ದೆಹಲಿ ಬಸ್‌ನಲ್ಲಿ ಯುವತಿಯ ಎದುರೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ: ಸಿಕ್ಕಿಬಿದ್ದಾಗ ಅಳಲು ಆರಂಭಿಸಿದ

ನವದೆಹಲಿ, ಡಿಸೆಂಬರ್‌ 05: ರಾಷ್ಟ್ರ ರಾಜಧಾನಿಯ ರೋಹಿಣಿ ಪ್ರದೇಶದ ಬಸ್‌ನಲ್ಲಿ ವ್ಯಕ್ತಿಯೊಬ್ಬ ಯುವತಿಯ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಡಿಟಿಸಿ ಕಂಡಕ್ಟರ್‌ ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆದರೆ, ಇನ್ನೂ ದೂರು ದಾಖಲಾಗದ ಕಾರಣ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್ ವಿಡಿಯೋ ಪ್ರಕಾರ, ಆರೋಪಿ ಮಂಗಳವಾರ ಡಿಟಿಸಿ ಬಸ್‌ನಲ್ಲಿ ಹಸ್ತಮೈಥುನ ಮಾಡಿಕೊಳ್ಳತ್ತಿದ್ದ. ಪಕ್ಕದಲ್ಲಿ ಯುವತಿ ಕುಳಿತಿದ್ದಳು. ಆಕೆ ಆತನನ್ನು ಬೈಯಲು ಆರಂಭಿಸಿದಳು. ಆಗ ಬಂದ ಡಿಟಿಸಿ ಕಂಡಕ್ಟರ್‌ ಸಂದೀಪ್ ಚಕಾರ ಆರೋಪಿಯನ್ನು ಹಿಡಿದಿದ್ದಾರೆ.

Man Masturbates Next To Girl On Delhi Bus, Starts Crying When He Is Caught

ಸಿಕ್ಕಿಬಿದ್ದ ನಂತರ ಆರೋಪಿ ಅಳುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆರೋಪಿ ಬಿಹಾರದ ನಿವಾಸಿಯಾಗಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಇನ್ನೂ ಯಾವುದೇ ದೂರು ದಾಖಲಾಗದ ಕಾರಣ ಆತನನ್ನು ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬುಧವಾರ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಉತ್ತರ ರೋಹಿಣಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುಮನ್ ನೇತೃತ್ವದಲ್ಲಿ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Man Masturbates Next To Girl On Delhi Bus, Starts Crying When He Is Caught

ತನ್ನ ಹೇಳಿಕೆಯನ್ನು ದಾಖಲಿಸಲು ಅಥವಾ ಈ ಸಂಬಂಧ ಯಾವುದೇ ದೂರು ನೀಡಲು ಸಂಪರ್ಕಿಸಿದರೂ ಸಂತ್ರಸ್ತೆ ನಿರಾಕರಿಸಿದಳು ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಯಾವುದೇ ದೂರು ಬಂದರೆ, ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿಯ ಘಟನೆಗಳು ದೆಹಲಿಯಲ್ಲಿ ಸಾರ್ವಜನಿಕವಾಗಿ ನಡೆಯುತ್ತಿರುವ ಜನರನ್ನು ಆತಂಕಕ್ಕೆ ತಳ್ಳಿದೆ.

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ವ್ಯಕ್ತಿ

ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಬಿಸಿನೆಸ್‌ ಕ್ಲಾಸ್‌ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ್ದಾನೆ. ಈ ಘಟನೆ ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದಿದೆ. ಈಗ ಈತನಿಗೆ ಶಿಕ್ಷೆ ವಿಧಿಸಲಾಗಿದೆ. ಒಂದು ತಿಂಗಳ ಕಾಲ ಈ ವ್ಯಕ್ತಿ ಯಾವುದೇ ವಿಮಾನವನ್ನು ಏರುವಂತಿಲ್ಲ.

Man Masturbates Next To Girl On Delhi Bus, Starts Crying When He Is Caught

ಕುಡಿದ ಮತ್ತಿನಲ್ಲಿ ವ್ಯಕ್ತಿಯು ಈ ಕೆಲಸ ಮಾಡಿದ್ದಾನೆ. ಸೀಟಿನಲ್ಲಿ ಕುಳಿತಿದ್ದ ಮಹಿಳೆಯ ಬ್ಯಾಗ್‌ ಹಾಗೂ ಸೀಟು ಹಸಿಯಾಗಿದೆ. ಆಕೆ ಸಿಬ್ಬಂದಿಗೆ ದೂರು ನೀಡಿದ್ದಾರೆ. ಆ ನಂತರ ಸಿಬ್ಬಂದಿ ಆಕೆಗೆ ತಮ್ಮ ಸೀಟನ್ನು ಬಿಟ್ಟು ಕೊಟ್ಟಿದ್ದಾರೆ. ಸ್ವಲ್ಪ ಸಮಯ ಕಳೆದ ಮೇಲೆ ಮರಳಿ ಸೀಟಿಗೆ ಹೋಗುವಂತೆ ಮಹಿಳೆಗೆ ಸಿಬ್ಬಂದಿ ಹೇಳಿದ್ದಾರೆ. ಹೋಗಿ ನೋಡಿದರೆ, ಸೀಟಿನಲ್ಲಿ ಪೇಪರ್‌ ಅನ್ನು ಹೊದಿಸಲಾಗಿತ್ತು. ಆ ನಂತರವೂ ಮೂತ್ರದ ದುರ್ವಾಸನೆ ಬರುತ್ತಿತ್ತು ಎಂದು ಮಹಿಳೆ ದೂರು ನೀಡಿದ್ದಾರೆ.

ಈ ಘಟನೆಯ ಬಗ್ಗೆ ಗೊತ್ತಾಗುತ್ತಿದಂತೆ ಏರ್‌ ಇಂಡಿಯಾ ಕಂಪನಿಯು ಮಹಿಳೆಗೆ ಕ್ಷಮೆ ಕೇಳಿದೆ. ಆರೋಪಿಯ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಪೊಲೀಸರಿಗೆ ಹೇಳಿತ್ತು. ಈಗ ವ್ಯಕ್ತಿಗೆ ಮೂವತ್ತು ದಿನಗಳ ಕಾಲ ನೋ ಫ್ಲೈಯಿಂಗ್‌ ಶಿಕ್ಷೆಯನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+