• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಪ್ರಥಮ ಭಾರತೀಯ ಮಹಿಳಾ ಬ್ಯಾಂಕ್ ಆರಂಭ

By Mahesh
|

ಬೆಂಗಳೂರು, ನ.19: ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬ ಕಲ್ಪನೆಯೊಂದಿಗೆ ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ರಾಷ್ಟ್ರೀಕೃತ 'ಭಾರತೀಯ ಮಹಿಳಾ ಬ್ಯಾಂಕ್' (ಬಿಎಂಬಿ) ಗೆ ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ಅವರು ಮುಂಬೈನ ನಾರಿಮನ್ ಪಾಯಿಂಟ್ ನಲ್ಲಿ ಚಾಲನೆ ನೀಡಿದ್ದಾರೆ. ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಹುಟ್ಟುಹಬ್ಬದ ಅಂಗವಾಗಿ ಮುಂಬೈ ಸೇರಿದಂತೆ ದೇಶದ ಏಳು ನಗರಗಳಲ್ಲಿ ಬ್ಯಾಂಕ್ ಆರಂಭಗೊಳ್ಳಲಿದೆ.

ದೇಶದ ಮೊದಲ ಮಹಿಳಾಬ್ಯಾಂಕಿಗೆ ಮಂಗಳವಾರ ಮುಂಬೈನಲ್ಲಿ ಚಾಲನೆ ಸೋನಿಯಾ ಸಹ ಉಪಸ್ಥಿತರಿದ್ದರು. ಬೆಂಗಳೂರು, ಚೆನ್ನೈ, ಕೋಲ್ಕತಾ, ಅಹ್ಮದಾಬಾದ್, ಲಕ್ನೋ, ಗುವಾಹಟಿಯಲ್ಲೂ ಮೊದಲ ದಿನವೇ ಶಾಖೆಗಳು ಶುರುವಾಗಿದೆ. ಈ ಬ್ಯಾಂಕಿನ ಮುಖ್ಯ ಕಚೇರಿ ನವದೆಹಲಿಯಲ್ಲಿರಲಿದೆ. 5 ರಾಜ್ಯಗಳ ಚುನಾವಣೆ ಬಳಿಕ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ ಶಾಖೆಗಳು ಆರಂಭವಾಗಲಿವೆ. ಬರುವ ಮಾರ್ಚ್ ವೇಳೆಗೆ 25 ಶಾಖೆ ಆರಂಭವಾಗುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ ನಗರದ ಹಡ್ಸನ್ ವೃತ್ತದ ಹಲಸೂರು ಗೇಟ್ ಪೊಲೀಸ್ ಠಾಣೆ ಎದುರಿನ ಐಎಸ್ ಸಿಐ ಕಟ್ಟಡದ ಮೊದಲ ಮಹಡಿಯಲ್ಲಿ ಈ ವಿಶೇಷ ಬ್ಯಾಂಕ್ ಕಾರ್ಯಾರಂಭ ಮಾಡಿದೆ. ಸಂಜೆ 4ಕ್ಕೆ ಮಹಾನಗರದಲ್ಲಿ ಕೇಂದ್ರ ವಿತ್ತೀಯ ಸಚಿವಾಲಯದ ಕಾರ್ಯದರ್ಶಿ ಛೋಪ್ರಾ ಮಹಿಳಾ ಬ್ಯಾಂಕ್ ಸೇವೆಗೆ ಚಾಲನೆ ನೀಡಲಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮಾದರಿಯಲ್ಲೇ ಆರಂಭವಾಗುತ್ತಿರುವ ಈ ವಿಶಿಷ್ಟ ಬ್ಯಾಂಕ್ ನಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಇರಲಿದ್ದಾರೆ. ವಿಚಾರಣಾ ಕೊಠಡಿಯಿಂದ ಹಿಡಿದು ಕ್ಯಾಶ್ ಕೌಂಟರ್ ವರೆಗೆ ಮಹಿಳಾ ಸಿಬ್ಬಂದಿ ಕಾಣಿಸಿಕೊಳ್ಳಲಿದ್ದಾರೆ. ಶೇ 80 ರಷ್ಟು ಮಹಿಳೆಯರು ಹಾಗೂ ಶೇ. 20ರಷ್ಟು ಪುರುಷರು ಈ ಬ್ಯಾಂಕ್ ಸೇವೆ ಪಡೆಯಬಹುದು. ಇನ್ನು ಬ್ಯಾಂಕ್‌ನಲ್ಲಿ ಹಂತ-ಹಂತವಾಗಿ ಎಟಿಎಂ, ಯಾವುದೇ ಮಹಿಳಾ ಬ್ಯಾಂಕ್‌ನಲ್ಲೂ ಸೇವೆ ಪಡೆಯಬಹುದಾದ ಸೌಲಭ್ಯ, ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಸೋಮವಾರ ಸಾಂಕೇತಿಕವಾಗಿ ಸೇವೆ ಪ್ರಾರಂಭಗೊಳ್ಳಲಿದ್ದು, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಮಹಿಳಾ ಉದ್ಯಮಿ, ವಿದ್ಯಾರ್ಥಿನಿ ಹಾಗೂ ಅಂಗವಿಕಲೆಗೆ ಈ ಬ್ಯಾಂಕ್ ನ ಮೊದಲ ಸೇವೆ ಸೀಮಿತವಾಗಿರುತ್ತದೆ. ಈ ಐದೂ ಕ್ಷೇತ್ರಗಳ ತಲಾ ಒಬ್ಬರು ಅಂದು ಖಾತೆಗಳನ್ನು ತೆರೆಯಲಿದ್ದಾರೆ. ಬೆನ್ನಲ್ಲೇ ಐವರು ಮಹಿಳೆಯರು ಸಾಲ ಪಡೆಯಲಿದ್ದಾರೆ. [ಉದ್ಘಾಟನೆ ನಂತರ ಪ್ರಧಾನಿ ಸಿಂಗ್ ಭಾಷಣ ಇಲ್ಲಿ ಓದಿ]

