• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಮರಾಠಿ ಟಿವಿ ನಟಿ ಸಾವು

|
Google Oneindia Kannada News

ಮುಂಬೈ, ನವೆಂಬರ್‌ 14: ಕೊಲ್ಹಾಪುರ ಜಿಲ್ಲೆಯಲ್ಲಿ 32 ವರ್ಷದ ಮರಾಠಿ ಟಿವಿ ನಟಿಯೊಬ್ಬರ ಸ್ಕೂಟರ್‌ಗೆ ಕಾಂಕ್ರೀಟ್ ಮಿಕ್ಸರ್ ಟ್ರ್ಯಾಕ್ಟರ್‌ವೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

'ತುಜ್ಯಹತ್ ಜೀವ್ ರಂಗಾ' ಎಂಬ ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಲ್ಯಾಣಿ ಕುರಾಳೆ ಜಾಧವ್ ಅವರು ಶನಿವಾರ ಸಂಜೆ ಮನೆಗೆ ತೆರಳುತ್ತಿದ್ದಾಗ ಸಾಂಗ್ಲಿ ಕೊಲ್ಹಾಪುರ ಹೆದ್ದಾರಿಯ ಹಾಲೊಂಡಿ ಪ್ರದೇಶದ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗುಜರಾತ್‌: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಮೊದಲ ಬಲಿ, ಮಹಿಳೆ ಸಾವುಗುಜರಾತ್‌: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಮೊದಲ ಬಲಿ, ಮಹಿಳೆ ಸಾವು

ಅಪಘಾತವಾದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮುನ್ನವೇ ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಟ್ರ್ಯಾಕ್ಟರ್ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಲ್ಲಾಪುರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೊಲ್ಹಾಪುರ ನಗರದ ರಾಜಾರಾಂಪುರಿ ಪ್ರದೇಶದ ನಿವಾಸಿ ಕಲ್ಯಾಣಿ ಕುರಾಳೆ ಜಾಧವ್ ಇತ್ತೀಚೆಗೆ ಹಾಲೊಂಡಿ ಫಾಟಾದಲ್ಲಿ 'ಪ್ರೇಮಚಿ ಭಕಾರಿ' ಹೆಸರಿನ ಹೋಟೆಲ್ ರೆಸ್ಟೋರೆಂಟ್ ಅನ್ನು ಅವರು ಆರಂಭಿಸಿದ್ದರು. ಅಪಘಾತ ಸಂಭವಿಸಿದ ದಿನದಂದು ಜಾಧವ್ ರೆಸ್ಟೋರೆಂಟ್ ಅನ್ನು ಮುಚ್ಚಿಕೊಂಡು ಮನೆಗೆ ಹೋಗುತ್ತಿದ್ದರು. ಆಗ ರಸ್ತೆಯಲ್ಲಿ ಆಕೆಯ ದ್ವಿಚಕ್ರ ವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟರು ಎಂದು ತಿಳಿದು ಬಂದಿದೆ.

Marathi TV actress dies after A tractor collided with her bike

ಕಲ್ಯಾಣಿ ಕುರಾಳೆ ಜಾಧವ್ ಸಾಯುವ 22 ಗಂಟೆಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಸಲಾಡ್ ತಿನ್ನುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದರು. ಕಲ್ಯಾಣಿ ಅವರು ಹೋ ನಾ ಹೋ ಹಾಡನ್ನು ಪ್ರದರ್ಶಿಸುತ್ತಿರುವ ಅವರ ವೀಡಿಯೊವನ್ನು ಸಹ ಹಂಚಿಕೊಂಡಿದ್ದರು.

English summary
A 32-year-old Marathi TV actress was killed after a concrete mixer tractor hit her scooter in Kolhapur district, a police official said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X