• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಚರ್ಚ್‌ಗೆ ಹೋಗಬೇಕು, ಮತದಾನ ದಿನಾಂಕ ಬದಲಾಯಿಸಿ''

|
Google Oneindia Kannada News

ಇಂಫಾಲ, ಜನವರಿ 14: ಈಶಾನ್ಯ ರಾಜ್ಯ ಮಣಿಪುರದಲ್ಲಿ ಚುನಾವಣೆ ಕಾವು ನಿಧಾನವಾಗಿ ಹೆಚ್ಚಾಗುತ್ತಿದೆ. ಈ ನಡುವೆ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ಸಂಘಟನೆಯೊಂದು ಚುನಾವಣಾ ಆಯೋಗದ ಮುಂದೆ ಮನವಿಯೊಂದನ್ನು ಇಟ್ಟಿದೆ. ಮಣಿಪುರದಲ್ಲಿ ಮತದಾನ ದಿನಾಂಕ ಭಾನುವಾರ ಎಂದು ನಿಗದಿ ಮಾಡಲಾಗಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ, ಚರ್ಚ್‌ಗೆ ಹೋಗಬೇಕು, ಮತದಾನ ದಿನಾಂಕ ಬದಲಾಯಿಸಿ ಎಂದು ಮನವಿ ಸಲ್ಲಿಸಲಾಗಿದೆ.

ಮಣಿಪುರ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ATSUM) ಫೆಬ್ರವರಿ 27, ಭಾನುವಾರದಂದು ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಮತದಾನವನ್ನು ಮತ್ತೊಂದು ದಿನಾಂಕಕ್ಕೆ ನಿಗದಿಪಡಿಸುವಂತೆ ಭಾರತದ ಚುನಾವಣಾ ಆಯೋಗವನ್ನು (EC) ಒತ್ತಾಯಿಸಿದೆ. ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಎರಡನೇ ಮತದಾನ ಮಾರ್ಚ್ 3 ರಂದು ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರ ಬರಲಿದೆ.

ಮಣಿಪುರದ ಜನಸಂಖ್ಯೆಯ ಶೇಕಡಾ 43 ರಷ್ಟು ಬುಡಕಟ್ಟು ಜನಾಂಗದವರು ಮತ್ತು ಪ್ರಧಾನವಾಗಿ ಕ್ರಿಶ್ಚಿಯನ್ನರು ಎಂದು ವಿದ್ಯಾರ್ಥಿಗಳ ಒಕ್ಕೂಟ ಹೇಳಿದೆ. ಭಾನುವಾರದಂದು, "ವಿಶ್ರಾಂತಿ ಮತ್ತು ಆರಾಧನೆಯ ದಿನ", ಅವರು ತಪ್ಪದೇ ಚರ್ಚ್‌ಗೆ ಹೋಗುತ್ತಾರೆ.

"ರಾಜ್ಯ ಚುನಾವಣಾ ಆಯೋಗವು ಅರ್ಹ ವಯಸ್ಕ ಮತದಾರರು ತಮ್ಮ ಮತ ಚಲಾಯಿಸಲು ಎಲ್ಲಾ ಅರ್ಹ ನಾಗರಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು" ಎಂದು ATSUM ಪ್ರಕಟಣೆಯಲ್ಲಿ ತಿಳಿಸಲಾಗಿದೆ. "ವಿಧಾನಸಭಾ ಕ್ಷೇತ್ರಗಳ ಮತದಾನದ ದಿನಾಂಕವನ್ನು ಭಾನುವಾರದಂದು ಬೀಳದ ಯಾವುದೇ ಅನುಕೂಲಕರ ದಿನಾಂಕಕ್ಕೆ ಮರು ನಿಗದಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಲಾಗಿದೆ." ಎಂದು ATSUM ತಿಳಿಸಿದೆ.