ಬೆಂಗಳೂರಿನ 'ಭಾರತೀಯ ಮಹಿಳಾ ಬ್ಯಾಂಕ್ 'ನ ಉಪ ಪ್ರಧಾನ ವ್ಯವಸ್ಥಾಪಕರಾಗಿ ಮಾಯಾ ನೇಮಕಗೊಂಡಿದ್ದಾರೆ. ಇನ್ನು ಬ್ಯಾಂಕ್ ನಲ್ಲಿ ಮಹಿಳೆಯರ ಸೇವೆಗಾಗಿ ಮೊದಲ ಹಂತದಲ್ಲಿ ಏಳು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈ ಪೈಕಿ ಒಬ್ಬರು ಮುಖ್ಯ ವ್ಯವಸ್ಥಾಪಕರು, ಇಬ್ಬರು ಹಿರಿಯ ವ್ಯವಸ್ಥಾಪಕರು, ನಾಲ್ವರು ಇತರೆ ಅಧಿಕಾರಿಗಳು ಇರುತ್ತಾರೆ. ಇದರ ಜತೆಗೆ ಓರ್ವ ವ್ಯಕ್ತಿಯನ್ನು ಸೇವೆಗೆ ನಿಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕಿಯಾಗಿರುವ ಉಷಾ ಅನಂತಸುಬ್ರಮಣಿಯನ್ ಅವರು ಭಾರತೀಯ ಮಹಿಳಾ ಬ್ಯಾಂಕಿನ ಮುಖ್ಯಸ್ಥರಾಗಿರುತ್ತಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Manmohan Singh inaugurated the first branch of Bharatiya Mahila Bank today(Nov.19) in the iconic Air India building at Nariman Point in Mumbai with an area of 5,000 sq ft space on the ground floor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more