ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ತಿಂಗಳ ಚಿಕಿತ್ಸೆ ಬಳಿಕ ಗೋವಾಕ್ಕೆ ಮನೋಹರ್‌ ಪರಿಕ್ಕರ್ ವಾಪಸ್

By Gururaj
|
Google Oneindia Kannada News

ಪಣಜಿ, ಜೂನ್ 14 : ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತವರಿಗೆ ಮರಳಿದರು. ಮೂರು ತಿಂಗಳ ಚಿಕಿತ್ಸೆ ಬಳಿಕ ಪರಿಕ್ಕರ್ ವಾಪಸ್ ಆದರು.

62 ವರ್ಷದ ಮನೋಹರ್ ಪರಿಕ್ಕರ್ ನ್ಯೂಯಾರ್ಕ್‌ನ ಆಸ್ಪತ್ರೆಯಲ್ಲಿ pancreatic ailment ಕಳೆದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಸಂಜೆ ಮುಂಬೈಗೆ ಅವರು ಆಗಮಿಸಿದ್ದು, ಅಲ್ಲಿಂದ ಗೋವಾಕ್ಕೆ ತೆರಳಿದರು.

ಪರಿಕ್ಕರ್ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿ ಬಂಧನಪರಿಕ್ಕರ್ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿ ಬಂಧನ

Manohar Parrikar returns to Goa after 3 months

ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ 2018ರ ಫೆಬ್ರವರಿಯಿಂದ ಗೋವಾ ಮೆಡಿಕಲ್ ಕಾಲೇಜು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಾರ್ಚ್ ಮೊದಲ ವಾರದಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿರುವ ಮನೋಹರ್ ಪರಿಕ್ಕರ್ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿರುವ ಮನೋಹರ್ ಪರಿಕ್ಕರ್

ಮನೋಹರ್ ಪರಿಕ್ಕರ್ ವಿದೇಶಕ್ಕೆ ಚಿಕಿತ್ಸೆಗಾಗಿ ತೆರಳುವ ಮುನ್ನ ಸರ್ಕಾರದ ಆಡಳಿತಕ್ಕೆ ಸಲಹೆ ನೀಡಲು ಸಲಹಾ ಸಮಿತಿಯನ್ನು ರಚನೆ ಮಾಡಿದ್ದರು. ಶುಕ್ರವಾರ ಸಚಿವ ಸಂಪುಟ ಸಭೆಯನ್ನು ಅವರು ಕರೆದಿದ್ದು, ಎಲ್ಲಾ ಸಚಿವರು ಹಾಜರಾಗಬೇಕು ಎಂದು ಸೂಚನೆ ನೀಡಿದ್ದಾರೆ.

ಎಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಜೂನ್ 14ರಂದು ಮನೋಹರ್ ಪರಿಕ್ಕರ್ ಗೋವಾಕ್ಕೆ ಆಗಮಿಸಲಿದ್ದಾರೆ. ಜೂನ್ 15ರಂದು ಎಲ್ಲಾ ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಸಚಿವರಿಗೆ ಮಾಹಿತಿ ನೀಡಲಾಗಿದೆ.

English summary
Goa Chief Minister Manohar Parrikar landed in Mumbai on June 14, 2018 and will return to Goa. Manohar Parrikar was in the United States for treatment for a pancreatic ailment since March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X