Video: ಜೈ ಶ್ರೀರಾಮ ಎನ್ನುವಾಗ ನಿಂತಿತು ಹೃದಯದ ಬಡಿತ! ನಾಟಕದ ವೇದಿಕೆಯಲ್ಲಿ ವ್ಯಕ್ತಿಗೆ ಹೃದಯಾಘಾತ!

ಶ್ರೀರಾಮನ ಪಾತ್ರ ಮಾಡುವಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾದ ಹೃದಯಾವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಶಹಾದಾರದಲ್ಲಿ ರಾಮಲೀಲಾ ನಾಟಕ ನಡೆಯುತ್ತಿತ್ತು. 45 ವರ್ಷದ ಸುಶೀಲ್ ಕೌಶಿಕ್ ಭಗವಾನ್ ರಾಮನ ಪಾತ್ರ ಮಾಡುತ್ತಿದ್ದರು. ಅವರು ಶ್ರೀರಾಮನ ಪಾತ್ರ ಮಾಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ.

ದೆಹಲಿಯ ಶಹಾದಾರದಲ್ಲಿ ಅಕ್ಟೋಬರ್ 5ರ ಸಂಜೆ ಈ ಘಟನೆ ನಡೆದಿದೆ. ನವರಾತ್ರಿಯ ಸಂದರ್ಭದಲ್ಲಿ ದೇಶಾದ್ಯಂತ ರಾಮಲೀಲಾ ನಾಟಕವನ್ನು ಪ್ರದರ್ಶಿಸಲಾಗುತ್ತದೆ. ದೆಹಲಿಯ ಶಹಾದಾರದಲ್ಲೂ ಇದೇ ರೀತಿಯ ನಾಟಕ ಆಯೋಜಿಸಲಾಗಿತ್ತು. ಶಹಾದಾರ ದೆಹಲಿ ನಗರದಲ್ಲಿ ಯಮುನಾ ನದಿಯ ದಂಡದಲ್ಲಿರುವ ಭೌಗೋಳಿಕ ಪ್ರದೇಶವಾಗಿದೆ. ಇದು ದೆಹಲಿಯ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಈ ಪ್ರದೇಶದಲ್ಲಿ ರಾಮಲೀಲಾ ನಾಟಕವನ್ನು ನವರಾತ್ರಿ ನಿಮಿತ್ತ ಆಯೋಜಿಸಲಾಗಿತ್ತು.

Man suffers heart attack while portraying Sri Ram Video goes viral

ಜನ ಸಾಗರದ ಮುಂದೆ ವೇದಿಕೆಯಲ್ಲಿ ಸೀತಾ ಸ್ವಯಂವರದ ದೃಶ್ಯ ನಡೆಯುತ್ತಿತ್ತು. ಈ ವೇಳೆ ಸುಶೀಲ್ ಕೌಶಿಕ್ ಅವರೂ ಕೂಡ ಇದ್ದರು. ವೇದಿಕೆಯ ಮೇಲೆ ಶ್ರೀರಾಮನ ವೇಷ ತೊಟ್ಟ ಸುಶೀಲ್ ಹಾಡು ಹಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ನೋವು ತಾಳಲಾರದೆ ವೇದಿಕೆಯ ಮಧ್ಯದಿಂದ ಹಿಂದೆ ಹೋಗಿ ಅಲ್ಲೇ ಬಿದ್ದಿದ್ದಾರೆ. ಅಲ್ಲಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್ ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಈ ಘಟನೆಯ ವಿಡಿಯೋ ಕೂಡ ಹೊರಬಿದ್ದಿದ್ದು, ಇದರಲ್ಲಿ ಸುಶೀಲ್ ಕೌಶಿಕ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ಸ್ವಯಂವರದಲ್ಲಿ ಲಕ್ಷ್ಮಣ ಸಂಭಾಷಣೆ ಮುಗಿದ ನಂತರ, ಸುಶೀಲ್ ಅವರು ರಾಮನ ಬಿಲ್ಲು ಮುರಿಯಲು ಎದ್ದು ನಿಂತರು. ನಂತರ ಸುಶೀಲ್ ಅವರು ಹಾಡಲು ಪ್ರಾರಂಭಿಸುತ್ತಾರೆ. ಆಗ ಅವರಿಗೆ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರು ತಮ್ಮ ಎದೆಯ ಮೇಲೆ ಕೈಯಿಟ್ಟು ವೇದಿಕೆ ಮೇಲೆ ಕುಸಿದು ಬಿದ್ದಿದ್ದಾರೆ.

ಈ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಪಾತ್ರ ಮಾಡುವಾಗ ಪಾತ್ರಧಾರಿ ಸಾವನ್ನಪ್ಪಿರುವ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಇಂತಹ ಘಟನೆಗಳು ನಡೆದಿವೆ. ಅಷ್ಟಕ್ಕೂ ಸಣ್ಣ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಗುರಿಯಾಗುತ್ತಿರುವವರ ಸಂಖ್ಯೆ ಯಾಕೆ ಹೆಚ್ಚಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಯಾಕೆ ಹೆಚ್ಚುತ್ತಿವೆ?

ವಾಸ್ತವವಾಗಿ ಕಳೆದ ಕೆಲವು ವರ್ಷಗಳಲ್ಲಿ, ಜನರು ಹೃದಯಾಘಾತದಿಂದ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ತಜ್ಞರ ಪ್ರಕಾರ, ಯುವಕರಲ್ಲಿ ಹೃದಯಾಘಾತಕ್ಕೆ ಕೆಟ್ಟ ಜೀವನಶೈಲಿ ಮುಖ್ಯ ಕಾರಣವಾಗಿದೆ. ವ್ಯಾಯಾಮದ ಕೊರತೆ, ಎಣ್ಣೆಯುಕ್ತ ಆಹಾರ ಮತ್ತು ಜಂಕ್ ಫುಡ್ ಸಂಸ್ಕೃತಿ ಬಹಳಷ್ಟು ಹೆಚ್ಚಾಗಿದೆ. ನಿದ್ರೆಯ ಕೊರತೆ ಮತ್ತು ಧೂಮಪಾನ ಹಾಗೂ ಮದ್ಯಪಾನದಿಂದ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ.

ಹೃದಯಾಘಾತದ ಆರಂಭಿಕ ಚಿಹ್ನೆಗಳು?

- ಎದೆಯಲ್ಲಿ ನಿರಂತರ ನೋವು

- ಜೀರ್ಣಕಾರಿ ಸಮಸ್ಯೆಗಳು

- ತೋಳುಗಳು, ಕುತ್ತಿಗೆ ಮತ್ತು ದವಡೆಗಳಲ್ಲಿ ನೋವು

- ಉಸಿರಾಟದ ತೊಂದರೆ

- ಹಠಾತ್ ದೇಹದ ಉಷ್ಣತೆ ಅಥವಾ ತ್ವರಿತ ತಂಪಾಗುವಿಕೆ

- ಎಸಿಯಲ್ಲಿ ಕುಳಿತ ನಂತರವೂ ಬೆವರುವುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+