Get Updates
Get notified of breaking news, exclusive insights, and must-see stories!

ಮಣಿಪುರದ ಬುಡಕಟ್ಟು ಜನರು ಮ್ಯಾನ್ಮಾರ್ನವರಲ್ಲ: ಅಮಿತ್‌ ಶಾ ಹೇಳಿಕೆಗೆ ರಾಜ್ಯಸಭಾ ಸದಸ್ಯ ತಿರುಗೇಟು- ಎನ್‌ಡಿಎ ಮೈತ್ರಿಯಲ್ಲಿ ಒಡಕು

ಐಜ್ವಾಲ್, ಆಗಸ್ಟ್‌ 11: ಮಿಜೋರಾಂನ ಏಕೈಕ ರಾಜ್ಯಸಭಾ ಸದಸ್ಯ ಕೆ ವನಲಾಲ್ವೆನಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು 'ಟೈಮ್ಸ್‌ ಆಫ್‌ ಇಂಡಿಯಾ' ವರದಿ ಮಾಡಿದೆ.

ವನಲಾಲ್ವೆನಾ ಅವರು ಎನ್‌ಡಿಎ ಮೈತ್ರಿಕೂಟದ ಅಂಗ ಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ನಾಯಕರಾಗಿದ್ದಾರೆ.

Manipur violence: Mizo National Front MP slams Amit Shah, says Manipur tribals not Myanmarese

ಮಣಿಪುರದ ಬುಡಕಟ್ಟು ಜನರನ್ನು ಮ್ಯಾನ್ಮಾರ್ ಪ್ರಜೆಗಳು ಎಂದು ಅಮಿತ್‌ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವರಿಗೆ ವನಲಾಲ್ವೆನಾ ತಿರುಗೇಟು ನೀಡಿದ್ದಾರೆ.

ಮಣಿಪುರದ ವಿಚಾರವಾಗಿ ಸಂಸತ್‌ನಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ವನ್‌ಲಾಲ್ವೆನಾ, 'ಮಣಿಪುರದ ಬುಡಕಟ್ಟು ಜನಸಂಖ್ಯೆಯು ಈಶಾನ್ಯ ರಾಜ್ಯಗಳಲ್ಲಿ 200 ವರ್ಷಗಳಿಂದ ನೆಲೆಸಿದೆ' ಎಂದು ಪ್ರತಿಪಾದಿಸಿದರು.

Manipur violence: Mizo National Front MP slams Amit Shah, says Manipur tribals not Myanmarese

ಬ್ರಿಟಿಷರು ಭಾರತಕ್ಕೆ ಬರುವುದಕ್ಕಿಂತ ಮುಂಚಿತವಾಗಿಯೇ ಮಣಿಪುರದಲ್ಲಿ ಬುಡಕಟ್ಟು ಜನಾಂಗದವರು ನೆಲೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

'ನಾನು ಮಿಜೋರಾಂನ ಬುಡಕಟ್ಟು ಜನಾಂಗಕ್ಕೆ ಸೇರಿದವನು. ನಾವು ವಿದೇಶಿಯರಲ್ಲ. ನಾವು ಮ್ಯಾನ್ಮಾರ್ ಪ್ರಜೆಗಳಲ್ಲ. ನಾವು ಭಾರತೀಯರು. ಭಾರತ ಸ್ವತಂತ್ರವಾಗುವ ನೂರಾರು ವರ್ಷಗಳ ಮೊದಲು ನಾವು ಈಶಾನ್ಯ ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿದ್ದೇವೆ' ಎಂದು ವನಲಾಲ್ವೆನಾ ತಿಳಿಸಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯಸಭೆಯ ಸ್ಪೀಕರ್‌ ಜಗದೀಪ್ ಧನಕರ್‌, ವನಲಾಲ್ವೆನಾ ಅವರ ಹೇಳಿಕೆಯನ್ನು ದಾಖಲಿಸಲಾಗುವುದಿಲ್ಲ. ಇದೊಂದು ಸೂಕ್ಷ್ಮ ಹಾಗೂ ಗಂಭೀರ ವಿಷಯವೆಂದು ತಿಳಿಸಿದರು.

Manipur violence: Mizo National Front MP slams Amit Shah, says Manipur tribals not Myanmarese

ಚರ್ಚೆ ಬಳಿಕ ವನಲಾಲ್ವೆನಾ ಅವರು ಟೈಮ್ಸ್‌ ಆಫ್‌ ಇಂಡಿಯಾದೊಂದಿಗೆ ಮಾತನಾಡುತ್ತಾ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

'ಸದನದಲ್ಲಿ ನನ್ನ ಮೈಕ್ರೊಫೋನ್ ಸ್ವಿಚ್ ಆಫ್ ಮಾಡಲಾಗಿದೆ. ನನ್ನ ಧ್ವನಿಯ ಮುಕ್ಕಾಲು ಭಾಗವು ಕೇಳಿಸಲಿಲ್ಲ' ಎಂದು ಹೇಳಿದ್ದಾರೆ.

ಅಕ್ರಮ ನುಸುಳುಕೋರರಿಂದ ಮಣಿಪುರದಲ್ಲಿ ತೊಂದರೆಗಳು ಉಂಟಾಗಿವೆ ಎಂದು ಅಮಿಶ್‌ ಶಾ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯು ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರ ನಿಲುವಿಗೆ ಹೊಂದಿಕೆಯಾಗುತ್ತದೆ ಎಂದು ಎಂಎನ್‌ಎಫ್ ಸಂಸದರು ತಿಳಿಸಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ನೇತೃತ್ವದ ಎಂಎನ್‌ಎಫ್ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ನೀಡಿದರೆ, ಈ ಬೆಂಬಲ ಸಮಸ್ಯೆಗೆ ಕಾರಣವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮೇ 3 ರಿಂದ ಮಣಿಪುರದಲ್ಲಿ ಗಲಭೆಗಳು ನಡೆಯುತ್ತಿವೆ. ಬಹುಸಂಖ್ಯಾತ ಮೈತೇಯಿ ಹಾಗೂ ಅಲ್ಪಸಂಖ್ಯಾತ ಕುಕಿ ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ವರೆಗೂ 160 ಕ್ಕೂ ಅಧಿಕ ಮಂದಿ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. ಈ ವಿಚಾರವಾಗಿ ಪ್ರಧಾನಿ ಮೋದಿ ಮಾತನಾಡಬೇಕೆಂದು ವಿರೋಧ ಪಕ್ಷಗಳ ಮೈತ್ರಿಕೂಟ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಯಿತು.

ಈ ಕುರಿತು ಗುರುವಾರ ಮಾತನಾಡಿರುವ ಪ್ರಧಾನಿ ಮೋದಿ, ಭಾರತ ಮಣಿಪುರದೊಂದಿಗೆ ಇರಲಿದೆ. ಅಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾವು ಎಲ್ಲ ರೀತಿಯ ಯತ್ನಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

ಬುಧವಾರ ಸದನದಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬಿಜೆಪಿಯವರು ಮಣಿಪುರದಲ್ಲಿ ಎರಡು ಮಣಿಪುರಗಳನ್ನು ಸೃಷ್ಟಿ ಮಾಡಿದ್ದಾರೆ. ಅವರು ದೇಶದ್ರೋಹಿಗಳು ಎಂದು ಕರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+