ರಾಜಸ್ಥಾನ ಭಾರೀ ಬಿರುಗಾಳಿ, ಮಳೆ: 12 ಜನ ಬಲಿ

Posted By:
Subscribe to Oneindia Kannada

ಜೈಪುರ, ಏಪ್ರಿಲ್ 12: ಪೂರ್ವ ರಾಜಸ್ಥಾನದಲ್ಲಿ ನಿನ್ನೆ(ಏಪ್ರಿಲ್ 11) ರಾತ್ರಿ ಸುರಿದ ಭಾರೀ ಮಳೆ, ಬಿರುಗಾಳಿಗೆ 12 ಜನ ಮೃತರಾಗಿದ್ದಾರೆ. ಇಲ್ಲಿನ ಧೋಲ್ಪುರ ಪ್ರದೇಶದಲ್ಲಿ ಏಳು ಜನ ಮೃತರಾಗಿದ್ದರೆ, ಭರತ್ಪುರದಲ್ಲಿ ಐದು ಜನ ಮೃತರಾಗಿದ್ದಾರೆ.

ಧೋಲ್ಪುರ ಪ್ರದೇಶ ಜಲಾವೃತವಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯುಂಟಾಗುತ್ತಿದೆ. ಉತ್ತರ ಭಾರತದಲ್ಲಿ ಈಗಾಗಲೇ ಪೂರ್ವ ಮುಂಗಾರಿನ ಸೂಚನೆ ಎಂಬಂತೆ ಮಳೆಯಾಗಿದ್ದು, ಹವಾಮಾನ ಇಲಾಖೆ ಮೊದಲೇ ಮಳೆಯ ಮುನ್ಸೂಚನೆ ನೀಡಿತ್ತು.

Many dead in Rajasthan rainstorm

ಬೆಂಗಳೂರಲ್ಲಿ ಮತ್ತೆ ಎರಡು ದಿನ ಮಳೆ ಬರುವ ಸಾಧ್ಯತೆ

ಮಳೆಯ ಕಾರಣ ಆಗ್ರಾ-ಧೋಲ್ಪುರ ರೈಲ್ವೇ ಸಂಪರ್ಕವನ್ನೂ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ದಕ್ಷಿಣ ಭಾರತದಲ್ಲೂ ಕೆಲವು ದಿನಗಳ ಹಿಂದೆ ಮಳೆಯಾಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಏ.12 ಮತ್ತು 13 ರಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 12 people died in Eastern Rajasthan after a rainstorm hit the region on Wednesday night. Seven people died in Dholpur, while five others died in Bharatpur.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