Manipur Earthquake: ಬೆಳ್ಳಂಬೆಳಗ್ಗೆಯೆ ದಾಖಲಾಯ್ತು 3.5 ತೀವ್ರತೆಯ ಭೂಕಂಪ
ನವದೆಹಲಿ, ಜುಲೈ 21: ಮಣಿಪುರ ರಾಜ್ಯದ ಉಖ್ರುಲ್‌ನಲ್ಲಿ ತೀವ್ರ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.
ಶುಕ್ರವಾರ ಬೆಳಗ್ಗೆ 5.01ಕ್ಕೆ ಈ ತೀವ್ರ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರ ಕೇಂದ್ರ (NCS) ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ಇದರ ತೀವ್ರತೆಯನ್ನು ಇನ್ನೂ ವಿವರವಾಗಿ ಹೇಳುವುದಾದರೆ, ಈ ಭೂಕಂಪವು 20 ಕಿಲೋಮೀಟರ್ ಭೂಮಿಯ ಆಳದಲ್ಲಿ ಸಂಭವಿಸಿದೆ ಎಂದು ಕೇಂದ್ರವು ಮಾಹಿತಿ ನೀಡಿದೆ.

ಈ ಕುರಿತು ಟ್ವೀಟ್ ಭೂಕಂಪಶಾಸ್ತ್ರ ಕೇಂದ್ರ, ಭೂಕಂಪನ ತೀವ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಇದರ ತೀವ್ರತೆ 3.5 ಆದರೆ, ಲ್ಯಾಟ್- 24.99 ಮತ್ತು ಉದ್ದ- 94.21, ಭೂಮಿಯ ಆಳ- 20 ಕಿ.ಮೀ. ಉಖ್ರುಲ್ ಗ್ರಾಮದಲ್ಲಿ ಸಂಭವಿಸಿದೆ ಎಂದು ತಿಳಿಸಿದೆ. ಅದೃಷ್ಟವಶಾತ್ ಪ್ರಾಣಿ ಇನ್ನಿತರ ಹಾನಿ ಬಗ್ಗೆ ವರದಿ ಆಗಿದೆ.
Earthquake of Magnitude:4.4, Occurred on 21-07-2023, 04:09:38 IST, Lat: 26.88 & Long: 75.70, Depth: 10 Km ,Location: Jaipur, Rajasthan, India for more information Download the BhooKamp App https://t.co/hGAimUi1GZ @ndmaindia @Indiametdept @KirenRijiju @Dr_Mishra1966 @DDNewslive pic.twitter.com/EpQI2Ejk7Q
— National Center for Seismology (@NCS_Earthquake) July 20, 2023
ಶುಕ್ರವಾರ ಮುಂಜಾನೆ, ರಾಜಸ್ಥಾನದ ಜೈಪುರದಲ್ಲಿ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಭೂಕಂಪನಗಳು ಅನುಭವವಾಗಿದೆ. 3.4ರ ತೀವ್ರತೆಯ ಇತ್ತೀಚಿನ ಭೂಕಂಪವು 4.25 ರ ಸುಮಾರಿಗೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ. ಈ ಭೂಕಂಪನ ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ದೃಡಪಡಿಸಿದೆ.
ಬೆಳಗ್ಗೆ 4.09 ಕ್ಕೆ 4.4ರ ತೀವ್ರತೆಯ ಮೊದಲ ಭೂಕಂಪವು 10 ಕಿಲೋ ಮೀಟರ್ ಆಳದಲ್ಲಿ ಸಂಭವಿಸಿದೆ. ಎರಡನೆಯದು 3.1 ರ ತೀವ್ರತೆಯ 4.22ಕ್ಕೆ 5 ಕಿಲೋಮೀಟರ್ ಆಳದಲ್ಲಿ ಅನುಭವವಾಗಿದೆ.












Click it and Unblock the Notifications