Get Updates
Get notified of breaking news, exclusive insights, and must-see stories!

ಮೃತ ಗೆಳತಿಯನ್ನು ಮದುವೆಯಾದ ವ್ಯಕ್ತಿ: ತನ್ನ ಜೀವನದುದ್ದಕ್ಕೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ

ಗುವಾಹಟಿ, ನವೆಂಬರ್ 21: ನನ್ನ ಮದುವೆ ಹಾಗ್‌ ಇರಬೇಕು ಹೀಗ್ ಇರಬೇಕು ಅನ್ನೋ ಆಸೆ ಇನ್ನೋದು ಸಾಮಾನ್ಯ. ಅಪ್ಪಿ ತಪ್ಪಿ ಇವತ್ತು ಚೆನ್ನಾಗಿದ್ದು ನಾಳೆ ಒಂದು ದಿನ ಏನಾದ್ರೂ ಆಗಿ ಕೈನೋ ಕಾಲೋ ಕಳೆದುಕೊಂಡು ಬಿಟ್ಟರೆ ಅಂಥವರಿಗೆ ಜೀವನ ಕೊಡುವುದಿರಲಿ ಅವರತ್ತ ಮುಖ ಮಾಡಿ ನೋಡುವುದು ಕಷ್ಟ ಇರುವ ಈಗಿನ ಕಾಲದಲ್ಲಿ ಹೀಗೊಂದು ವಿಶೇಷ ಮದುವೆ ನಡೆದಿದೆ. ಹಾಗಂತಾ ಇಲ್ಲಿ ಕುಂಟರಿಗೋ ಕುರುಡರಿಗೋ ಜೀವನ ನೀಡಲಾಗಿಲ್ಲ. ಬದಲಿಗೆ ಇಲ್ಲಿ ಜೀವನದ ನೀಡಿದ್ದು ಒಂದು ಶವಕ್ಕೆ. ಆಶ್ಚರ್ಯ ಅನಿಸಿದರೂ ಇದು ನಿಜಾನೇ.

ಅಸ್ಸಾಂನ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ತನ್ನ ದೀರ್ಘಕಾಲದ ಗೆಳತಿಯೊಂದಿಗೆ ಯುವಕ ಮದುವೆಯಾದ ಹೃದಯ ವಿದ್ರಾವಕ ಘಟನೆ ಇದು. ಮಾತ್ರವಲ್ಲದೆ ಆತ ತನ್ನ ಜೀವನದುದ್ದಕ್ಕೂ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ. ಈ ವಿವಾಹವನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Man Marries Dead Girlfriend in assams Guwahati, Pledges Not to Marry All His Life

ಯುವಕನನ್ನು 27 ವರ್ಷದ ಯುವಕ ಬಿಟುಪಾನ್ ತಮುಲಿ ಎಂದು ಗುರುತಿಸಲಾಗಿದೆ. ಮೃತ ಗೆಳತಿಗೆ ಈತ ನೈಜ ಮದುವೆಯಲ್ಲಿ ಮಾಡುವಂತೆ ಹುಡುಗಿಯ ಹಣೆ ಮತ್ತು ಕೆನ್ನೆಗೆ ಸಿಂಧೂರವನ್ನು ಹಚ್ಚುತ್ತಿರುವುದನ್ನು ವೈರಲ್ ವಿಡಿಯೊ ತೋರಿಸುತ್ತದೆ. ಯುವಕ ನೆಲದ ಮೇಲೆ ಮಲಗಿರುವ ಹುಡುಗಿಯ ಕುತ್ತಿಗೆಗೆ ಮಾಲೆಯನ್ನು ಹಾಕಿದನು. ಮದುವೆಯಾಗುವಂತೆ ಆತ ಮೃತ ದೇಹಕ್ಕೆ ಕುಂಕುಮ ಇಟ್ಟಿದ್ದಾನೆ. ಆ ವ್ಯಕ್ತಿ ತಾನು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ವಾಗ್ದಾನ ಮಾಡಿದನು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+