ಶಾಸಕರಿಗೆ 100 ಕೋಟಿ; ಆಡಿಯೋ ಕ್ಲಿಪ್ ನಲ್ಲಿ 'ಶಾ' ಎಂಬ ಉಲ್ಲೇಖ!

ಹೈದ್ರಾಬಾದ್, ಅಕ್ಟೋಬರ್ 29: ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿಯರು ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಮಿತ್ ಶಾ ಅನ್ನು ಬಂಧಿಸುವಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಗೃಹ ಸಚಿವರು ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಂಧಿಸುವಂತೆ ಹೇಳಿದ್ದಾರೆ.

ಈ ಹಿಂದೆ ದೆಹಲಿ, ಪಂಜಾಬ್ ಮತ್ತು ಇತರ ಎಂಟು ರಾಜ್ಯಗಳಲ್ಲಿ ಬಿಜೆಪಿಯು ಇದೇ ರೀತಿಯ ಪ್ರಯತ್ನಗಳನ್ನು ಮಾಡಿತ್ತು. ತೆಲಂಗಾಣದಲ್ಲಿ ಈ ಬಾರಿ ಬಿಜೆಪಿ ಆಡುತ್ತಿರುವ ಡರ್ಟಿ ಗೇಮ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶಅ ಸಿಸೋಡಿಯಾ ಹೇಳಿದ್ದಾರೆ.

ಕೆಲವು ತೆಲಂಗಾಣ ರಾಷ್ಟ್ರೀಯ ಸಮಿತಿ ಶಾಸಕರನ್ನು ಬಿಜೆಪಿಗೆ ಕರೆ ತರುವುದಕ್ಕಾಗಿ ಲಂಚ ನೀಡಲು ಪ್ರಯತ್ನಿಸುತ್ತಿರುವ ಮೂವರು ವ್ಯಕ್ತಿಗಳ ನಡುವಿನ ಸಂಭಾಷಣೆಯನ್ನು ಹೊಂದಿರುವ ಆಡಿಯೊ ಕ್ಲಿಪ್ ಅನ್ನು ಉಲ್ಲೇಖಿಸಿ, ಮನೀಶ್ ಸಿಸೋಡಿಯಾ ಮಾತನಾಡಿದ್ದಾರೆ. ಈ ಆಡಿಯೋದಲ್ಲಿ ಶಾ ಜಿ ಉಲ್ಲೇಖವಿದೆ ಎಂದಿದ್ದಾರೆ. "ಶಾಹ್ ಜಿ ನಿಜವಾಗಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಿದ್ದರೆ, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು, ಏಕೆಂದರೆ ಒಬ್ಬ ದಲ್ಲಾಳಿ ಶಾಸಕನನ್ನು ಖರೀದಿಸಿ ಸಿಕ್ಕಿಬಿದ್ದರೆ ಮತ್ತು ಅದರಲ್ಲಿ ದೇಶದ ಗೃಹ ಸಚಿವರ ಹೆಸರು ಕಾಣಿಸಿಕೊಂಡರೆ ಅದು ತುಂಬಾ ಅಪಾಯಕಾರಿ," ಎಂದರು.

ಆರೋಪಿಗಳನ್ನು ವಶಕ್ಕೆ ನೀಡಲು ಕೋರ್ಟ್ ನಿರಾಕರಣೆ

ಆರೋಪಿಗಳನ್ನು ವಶಕ್ಕೆ ನೀಡಲು ಕೋರ್ಟ್ ನಿರಾಕರಣೆ

ಕಳೆದ ಬುಧವಾರ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡುವಂತೆ ಕೋರಿ ಪೊಲೀಸರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಆರೋಪಿಗಳನ್ನು ಹೈದರಾಬಾದ್ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಬಂಧಿಸಲಾಗಿದೆ. ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಬಿಜೆಪಿಗೆ ಬದಲಾಯಿಸಲು ಲಂಚ ನೀಡುತ್ತಿದ್ದ ವೇಳೆ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಪರೇಷನ್ ಕಮಲದ ಕುರಿತು ಮನೀಶ್ ಸಿಸೋಡಿಯಾ

ಆಪರೇಷನ್ ಕಮಲದ ಕುರಿತು ಮನೀಶ್ ಸಿಸೋಡಿಯಾ

ತೆಲಂಗಾಣದಲ್ಲಿ ಬಿಜೆಪಿ ನಡೆಸುತ್ತಿರುವ ‘ಆಪರೇಷನ್ ಕಮಲ'ವನ್ನು ಉಲ್ಲೇಖಿಸಿದ ಮನೀಶ್ ಸಿಸೋಡಿಯಾ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. "ಅಕ್ಟೋಬರ್ 27 ರಂದು ಸೈಬರಾಬಾದ್‌ನಲ್ಲಿ ದಾಳಿ ನಡೆಸಿ ಮೂವರು ಪಿಂಪ್‌ಗಳು 100 ಕೋಟಿಯೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ನಿಮ್ಮಲ್ಲಿ ಕೆಲವರು ವರದಿ ಮಾಡಿದ್ದರು. ಈ ದಲ್ಲಾಳಿಗಳು ಬಿಜೆಪಿಯ ಆಪರೇಷನ್ ಕಮಲವನ್ನು ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಮೂವರು ಬ್ರೋಕರ್‌ಗಳು ರಾಮಚಂದ್ರ ಭಾರತಿ, ಸಿಮಯ್ಯ ಮತ್ತು ನಂದ್ ಕುಮಾರ್," ಎಂದು ಹೇಳಿದರು.

