ಸುಪ್ರಿಂ ಆದೇಶದಿಂದ ಖಾಸಗೀ ಕಂಪನಿ ನೌಕರರ ಪಿಂಚಣಿ ಭಾರೀ ಏರಿಕೆ

ನವದೆಹಲಿ, ನವೆಂಬರ್ 22: ಕೆಲಸದಲ್ಲಿದ್ದಾಗ ಸಿಗುತ್ತಿದ್ದ ಸಂಬಳ ಏರಿಕೆ ಪಿಂಚಣಿದಾರರಿಗೆ ಸಿಗುವುದಿಲ್ಲ. ಇದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದ ಪ್ರವೀಣ್ ಕೊಹ್ಲಿ ಎಂಬವರಿಗೆ ಜಯವಾಗಿದ್ದು, ಅವರ ಪಿಂಚಣಿಯನ್ನು ದೊಡ್ಡ ಮಟ್ಟಕ್ಕೆ ಏರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

ಹೀಗಾಗಿ ಹರ್ಯಾಣ ಪ್ರವಾಸೋದ್ಯಮ ಸಂಘದಲ್ಲಿ ನೌಕರರಾಗಿದ್ದ ಪ್ರವೀಣ್ ಕೊಹ್ಲಿ ಪಿಂಚಣಿ ಈಗ ಶೇಕಡಾ 1200 ಏರಿಕೆಯಾಗಿದ್ದು, 2,372 ರೂಪಾಯಿಯಿಂದ 30,592 ರೂಪಾಯಿಗೆ ಏರಿಕೆಯಾಗಿದೆ.

Massive rise in private sector pensions after SC order

2016ರಲ್ಲಿ ಸುಪ್ರಿಂ ಕೋರ್ಟ್ ನೌಕರರ ಭವಿಷ್ಯ ನಿಧಿ ಸಂಘ (ಇಪಿಎಫ್ಒ)ಕ್ಕೆ ನೌಕರರ ಪಿಂಚಣಿ ಯೋಜನೆ (ಇಪಿಎಫ್) ಯಡಿಯಲ್ಲಿ 12 ಪಿಂಚಣಿದಾರರ ಪಿಂಚಣಿ ಮರುಪರಿಶೀಲನೆ ನಡೆಸುವಂತೆ ಹೇಳಿತ್ತು.

2016ರಲ್ಲಿ ಆದೇಶ ನೀಡಲಾಗಿದ್ದರೂ ಈ ಆದೇಶವನ್ನು ಜಾರಿ ಮಾಡಲು ಕೊಹ್ಲಿ ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ಅದರಂತೆ ಈಗ ಇವರೆಲ್ಲಾ ಹೆಚ್ಚಿನ ಪಿಂಚಣಿ ಪಡೆಯುತ್ತಿದ್ದಾರೆ.

ಇಪಿಎಸ್ ಅಡಿಯಲ್ಲಿ 5 ಕೋಟಿ ಉದ್ಯೋಗಿಗಳಿದ್ದು, ಪ್ರತಿಯೊಬ್ಬರು ತಮ್ಮ ಸಂಬಳದ ಪ್ರತಿ ತಿಂಗಳು ಶೇಕಡಾ 12ನ್ನು ಕಟ್ಟುತ್ತಿದ್ದಾರೆ. ಇದೇ ಹಣದಲ್ಲಿ ಪಿಂಚಣಿ ನೀಡಲಾಗುತ್ತಿದೆ.

ಇದೀಗ ಕೊಹ್ಲಿ ಹೆಚ್ಚಿನ ಪಿಂಚಣಿಗೆ ಹೋರಾಟ ಮಾಡಿ ಜಯಶಾಲಿಯಾಗಿದ್ದು, ಉಳಿದ ಪಿಂಚಣಿದಾರರೂ ಹೆಚ್ಚಿನ ಮೊತ್ತದ ಪಿಂಚಣಿಗೆ ಮನವಿ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+