ಕಾಶ್ಮೀರಿ ಪಂಡಿತರಂತೆ ನಾವು ಮಣಿಪುರದಲ್ಲಿ ಅಪಾಯದಲ್ಲಿದ್ದೇವೆ: ಮೈತೇಯಿ ಸಮುದಾಯ
ಮಣಿಪುರ, ಮೇ.19: ಮಣಿಪುರದಲ್ಲಿ ಉದ್ವಿಗ್ನತೆ ಮುಂದುವರಿದಂತೆ, ಬಹುಸಂಖ್ಯಾತ ಮೈತೇಯಿ ಗುಂಪಿನ ಸದಸ್ಯರು ತಮ್ಮ ಅನಿಶ್ಚಿತ ಪರಿಸ್ಥಿತಿಯನ್ನು ಕಾಶ್ಮೀರಿ ಪಂಡಿತರ ಪರಿಸ್ಥಿತಿಯೊಂದಿಗೆ ಹೋಲಿಸಿದ್ದಾರೆ. ತಮ್ಮದೇ ರಾಜ್ಯದಲ್ಲಿ ತಾವು "ಜನಾಂಗೀಯ ಶುದ್ಧೀಕರಣ"ದ ಅಪಾಯದಲ್ಲಿದ್ದೇವೆ ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಮೈತೇಯಿ ಕೌನ್ಸಿಲ್ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯಿಟ್ಟು ಪ್ರತಿಭಟಿಸಲು ಮೇ 3 ರಂದು ಹಲವು ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮಣಿಪುರದಲ್ಲಿ ಘರ್ಷಣೆಗಳು ನಡೆದವು. ರಾಜ್ಯದಲ್ಲಿ ಮೈತೇಯಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವಿನ ಹಿಂಸಾತ್ಮಕ ಘರ್ಷಣೆ ನಡೆದಿದೆ.
ಹಿಂಸಾಚಾರದ ಮೊದಲು ಕುಕಿ ಗ್ರಾಮಸ್ಥರನ್ನು ಮೀಸಲು ಅರಣ್ಯ ಭೂಮಿಯಿಂದ ಹೊರಹಾಕುವಾಗ ಉದ್ವಿಗ್ನತೆ ಉಂಟಾಗಿತ್ತು, ಇದು ಸಣ್ಣ ಪ್ರತಿಭಟನೆಗಳ ಸರಣಿಗೆ ಕಾರಣವಾಯಿತು. "ಮಣಿಪುರದಲ್ಲಿ ನಡೆದ ಘಟನೆಗಳು ಪೂರ್ವ ಯೋಜಿತವಾಗಿವೆ. ಈ ರೀತಿಯ ಏನಾದರೂ ಸಂಭವಿಸಬಹುದು ಎಂದು ನಾವು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದೇವೆ. ಇಂದು ನಾವು ಕಾಶ್ಮೀರಿ ಪಂಡಿತರು ಎದುರಿಸಿದಂತಹ ಪರಿಸ್ಥಿತಿಯಲ್ಲಿದ್ದೇವೆ" ಎಂದು ನಾಗರಿಕ ಸಮಾಜದ ಗುಂಪು ವರ್ಲ್ಡ್ ಮೈತೇಯಿ ಕೌನ್ಸಿಲ್ ಅಧ್ಯಕ್ಷ ನಬಶ್ಯಾಮ್ ಹೈಗ್ರುಜಮ್ ಹೇಳಿದ್ದಾರೆ.

"ನಾವು ನಮ್ಮ ರಾಜ್ಯದಲ್ಲಿ ಜನಾಂಗೀಯ ಶುದ್ಧೀಕರಣದ ಅಪಾಯದಲ್ಲಿದ್ದೇವೆ. ಒಂದು ವರ್ಷದಿಂದ ನಾವು ಅಮಿತ್ ಶಾ ಅವರೊಂದಿಗಿನ ಸಭೆಯನ್ನು ನಡೆಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇನ್ನೂ ಅಪಾಯಿಂಟ್‌ಮೆಂಟ್ ನೀಡಿಲ್ಲ" ಎಂದು ನಬಶ್ಯಾಮ್ ಹೈಗ್ರುಜಮ್ ತಿಳಿಸಿದ್ದಾರೆ.
"ಮೈತೇಯಿಗಳು ಮತ್ತು ನಾಗಾಗಳು ಮಣಿಪುರದ ಮೂಲ ಜನರು. ನಾವು ನಮ್ಮ ದೃಷ್ಟಿಕೋನವನ್ನು ಗೃಹ ಸಚಿವರಿಗೆ ಸಲ್ಲಿಸಲು ಬಯಸಿದ್ದೇವೆ. ನಾವು ಅವರೊಂದಿಗೆ ಕನಿಷ್ಠ ಐದು ನಿಮಿಷಗಳ ಕಾಲ ಮಾತನಾಡಲಿ ಎಂದು ಪ್ರಯತ್ನಿಸಿದ್ದೇವೆ. ನಾವು ಅರ್ಜಿಯನ್ನು ಸಲ್ಲಿಸಿದ್ದೇವೆ. ಆದರೆ ಈ ಬಿಕ್ಕಟ್ಟಿನ ಸಮಯದಲ್ಲೂ, ಗೃಹ ಸಚಿವರಿಗೆ ನಮ್ಮನ್ನು ಭೇಟಿ ಮಾಡಲು ಸಮಯವಿಲ್ಲ ಎಂಬುದು ನಮಗೆ ತುಂಬಾ ನೋವಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವ ಮೈತೇಯಿ ಕೌನ್ಸಿಲ್‌ನ ವಕ್ತಾರ ನಬಕಿಶೋರ್ ಸಿಂಘ ಯುಮ್ನಮ್ ಮಾತನಾಡಿ, ನಾಗಾ ಮತ್ತು ಕುಕಿಗಳಿಗೆ ಸರಿಸಮಾನವಾಗಿ ಮೈತೇಯಿಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡುವ ಮೂಲಕ ಸರ್ಕಾರದ ಪರವಾಗಿ ತುರ್ತು ಕ್ರಮದ ಅಗತ್ಯವಿದೆ ಎಂದಿದ್ದಾರೆ. ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರಾದ ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಮೇ 3 ರ ಜನಾಂಗೀಯ ಘರ್ಷಣೆಗಳಲ್ಲಿ 70 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡವು. ಈಶಾನ್ಯ ರಾಜ್ಯದಲ್ಲಿ ಜನ ಜೀವನವನ್ನು ಸಹಜ ಸ್ಥಿತಿಗೆ ತರಲು ಸುಮಾರು 10,000 ಸೇನೆ ಮತ್ತು ಅರೆಸೇನಾ ಸಿಬ್ಬಂ












Click it and Unblock the Notifications