ಟಿಆರ್‌ಎಸ್‌ನಿಂದ ಬಿಜೆಪಿಗೆ ಸೆಳೆಯುವ ಹುನ್ನಾರ

ಟಿಆರ್‌ಎಸ್‌ನಿಂದ ಬಿಜೆಪಿಗೆ ಸೆಳೆಯುವ ಹುನ್ನಾರ

"ಕಳೆದ ಅಕ್ಟೋಬರ್ 28ರಂದು ಬಿಡುಗಡೆಯಾದ ಆಡಿಯೋದಲ್ಲಿ ಸಂಪೂರ್ಣ ಸಂಭಾಷಣೆಯಿದೆ. ಅದರಲ್ಲಿ ವಿಶೇಷವಾಗಿ ಭಾರತಿ ಎಂಬುವವರು ಟಿಆರ್‌ಎಸ್‌ನಿಂದ ಬಿಜೆಪಿಗೆ ಶಾಸಕರನ್ನು ಕರೆ ತರುವುದಕ್ಕೆ ಪ್ಲ್ಯಾನ್ ಮಾಡಿದ್ದರು ಎಂದರು. ಈ ಬಂಧಿತ ಮೂವರು ವ್ಯಕ್ತಿಗಳು ಮತ್ತು ಟಿಆರ್‌ಎಸ್‌ನ ಕೆಲವು ಶಾಸಕರ ನಡುವಿನ ವರದಿಯಾದ ಸಂಭಾಷಣೆಗಳ ಆಡಿಯೊ ರೆಕಾರ್ಡಿಂಗ್ ಅನ್ನು ಉಲ್ಲೇಖಿಸಿ ಸಿಸೋಡಿಯಾ ಉಲ್ಲೇಖಿಸಿದರು.

ಆಗಸ್ಟ್‌ನಲ್ಲಿ ಆಪ್ ಶಾಸಕರಿಗೆ 20 ಕೋಟಿ ಆಮಿಷ

ಆಗಸ್ಟ್‌ನಲ್ಲಿ ಆಪ್ ಶಾಸಕರಿಗೆ 20 ಕೋಟಿ ಆಮಿಷ

ಈ ವರ್ಷದ ಆಗಸ್ಟ್‌ನಲ್ಲಿ ದೆಹಲಿಯಲ್ಲಿ ತನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿಯು ತನ್ನ ಶಾಸಕರಿಗೆ 20 ಕೋಟಿ ರೂಪಾಯಿ ನೀಡುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿತ್ತು. ಎಎಪಿಯ ದೆಹಲಿ ಶಾಸಕರನ್ನು ಖರೀದಿಸಲು ಬಿಜೆಪಿಯು ಪ್ರಯತ್ನಿಸಿತ್ತು ಎಂಬುದನ್ನು ಉಲ್ಲೇಖಿಸಿದ ಸಿಸೋಡಿಯಾ, ಇಂದು ಎರಡನೇ ಆಡಿಯೋ ರೆಕಾರ್ಡಿಂಗ್ ಬಗ್ಗೆ ತಿಳಿಸಿದರು.

"ಇಂದು ಹೊಸ ಆಡಿಯೋ ಹೊರಬಿದ್ದಿದೆ. ಇದು ತೆಲಂಗಾಣದ ಶಾಸಕರು ಮತ್ತು ಆಪರೇಷನ್ ಕಮಲದ ನಡುವಿನ ಸಂಭಾಷಣೆಯಾಗಿದೆ. ಈ ಆಡಿಯೊದಲ್ಲಿ, ಅವರು ದೆಹಲಿಯಲ್ಲೂ ಇದನ್ನು ಪ್ರಯತ್ನಿಸಿದ್ದಾರೆ ಎಂದು ಮಾತಿನಲ್ಲಿ ಒಬ್ಬರು ಬಹಿರಂಗಪಡಿಸಿದ್ದಾರೆ,'' ಎಂದು ಸಿಸೋಡಿಯಾ ಹೇಳಿದ್ದಾರೆ. "ಈ ಶಾಸಕರನ್ನು ಖರೀದಿಸಲು ನೀವು 1,075 ಕೋಟಿ ವ್ಯವಸ್ಥೆ ಮಾಡಿದ್ದೀರಿ ಎಂಬುದೇ ಪ್ರಶ್ನೆ. ಇದು ಯಾರ ಹಣ ಮತ್ತು ಎಲ್ಲಿಂದ ಬಂತು?" ಎಂದು ಕೇಳಿದರು. ಈ ಸಂಪೂರ್ಣ ಸಂಚಿಕೆಯ ಬಗ್ಗೆ ತನಿಖೆಗೆ ಒತ್ತಾಯಿಸಿದ ಸಿಸೋಡಿಯಾ, ಹಣವು ಹೇಗೆ ಬಂತು ಎಂಬುದನ್ನು ಪತ್ತೆಹಚ್ಚುವಂತೆ ಜಾರಿ ನಿರ್ದೇಶನಾಲಯವನ್ನು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+