹೇಳಿದೆ.
''ಕಾವೇರಿ ಜಲಾನಯನ ಪ್ರದೇಶದಲ್ಲಿ ಸದ್ಯ ಸೆಪ್ಟೆಂಬರ್ 4ರಂದು 56.043 ಟಿಎಂಸಿ ನೀರು ಸಂಗ್ರಹವಾಗಿದೆ. ನಿರೀಕ್ಷಿತ ಒಳಹರಿವು ಸುಮಾರು 40 ಟಿಎಂಸಿ. ಈಗ ಲಭ್ಯವಿರುವ ನೀರು ರಾಜ್ಯದಲ್ಲಿ ಹಂಚಿಕೆ ಮಾಡಲು ಸಾಕಾಗುವುದಿಲ್ಲ. ಆದ್ದರಿಂದ ಸೆಪ್ಟೆಂಬರ್ 12 ರ ನಂತರ, ಅಂದರೆ ಆಗಸ್ಟ್ 29 ರಂದು ನಡೆದ CWMA ಸಭೆಯ ನಿರ್ದೇಶನಗಳನ್ನು ಅನುಸರಿಸಿದ ನಂತರ ಕರ್ನಾಟಕದ ಅಗತ್ಯಗಳಿಗೆ ಅಪಾಯವೊಡ್ಡಿ ಕರ್ನಾಟಕದ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವುದು ಅಸಾಧ್ಯ''ಎಂದು ಕರ್ನಾಟಕ ಹೇಳಿದೆ.
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಮಧ್ಯಂತರ ಆದೇಶವನ್ನು ಹೊರಡಿಸಿದ ನಂತರ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ಸುಪ್ರೀಂಗೆ ಕರ್ನಾಟಕ ಅಫಿಡವಿಟ್ ನಲ್ಲಿ ಏನಿದೆ?
ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುತ್ತಿದ್ದು, ಜಲಾಶಯಗಳಿಂದ ಇನ್ನು ಮುಂದೆ ಯಾವುದೇ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಕಾವೇರಿ ಜಲಾನಯದ ಪ್ರದೇಶದಲ್ಲಿ ಪ್ರಸ್ತುತ (ಸೆಪ್ಟೆಂಬರ್ 4) 56.043ಟಿಎಂಸಿ ನೀರು ಸಂಗ್ರಹವಿದೆ. ನೀರೀಕ್ಷಿತ ಒಳಹರಿವು ಸುಮಾರು 40 ಟಿಎಂಸಿ ಇದೆ. ಕರ್ನಾಟಕದ ಅವಶ್ಯತೆಯು CWMA ಮೂಮದೆ ಸಲ್ಲಿಸಿದಂತೆ 140 TMC ಆಗಿದೆ. ಆದ್ದರಿಂದ 12.9.2023ರ ನಂತರ ಕರ್ನಾಟಕದ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವುದು ಕಾರ್ಯಸಾಧ್ಯವಾಗುವುದಿಲ್ಲ ಎಂದು ನಾನು ಮನವಿ ಮಾಡುತ್ತೇನೆ ಎಂದು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.
ಹೀಗಾಗಿ ತಮಿಳುನಾಡು ಅರ್ಜಿ ವಜಾ ಮಾಡುವಂತೆ ಕರ್ನಾಟಕ ಮನವಿ ಮಾಡಿದೆ. ದಿನಕ್ಕೆ 24,000 ಕ್ಯೂಸೆಕ್ ಪೂರೈಕೆಗಾಗಿ ತಮಿಳುನಾಡಿನ ಬೇಡಿಕೆಯು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ ಮತ್ತು 2023-24 ರಲ್ಲಿ ನೀರಿನ ಲಭ್ಯತೆ ಸಾಮಾನ್ಯವಾಗಿದೆ ಎಂಬುದು ತಪ್ಪಾದ ಊಹೆಯಾಗಿದೆ ಎಂದು ಕರ್ನಾಟಕ ಹೇಳಿದೆ.
ಆಗಸ್ಟ್ 14 ರಿಂದ ಪ್ರಾರಂಭವಾಗುವ ಆಗಸ್ಟ್‌ನ ಉಳಿದ ಅವಧಿಗೆ ಬೆಳೆಯಬೇಕಿದ್ದ ಬೆಳೆಗಳಿಗೆ ಬಿಲ್ಲಿಗುಂಡುಲು ಜಲಾಶಯದಿಂದ 24,000 ಕ್ಯೂಸೆಕ್ ಕಾವೇರಿ ನೀರನ್ನು ತಕ್ಷಣವೇ ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.












Click it and Unblock the Notifications