ಉತ್ತರಾಖಂಡದಲ್ಲಿ ಪ್ರಪಾತಕ್ಕೆ ಉರುಳಿದ ಬಸ್ಸು: 14 ಮಂದಿ ದುರ್ಮರಣ
ತೆಹ್ರಿ, ಜುಲೈ 19: ಉತ್ತರಾಖಂಡದಲ್ಲಿ ಚಲಿಸುತ್ತಿದ್ದ ಬಸ್ಸೊಂದು ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 14 ಜನ ಮೃತರಾದ ದಾರುಣ ಘಟನೆ ನಡೆದಿದೆ. ಉತ್ತರಾಖಂಡದ ತೆಹ್ರಿ ಬಳಿ ಋಷಿಕೇಶ ಗಂಗೋತ್ರಿ ಹೆದ್ದಾರಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದ ಈ ಘಟನೆಯಲ್ಲಿ 18 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ತೆಹ್ರಿ ಜಿಲ್ಲೆಯ ಸೂರ್ಯಧಾರ್ ಎಂಬಲ್ಲಿ ಬಸ್ಸು 250 ಅಡಿಯ ಪ್ರಪಾತಕ್ಕೆ ಬಿದ್ದಿತ್ತು. ಇದರಿಂದಾಗಿ ಸ್ಥಳದಲ್ಲೇ 14 ಮಂದಿ ಮೃತರಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.

ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದ್ದು, ಹೆಲಿಕಾಪ್ಟರ್ ಮೂಲಕ ಗಾಯಗೊಂಡವರನ್ನು ರಕ್ಷಿಸಲಾಗುತ್ತಿದೆ.
ಜು.1 ರಂದು ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಕಣಿವೆಗೆ ಬಸ್ಸೊಂದು ಉರುಳಿದ ಪರಿಣಾಮ 47 ಕ್ಕೂ ಮಂದಿ ಸಾವನ್ನಪ್ಪಿದ ದುರಂತ ನಡೆದಿತ್ತು.











Click it and Unblock the Notifications