Video: ಪ್ರಧಾನಿ ಭಾಷಣ ಮಾಡುತ್ತಿರುವಾಗಲೇ ಪೆಂಡಾಲ್ ಬೋಲ್ಟ್ ತೆಗೆದ ಭೂಪ ಅರೆಸ್ಟ್
ಗಾಂಧಿನಗರ, ನವೆಂಬರ್ 03: ಗುಜರಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವಾಗಲೇ ಸಾರ್ವಜನಿಕವಾಗಿ ಹಾಕಲಾದ ಪೆಂಡಾಲ್‌ನಿಂದ ಬೋಲ್ಟ್ ಅನ್ನು ತೆಗದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 31ರಂದು ಥರಾಡ್‌ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯಲ್ಲಿನ ವಿಡಿಯೋವೊಂದು ವೈರಲ್ ಆಗಿತ್ತು. ಒಂದು ಕಡೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಸಾರ್ವಜನಿಕ ಸಭೆಗಾಗಿ ಹಾಕಿದ್ದ ಮಂಟಪದ ಬೋಲ್ಟ್ ಅನ್ನು ಬಿಚ್ಚಿ, ತೆಗೆಯುತ್ತಿರುವುದು ವಿಡಿಯೋದಲ್ಲಿ ಗೋಚರಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯಿತು.
ವಿಡಿಯೋ ವೈರಲ್ ಆದ ನಂತರ ಬನಸ್ಕಾಂತ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ವೀಡಿಯೊದಲ್ಲಿ ನೋಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ತರಡ್ ಗ್ರಾಮದ ನಿವಾಸಿ ಎಂದು ಗೊತ್ತಾಗಿದೆ. ಈ ಮಧ್ಯೆ ಆತ, ಬೋಲ್ಟ್ ಅನ್ನು ತೆಗೆದುಹಾಕುವ ಉದ್ದೇಶವೇನು ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.
|
ಗುಜರಾತ್‌ನಲ್ಲಿ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಬನಸ್ಕಥಾದ ಥರಾಡ್‌ನಲ್ಲಿ 8000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಲವಾರು ನೀರಿನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಯೋಜನೆಯು ಗುಜರಾತ್‌ನ ಆರು ಜಿಲ್ಲೆಗಳ ಸುಮಾರು 1000 ಹಳ್ಳಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಗುಜರಾತ್‌ಗೆ ಭೇಟಿ ನೀಡಿದ್ದರು. ಗುಜರಾತಿನ ಕೆವಾಡಿಯಾದಲ್ಲಿ ಏಕತೆಯ ಪ್ರತಿಮೆಯಲ್ಲಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು. ಮೋರ್ಬಿಯಲ್ಲಿ ಸೇತುವೆ ಕುಸಿದು ಅಪಘಾತದಲ್ಲಿ ಗಾಯಗೊಂಡವರು ದಾಖಲಾಗಿರುವ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ ನೀಡಿದರು. ಅಪಘಾತ ಸಂಭವಿಸಿದ ಸೇತುವೆಗೂ ಭೇಟಿ ನೀಡಿದ್ದರು. ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ಪ್ರಧಾನಿ ಮೋದಿ ಜೊತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಹ ಇದ್ದರು.

ಮೋರ್ಬಿಯಲ್ಲಿ ಸೇತುವೆ ಕುಸಿದ ಸ್ಥಳಕ್ಕೆ ಪ್ರಧಾನಿ
ಮೋರ್ಬಿಯಲ್ಲಿ ದುರದೃಷ್ಟಕರ ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಜನರೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು. ಸ್ಥಳದ ಸುತ್ತಲೂ ನಡೆದಾಡಿದ ನಂತರ, ದುರಂತದಲ್ಲಿ ಬದುಕುಳಿದವರನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಮೊರ್ಬಿಯ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದರು. ಈ ಘಟನೆ ನಡೆದ ದಿನದಿಂದಲೂ ಪ್ರಧಾನಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದೇ ದಿನ ಮೊರ್ಬಿಯಲ್ಲಿರುವ ಪೊಲೀಸ್ ಅಧೀಕ್ಷಕರ ಕಚೇರಿಗೆ ಮೋದಿ ಭೇಟಿ ನೀಡಿದ್ದು, ಹಿರಿಯ ಪೊಲೀಸ್ ಮತ್ತು ವಲಯದ ಆಡಳಿತ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿದರು.

