Manipur violence: ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಮತ್ತೆ 3 ಮಂದಿ ಬಲಿ
ಇಂಪಾಲ, ಜೂನ್. 09: ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ಆರಂಭವಾಗಿರುವ ಹಿಂಸಾಚಾರ ಇನ್ನು ಮುಗಿದಿಲ್ಲ. ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಬುಡಕಟ್ಟು ಕುಕಿ ಪ್ರಾಬಲ್ಯದ ಹಳ್ಳಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಹೊಸ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂರನೆ ಗಾಯಾಳು ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಾವು ಇನ್ನೂ ಘಟನಾ ಸ್ಥಳವನ್ನು ತಲುಪಿಲ್ಲ"ಎಂದು ಅಧಿಕಾರಿ ಹೇಳಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚುರಚಂದ್‌ಪುರ ಜಿಲ್ಲೆಯ ಕುಕಿ ಗುಂಪುಗಳ ಒಕ್ಕೂಟವಾದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ (ಐಟಿಎಲ್‌ಎಫ್) ನಾಯಕರೊಬ್ಬರು, ದಾಳಿಕೋರರು ಆಲಿವ್ ಹಸಿರು ಬಣ್ಣದ ಧಿರಿಸನ್ನು ಧರಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
"ಗಲಾಟೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಭದ್ರತಾ ಸಿಬ್ಬಂದಿ ಇದ್ದಾರೆ ಎಂದು ಗ್ರಾಮಸ್ಥರು ಊಹಿಸಿದ್ದಾರೆ. ಭದ್ರತಾ ಪಡೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅವರು ಸಹಕರಿಸಿದ್ದಾರೆ. ಸ್ವಲ್ಪ ದೂರ ಹೋದ ಅವರು, ಇದ್ದಕ್ಕಿದ್ದಂತೆ ಗ್ರಾಮದ ಮೇಲೆ ದಾಳಿ ನಡೆಸಲು ಆರಂಭಿಸಿದ್ದಾರೆ" ಎಂದು ಬುಡಕಟ್ಟು ಸಮುದಾಯದ ಹೆಸರೆಳಲು ಇಚ್ಚಿಸದ ನಾಯಕರು ತಿಳಿಸಿದ್ದಾರೆ.
ಗುಂಡಿನ ಸದ್ದು ಕೇಳಿ ಸಮೀಪದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗುಂಡಿನ ಚಕಮಕಿ ನಡೆಸಿದ್ದಾರೆ. ಗುರುವಾರ ತಡರಾತ್ರಿ ಇಂಫಾಲ್ ಪಶ್ಚಿಮ ಜಿಲ್ಲೆಯ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಶಾಸಕ ಎಸ್ ಕೆಬಿ ಅವರ ಮನೆ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದಾಳಿಕೋರರು ಪ್ರತ್ಯೇಕವಾಗಿ ಗ್ರೆನೇಡ್ ಎಸೆದಿದ್ದಾರೆ. ಘಟನೆಯಲ್ಲಿ ಮನೆಯ ಗೇಟ್‌ಗೆ ಹಾನಿಯಾಗಿದ್ದು, ಯಾರಿಗೂ ಗಾಯಗಳಾಗಿಲ್ಲ.
ಮೇ 3 ರಂದು ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಕುಕಿಗಳು ಮತ್ತು ಇಂಫಾಲ್ ಕಣಿವೆಯಲ್ಲಿ ಪ್ರಬಲ ಸಮುದಾಯವಾದ ಮೈತೀಸ್ ನಡುವಿನ ಹಿಂಸಾಚಾರದಿಂದ ಇಲ್ಲಿಯವರೆಗೆ ಕನಿಷ್ಠ 105 ಜನರು ಸಾವನ್ನಪ್ಪಿದ್ದಾರೆ ಮತ್ತು 40,000 ಜನರು ತಮ್ಮ ಸ್ವಸ್ಥಳಗಳಿಂದ ರಕ್ಷಣಾ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಮೈತೀಸ್‌ಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ನ್ಯಾಯಾಲಯದ ಆದೇಶದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿದೆ. ಹಿಂಸಾಚಾರವು ತ್ವರಿತವಾಗಿ ರಾಜ್ಯವನ್ನು ಆವರಿಸಿದೆ. ಹಿಂಸಾಚಾರದಿಂದಾಗಿ ಅಧಿಕಾರಿಗಳು ಕರ್ಫ್ಯೂ ವಿಧಿಸಿ, ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ್ದಾರೆ. ಘರ್ಷಣೆಯ ನಡುವೆಯೇ ಹೆಚ್ಚುವರಿ ಭದ್ರತಾ ಪಡೆಗಳನ್ನು ರಾಜ್ಯಕ್ಕೆ ಕಳುಹಿಸಲಾಗಿದೆ. ಗೃಹ ಸಚಿವ ಅಮಿತ್ ಶಾ ಕೂಡ ಮಣಿಪುರಕ್ಕೆ ಮೂರು ದಿನಗಳ ಭೇಟಿ ನೀಡಿದ್ದರು.











Click it and Unblock the Notifications