ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಸೆಗಣಿಯನ್ನು ಲೇವಡಿ ಮಾಡಿದ್ದ ಪತ್ರಕರ್ತನ ಬಿಡುಗಡೆಗೆ ಹೈಕೋರ್ಟ್ ಆದೇಶ

|
Google Oneindia Kannada News

ಇಂಫಾಲ, ಜು.23: ಕೋವಿಡ್ ಚಿಕಿತ್ಸೆಗೆ ಹಸುವಿನ ಸೆಗಣಿ ಹಾಗೂ ಗೋಮೂತ್ರ ಶಿಫಾರಸು ಮಾಡಿದ್ದ ಬಿಜೆಪಿಯ ನಾಯಕನನ್ನು ಟೀಕೆ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಮಣಿಪುರ ಪತ್ರಕರ್ತ ಕಿಶೋರ್‌ ಚಂದ್ರ ವಾಂಗ್‌ಚೆಮ್ಚಾಗೆ ಮಣಿಪುರ ಹೈಕೋರ್ಟ್ ಶುಕ್ರವಾರ ಮಧ್ಯಂತರ ಬಿಡುಗಡೆ ನಿರ್ದೇಶಿಸಿದೆ.

ಪತ್ರಕರ್ತ ಕಿಶೋರ್‌ಚಂದ್ರ ವಾಂಗ್ಖೇಮ್, ಅಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಸೈಖೋಮ್ ತಿಕೇಂದ್ರ ಸಿಂಗ್ ಸಾವಿನ ಬಗ್ಗೆ ನೀಡಿದ ಪ್ರತಿಕ್ರಿಯೆಯ ಆಧಾರದಲ್ಲಿ ಬಂಧಿಸಲಾಗಿತ್ತು. ಕೋವಿಡ್‌ಗೆ ಗೋವಿನ ಮೂತ್ರ, ಸೆಗಣಿ ಚಿಕಿತ್ಸೆ ನೀಡಬಹುದು ಎಂದು ಹೇಳಿಕೊಂಡಿದ್ದ ಬಿಜೆಪಿ ಮುಖಂಡ ಕೋವಿಡ್‌ನಿಂದ ಸಾವನ್ನಪ್ಪಿದ ಸಂದರ್ಭ ಕಿಶೋರ್‌ಚಂದ್ರ ವಾಂಗ್ಖೇಮ್ ಪೋಸ್ಟ್‌ ಮಾಡಿ, ''ಗೋವಿನ ಸೆಗಣಿ, ಗೋ ಮೂತ್ರ ಕೆಲಸ ಮಾಡಿಲ್ಲ,'' ಎಂದು ಹೇಳಿದ್ದರು.

'5 ಗಂಟೆಯೊಳಗೆ ಬಿಡುಗಡೆ ಮಾಡಿ': ಮಣಿಪುರ ಹೋರಾಟಗಾರನ ಬಂಧನದ ಬಗ್ಗೆ ಸುಪ್ರೀಂ ಆದೇಶ'5 ಗಂಟೆಯೊಳಗೆ ಬಿಡುಗಡೆ ಮಾಡಿ': ಮಣಿಪುರ ಹೋರಾಟಗಾರನ ಬಂಧನದ ಬಗ್ಗೆ ಸುಪ್ರೀಂ ಆದೇಶ

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಲೈಚೋಂಬಮ್ ಎರೆಂಡ್ರೊ ಕೂಡಾ ಈ ರೀತಿಯೇ ಪೋಸ್ಟ್‌ ಮಾಡಿದ್ದರು. ಮಣಿಪುರ ಬಿಜೆಪಿ ಉಪಾಧ್ಯಕ್ಷ ಉಷಾಮ್ ದೇಬನ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ ಪ್ರೇಮಾನಂದ ಮೀಟೆ ಈ ಪೋಸ್ಟ್‌ಗಳು ಆಕ್ರಮಣಕಾರಿ ಎಂದು ದೂರು ನೀಡಿದ್ದರು. ಈ ಹಿನ್ನೆಲೆ ಇಬ್ಬರನ್ನು ಬಂಧಿಸಲಾಗಿತ್ತು.

Manipur HC Orders Release of Journalist Detained Over Facebook Post On Cow Dung

ಕಿಶೋರ್‌ಚಂದ್ರ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ನೊಬಿನ್ ಸಿಂಗ್, ಸಾಮಾಜಿಕ ಕಾರ್ಯಕರ್ತ-ಪತ್ರಕರ್ತ ಕಿಶೋರ್‌ಚಂದ್ರರನ್ನು ಇಂದು ಸಂಜೆ 5 ಗಂಟೆಯೊಳಗೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಿಶೋರ್‌ ಚಂದ್ರ ಪರ ವಕೀಲ ಚೊಂಗ್ಥಾಮ್ ವಿಕ್ಟರ್, ''ಬಿಡುಗಡೆ ಆದೇಶವನ್ನು ಅಂಗೀಕರಿಸಲಾಗಿದೆ. ಕಾನೂನುಬಾಹಿರ ಬಂಧನಕ್ಕೆ ಪರಿಹಾರದ ವಿಷಯವನ್ನು ಆಗಸ್ಟ್ 24 ರಂದು ಹೈಕೋರ್ಟ್ ತೀರ್ಪು ನೀಡಲಿದೆ. ಆದೇಶದ ನಕಲನ್ನು ಇನ್ನು ಅಪ್‌ಲೋಡ್‌ ಮಾಡಬೇಕಾಗಿದೆ,'' ಎಂದು ಹೇಳಿದ್ದಾರೆ.

 'ಹೋರಾಟಗಾರನ ತಂದೆಯ ಪರಿಹಾರ ಮನವಿಗೆ ಶೀಘ್ರ ಪ್ರತಿಕ್ರಿಯಿಸಿ': ಮಣಿಪುರ ಸರ್ಕಾರಕ್ಕೆ ಸುಪ್ರೀಂ 'ಹೋರಾಟಗಾರನ ತಂದೆಯ ಪರಿಹಾರ ಮನವಿಗೆ ಶೀಘ್ರ ಪ್ರತಿಕ್ರಿಯಿಸಿ': ಮಣಿಪುರ ಸರ್ಕಾರಕ್ಕೆ ಸುಪ್ರೀಂ

ಈ ಹಿಂದೆ ಸುಪ್ರೀಂ ಕೋರ್ಟ್ ಲೈಚೋಂಬಮ್ ಎರೆಂಡ್ರೊರ ಬಂಧನಕ್ಕೆ ಆದೇಶ ನೀಡಿತ್ತು. "ಅರ್ಜಿದಾರನನ್ನು ಬಂಧನದಲ್ಲಿ ಇರಿಸುವುದರಿಂದ 21 ನೇ ವಿಧಿ ಅನ್ವಯ ಜೀವನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ಈ ಹಿನ್ನೆಲೆ ಇಂದು ಸಂಜೆ 5 ಗಂಟೆಯೊಳಗೆ 1,000 ವೈಯಕ್ತಿಕ ಬಾಂಡ್‌ನೊಂದಿಗೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ," ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಶಾ ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
The Manipur High Court on Friday directed the interim release to Manipur journalist Kishorchandra Wangkhemcha who was detained under the National Security Act for a Facebook Post On Cow Dung.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X