ಮೋರ್ಬಿ ತೂಗು ಸೇತುವೆ ದುರಂತದಲ್ಲಿ 140ಕ್ಕೂ ಹೆಚ್ಚು ಮಂದಿ ಸಾವು
ಕಳೆದ ಅಕ್ಟೋಬರ್ 30ರ ಭಾನುವಾರ ಮಚ್ಚು ನದಿಗೆ ವ್ಯಾಪಿಸಿರುವ ತೂಗು ಸೇತುವೆ ಕುಸಿದು ಸೇತುವೆಯ ಮೇಲಿದ್ದ ಎಲ್ಲರೂ ನೀರಿನಲ್ಲಿ ಮುಳುಗಿದ್ದು, 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಸೇತುವೆ ಮೇಲೆ ನಿಂತಿದ್ದ ಜನರು ಕ್ಷಣಮಾತ್ರದಲ್ಲಿ ಮುಳುಗಿಹೋದರು. ನದಿಯ ಸುತ್ತಮುತ್ತಲ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ವರದಿಗಳ ಪ್ರಕಾರ, ವಡೋದರಾದಿಂದ 300 ಕಿಮೀ ದೂರದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಸೇತುವೆಯು ಕೇವಲ 125 ಜನರ ತೂಕವನ್ನು ತೆಗೆದುಕೊಳ್ಳುತ್ತದೆ, ಆದರೆ ಘಟನೆ ಸಂಭವಿಸಿದಾಗ ಸೇತುವೆಯ ಮೇಲೆ ಸುಮಾರು 400 ಜನರು ಇದ್ದರು. ಒಟ್ಟು 180 ಮಂದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಯಶಸ್ವಿಯಾಗಿ ರಕ್ಷಿಸಿವೆ.
ಈ ದುರಂತದಲ್ಲಿ ಮೃತಪಟ್ಟವರಿಗೆ ತಲಾ 4 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಪ್ರಧಾನಮಂತ್ರಿ ವಿತ್ತೀಯ ನೆರವು ಘೋಷಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

ಅಕ್ಟೋಬರ್ 26ರಂದು ಸೇತುವೆಯಲ್ಲಿ ಪ್ರವೇಶ ಪುನಾರಂಭ
ಸುಮಾರು 7 ತಿಂಗಳ ಹಿಂದೆ ಕಾರ್ಯಾಚರಣೆಯ ಬಳಕೆಗಾಗಿ ಸೇತುವೆಯನ್ನು ಮುಚ್ಚಲಾಗಿತ್ತು. ಓರೆವಾ ಗ್ರೂಪ್ (ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್) ಹೆಸರಿನ ಖಾಸಗಿ ಕಂಪನಿಗೆ ಈ ವರ್ಷದ ಮಾರ್ಚ್‌ನಲ್ಲಿ ಸೇತುವೆಯನ್ನು ನವೀಕರಿಸಲು ಮತ್ತು ನಿರ್ವಹಿಸಲು ಗುತ್ತಿಗೆ ನೀಡಲಾಯಿತು. ಜುಲ್ತಾ ಪುಲ್ ಎಂದೂ ಕರೆಯಲ್ಪಡುವ ತೂಗು ಸೇತುವೆಯನ್ನು ಈ ವರ್ಷ ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಸೇತುವೆಯ ನವೀಕರಣ ಕಾರ್ಯ ಪೂರ್ಣಗೊಂಡ ನಂತರ ಮತ್ತೆ ತೆರೆಯಲಾಗಿತ್ತು.












Click it and Unblock the Notifications