• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಭಾರೀ ಭೂಕಂಪ, ಉತ್ತರ ಭಾರತ ಗಡಗಡ

|

ನವದೆಹಲಿ, ಅಕ್ಟೋಬರ್. 26: ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಗಡಿ ಪ್ರದೇಶ ಹಿಂದೂಕುಷ್ ಪರ್ವತದಲ್ಲಿ ಸೋಮವಾರ ಮಧ್ಯಾಹ್ನ 7.7 ಭೂ ಕಂಪನ ದಾಖಲಾಗಿದೆ. ಪೇಶಾವರದಿಂದ 260 ಕಿಮೀ ದೂರದಲ್ಲಿ ಭೂ ಕಂಪನ ಕೇಂದ್ರ ದಾಖಲಾಗಿದೆ.

ಪರಿಣಾಮ ರಾಷ್ಟ್ರದ ರಾಜಧಾನಿ ದೆಹಲಿ ಉತ್ತರ ಭಾರತದ ಹಲವೆಡೆ ಭೂಮಿ ನಡುಗಿದ್ದು ಹಾನಿ ಲೆಕ್ಕ ಇನ್ನು ಮುಂದೆ ತಿಳಿದು ಬರಬೇಕಿದೆ. ದೆಹಲಿ, ಪಂಜಾಬ್, ಛತ್ತೀಸ್ ಘಡ, ಗುಜರಾತ್, ಮುಂಬೈ ಸೇರಿದಂತೆ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಭೂಕಂಪನವಾಗಿದೆ.[ಬೆಂಗಳೂರು ಭೂಕಂಪದ ಆತಂಕದಿಂದ ಮುಕ್ತವಲ್ಲ!]

ಹಿಂದೂಕುಷ್ ಪರ್ವತ ಎಲ್ಲಿದೆ?
ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಗಡಿ ಪ್ರದೇಶದಲ್ಲಿ ಹಿಂದೂಕುಷ್ ಪರ್ವತವಿದೆ. ಅಪಘಾನಿಸ್ತಾದ ವ್ಯಾಪ್ತಿಗೆ ಸೇರುವ ಪರ್ವತ ಶ್ರೇಣಿಯಲ್ಲಿ ಆಗಾಗ ಭೂಮಿ ಕಂಪಿಸುತ್ತಲೇ ಇರುತ್ತದೆ. ಆದರೆ ಈ ಸಾರಿ ನಡುಗಿರುವ ಭೂಮಿ ಮೂರು ದೇಶಗಳನ್ನು ಅಲ್ಲಾಡಿಸಿದೆ.

ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆ ದಾಖಲು

ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆ ದಾಖಲು

ಉತ್ತರ ಪಾಕಿಸ್ತಾನದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಕೆಲವೆಡೆ ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆ ದಾಖಲಾಗಿದೆ. ಭೂಕಂಪಕ್ಕೆ ಪಾಕಿಸ್ತಾನದಲ್ಲಿ 106 ಜನ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಳವಾಗುವ ಸಂಭವವಿದ್ದು ಸೇನಾ ಪಡೆಗಳು ರಕ್ಷಣಾ ಕಾರ್ಯ ಆರಂಭ ಮಾಡಿವೆ.

 ಉತ್ತರ ಭಾರತ ತತ್ತರ

ಉತ್ತರ ಭಾರತ ತತ್ತರ

ನವದೆಹಲಿ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶದ ಕೆಲ ಭಾಗಗಳು ಮತ್ತು ಮುಂಬೈನಲ್ಲಿ ಭೂಕಂಪದ ಅನುಭವವಾಗಿದೆ. ಸುಮಾರು ಒಂದು ನಿಮಿಷಕ್ಕೂ ಅಧಿಕ ಕಾಲ ಭೂಮಿ ನಡುಗಿದೆ.

 ಹೊರಕ್ಕೆ ಓಡಿ ಬಂದ ಜನ

ಹೊರಕ್ಕೆ ಓಡಿ ಬಂದ ಜನ

ಭಯಭೀತರಾದ ಜನರು ಕಟ್ಟಡಗಳಿಂದ ಹೊರಕ್ಕೆ ಓಡಿ ಬಂದು ನಿಂತುಕೊಂಡ ದೃಶ್ಯ ಕಂಡುಬಂತು. ಭಾರತೀಯ ಸೇನೆ ಸಹ ಸಂತ್ರಸ್ತರ ನೆರವಿಗೆ ಧಾವಿಸಿತ್ತಿದೆ. ಕೆಲ ತಿಂಗಳ ಹಿಂದೆ ನೇಪಾಳದಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದರು.

ಭೂಕಂಪದ ಕೇಂದ್ರ ಎಲ್ಲಿತ್ತು?

ಭೂಕಂಪದ ಕೇಂದ್ರ ಎಲ್ಲಿತ್ತು?

ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಗಡಿ ಪ್ರದೇಶದಲ್ಲಿ ಹಿಂದೂಕುಷ್ ಪರ್ವತವಿದೆ. ಅಪಘಾನಿಸ್ತಾದ ವ್ಯಾಪ್ತಿಗೆ ಸೇರುವ ಪರ್ವತ ಶ್ರೇಣಿಯಲ್ಲಿ ಆಗಾಗ ಭೂಮಿ ಕಂಪಿಸುತ್ತಲೇ ಇರುತ್ತದೆ. ಆದರೆ ಈ ಸಾರಿ ನಡುಗಿರುವ ಭೂಮಿ ಮೂರು ದೇಶಗಳನ್ನು ಅಲ್ಲಾಡಿಸಿದೆ.

 ಸಿಎಂ ಸಿದ್ದರಾಮಯ್ಯಗೂ ತಪ್ಪದ ಕಾಟ

ಸಿಎಂ ಸಿದ್ದರಾಮಯ್ಯಗೂ ತಪ್ಪದ ಕಾಟ

ಭೂಕಂಪದ ವೇಳೆ ನವದೆಹಲಿಯಲ್ಲಿದ್ದ ಸಿದ್ದರಾಮಯ್ಯ ಸಹ ತಾವಿದ್ದ ಜಾಗದಿಂದ ಹೊರಕ್ಕೆ ಓಡಿಬಂದರು. ದೆಹಲಿಯಲ್ಲಿ ಇಲ್ಲಿಯವರೆಗೆ ದುರ್ಘಟನೆ ಸಂಭವಿಸಿದ ವರದಿಯಾಗಿಲ್ಲ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Massive tremors felt in North Pakistan in Hindukush mountain range on Monday. Mild tremors felt also in many parts of North India including Srinagar, Delhi, Punjab.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more