ಭಾನುವಾರದ ಮತದಾನದ ದಿನಾಂಕವು ಮಣಿಪುರದ ಬುಡಕಟ್ಟು ಜನರು ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಕಳವಳಕಾರಿ ವಿಷಯವಾಗಿದೆ ಎಂದು ಒಕ್ಕೂಟ ಹೇಳಿದೆ. ಚುನಾವಣಾ ಆಯೋಗವು ರಾಜ್ಯದ ಕ್ರೈಸ್ತ ಸಮುದಾಯದ ಆಧ್ಯಾತ್ಮಿಕ ಮೌಲ್ಯಗಳು, ನಂಬಿಕೆಗಳು ಮತ್ತು ಆಚರಣೆಗಳನ್ನು ಮೆಚ್ಚುವ ಸಂವೇದನೆ ಮತ್ತು ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಮಾರ್ಚ್ 10 ರಂದು ಫಲಿತಾಂಶ
ಐದು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ರಾಜ್ಯ ಚುನಾವಣೆಗಳು ನಡೆಯುತ್ತಿವೆ. ಇವುಗಳಲ್ಲಿ ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.

ದೇಶದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಹರಡುವಿಕೆ ವೇಗ ಹೆಚ್ಚಾಗಿದೆ. ಈ ಹಿನ್ನೆಲೆ ಜನವರಿ 15ರವರೆಗೂ ರೋಡ್ ಶೋ, ಚುನಾವಣಾ ಮೆರವಣಿಗೆ ಮತ್ತು ಪ್ರಚಾರಗಳನ್ನು ನಡೆಸದಂತೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಜನವರಿ 15ರ ನಂತರದಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುವುದಾಗಿ ಆಯೋಗ ತಿಳಿಸಿದೆ.

ಎಬಿಪಿ ನ್ಯೂಸ್-ಸಿವೋಟರ್ ಒಪಿನಿಯನ್ ಪೋಲ್ ಪ್ರಕಾರ, ಮುಂಬರುವ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಿಕಟ ಸ್ಪರ್ಧೆ ಏರ್ಪಡಲಿದ್ದು, ಈ ಬಾರಿ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಹೊರಬೀಳಲಿದೆ ಎಂದು ಸಮೀಕ್ಷೆಯ ವರದಿಯಿಂದ ತಿಳಿದುಬಂದಿದೆ. ಎಬಿಪಿ ನ್ಯೂಸ್-ಸಿವೋಟರ್ ಸಮೀಕ್ಷೆ ಪ್ರಕಾರ, 60 ಸ್ಥಾನಗಳ ಪೈಕಿ ಬಿಜೆಪಿಗೆ 23 ರಿಂದ 27 ಸ್ಥಾನಗಳು ಸಿಗುತ್ತವೆ. ಆಡಳಿತ ಪಕ್ಷಕ್ಕೆ ಕಠಿಣ ಪೈಪೋಟಿ ನೀಡಲಿರುವ ಕಾಂಗ್ರೆಸ್, 22-26 ಸ್ಥಾನಗಳನ್ನು ಪಡೆಯಬಹುದು. ಇದರ ಹೊರತಾಗಿ ಎನ್ ಪಿಎಫ್ ಪಕ್ಷವು 2 ರಿಂದ 6 ಸ್ಥಾನ, ಇತರರು 5 ರಿಂದ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಮಣಿಪುರದಲ್ಲಿ ಅತಂತ್ರ ಫಲಿತಾಂಶ ಹೊರಬೀಳಲಿದೆ.

Recommended Video

   ಟೆಸ್ಟ್ ಸರಣಿ ಸೋಲಿಗೆ ಯಾರು ಕಾರಣ ಎಂದು ತಿಳಿಸಿದ‌ Virat Kohli | Oneindia Kannada
   English summary
   The All Tribal Students’ Union of Manipur (ATSUM) has urged the election commission of India (EC) to reschedule the first phase of polling in the state which is scheduled for February 27, a Sunday. Manipur will vote in two phases and the second polling date is March 3.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X