ಭಾರತೀಯ ವಾಯುಪಡೆಯ 'ಮಾರ್ಷಲ್' ಅರ್ಜನ್ ಸಿಂಗ್ ನಿಧನ

Posted By:
Subscribe to Oneindia Kannada

ನವದೆಹಲಿ, ಸೆ 16: ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಐದು ಸ್ಟಾರ್ ಪಡೆದ ಏಕೈಕ ಅಧಿಕಾರಿ ' ಏರ್ ಮಾರ್ಷಲ್' ಅರ್ಜನ್ ಸಿಂಗ್ ಶನಿವಾರ (ಸೆ 16) ರಾತ್ರಿ 7.50ರ ಸುಮಾರಿಗೆ ಹೃದಯಾಘಾತದಿಂದ ನಿಧನ (98) ಹೊಂದಿದ್ದಾರೆ.

ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮಾನವಾಗಿದ್ದ ಅಧಿಕಾರಿ ಎನ್ನುವ ಹಿರಿಮೆಗೆ ಅರ್ಜನ್ ಸಿಂಗ್ ಪಾತ್ರರಾಗಿದ್ದರು. 2016ರಲ್ಲಿ ಪಶ್ಚಿಮ ಬಂಗಾಳದಲ್ಲಿರುವ ಪನಾಗರ್ ವಾಯುನೆಲೆಗೆ, ಅರ್ಜನ್ ಸಿಂಗ್ ಅವರ 97ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೆಸರನ್ನು ಇಡಲಾಗಿತ್ತು.

ಹಿಂದಿನ ಸುದ್ದಿ: 1965ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ವಾಯುಸೇನೆಯ ಚೀಫ್ ಆಫ್ ಸ್ಟಾಫ್ ಆಗಿ ಕಾರ್ಯ ನಿರ್ವಹಿಸಿದ್ದ, ಭಾರತೀಯ ವಾಯುಸೇನೆಯ ಮಾರ್ಷಲ್ ಅರ್ಜನ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೃದಯ ಸ್ತಂಭನವಾಗಿರುವ ಅವರ ಚಿಕಿತ್ಸೆ ನವ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಡೆಯುತ್ತಿದೆ.

ಬಡ್ತಿಯಲ್ಲಿ ತಾರತಮ್ಯ, ಸುಪ್ರೀಂಕೋರ್ಟ್ ಮೊರೆ ಹೋದ 100 ಸೈನಿಕರು

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಭಾರತೀಯ ವಾಯುದಳದ ಮುಖ್ಯಸ್ಥ ಬಿ.ಎಸ್.ಧಹಾಸ್ ಆಸ್ಪತ್ರೆಗೆ ಭೇಟಿ ನೀಡಿ, ಅರ್ಜನ್ ಸಿಂಗ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.

Marshal of Air Force Arjan Singh critically ill

"ಆರೋಗ್ಯ ಸ್ಥಿತಿ ಗಂಭೀರವಾಗಿರುವ ಭಾರತೀಯ ವಾಯುದಳದ ಮಾರ್ಷಲ್ ಅರ್ಜನ್ ಸಿಂಗ್ ಅವರನ್ನು ನೋಡಲು ಆಸ್ಪತ್ರೆಗೆ ತೆರಳಿದ್ದೆ. ಅವರ ಕುಟುಂಬದವರನ್ನೂ ಭೇಟಿ ಮಾಡಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ವಾಯುದಳದಲ್ಲಿ ಫೀಲ್ಡ್ ಮಾರ್ಷಲ್ ಶೇಣಿಗೆ ಸಮನಾದ ಹುದ್ದೆ ನೀಡಿದ್ದ ಏಕೈಕ ಅಧಿಕಾರಿ ಅರ್ಜನ್ ಸಿಂಗ್. ಅವರಿಗೆ ಈಗ 98 ವರ್ಷ ವಯಸ್ಸು. ಕಳೆದ ವರ್ಷ ಪಶ್ಚಿಮ ಬಂಗಾಲದ ಪನ್ ಗಡ್ ನ ವಾಯು ನೆಲೆಗೆ ಅರ್ಜನ್ ಸಿಂಗ್ ಅವರ ಹೆಸರಿಟ್ಟಿತ್ತು. ವಾಯು ನೆಲೆಯೊಂದಕ್ಕೆ ಜೀವಂತ ಇರುವ ಅಧಿಕಾರಿಯೊಬ್ಬರು ಹೆಸರಿಟ್ಟಿದ್ದು ಅದೇ ಮೊದಲು. 2002ರಲ್ಲಿ ಸಿಂಗ್ ಅವರಿಗೆ ಫೈವ್ ಸ್ಟಾರ್ ಶ್ರೇಣಿಗೆ ಬಡ್ತಿ ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Arjan Singh, Marshal of the Indian Air Force (IAF) and India's oldest, five-star ranked air force officer, was admitted in hospital on Saturday after suffering a cardiac arrest.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