ಪ್ರೀತಿಸಿ ಮದುವೆಯಾಗಿದ್ದಕ್ಕೆ ಹಲ್ಲೆ ನಡೆಸಿ, ಮೂತ್ರ ಕುಡಿಸಿದ ಪಾಪಿಗಳು

ಹರದಾಸ್‌ಪುರ, ಆಗಸ್ಟ್ 1: ಮನೆಯವರ ವಿರೋಧವನ್ನೂ ಲೆಕ್ಕಿಸದೆ ಮದುವೆಯಾಗಿದ್ದ ನವದಂಪತಿ ಮೇಲೆ ಹಲ್ಲೆ ನಡೆಸಿ ಅವರಿಗೆ ಬಲವಂತವಾಗಿ ಮೂತ್ರ ಕುಡಿಸಿದ ಅಮಾನುಷ ಘಟನೆ ಮಧ್ಯಪ್ರದೇಶದ ಹರದಾಸಪುರದಲ್ಲಿ ನಡೆದಿದೆ.

ಹರದಾಸಪುರದ ಜೋಡಿಯೊಂದು ಪ್ರೀತಿಸಿ ಮದುವೆಯಾಗಲು ಬಯಸಿತ್ತು. ಆದರೆ, ಅವರ ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ.

ಅವರ ವಿರೋಧ ಲೆಕ್ಕಿಸದೆ ಈ ಜೋಡಿ ಮದುವೆಯಾಗಿತ್ತು. ಇದರಿಂದ ಕುಪಿತಗೊಂಡ ಯುವತಿಯ ಮನೆಯವರು ಅಳಿಯ ಮತ್ತು ಮಗಳನ್ನು ಎಳೆದೊಯ್ದು ಮನಬಂದಂತೆ ಹಲ್ಲೆ ನಡೆಸಿದ್ದಾರೆ.

married couple thrashed, forced to drink urine in madhya pradesh

ಯುವತಿಯ ಬಟ್ಟೆಗಳನ್ನು ಹರಿದು ಬೆತ್ತಲೆಮಾಡಿ ಆಕೆಯ ತಲೆಗೂದಲನ್ನು ಕತ್ತರಿಸಿದ್ದಾರೆ. ಬಳಿಕ ಇಬ್ಬರಿಗೂ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ.

ನಾವಿಬ್ಬರೂ ಪ್ರೀತಿಸಿದ್ದಕ್ಕೆ ಮತ್ತು ಮದುವೆಯಾಗಿದ್ದಕ್ಕೆ ಈ ರೀತಿ ದೌರ್ಜನ್ಯ ಎಸಗಲಾಗಿದೆ ಎಂದು ಯುವಕ ಆರೋಪಿಸಿದ್ದಾನೆ.

ಪೊಲೀಸರು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+