ತಮ್ಮ ಡ್ರೈವರ್, ಅಡುಗೆ ಭಟ್ಟರ ಹೆಸರಲ್ಲಿ 25 ಸಾವಿರ ಇನ್ವೆಸ್ಟ್ ಮಾಡಿದ ಓನರ್, ಎಲ್ಲರೂ ಹೀಗಿದ್ರೆ ಎಷ್ಟು ಚಂದ!

ಮನೆ ಕೆಲಸದವರಿಗೆ ತಿಂಗಳಿಗೆ ಇಂತಿಷ್ಟು ಅಂತ ಸಂಬಳ ಸಿಗುತ್ತದೆ ನಿಜ. ಆದರೆ ಅವರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಎನ್ನುವುದು ಇರುವುದಿಲ್ಲ. ಕೆಲಸದಲ್ಲಿ ಇರುವವರೆಗೆ ಅಡುಗೆ ಮಾಡುವುದು, ಕಸ ಗುಡಿಸುವುದು ಒರೆಸುವುದು, ಪಾತ್ರೆ ತೊಳೆಯುವುದು, ಡಸ್ಟಿಂಗ್‌ ಮಾಡೋದು ಹೀಗೆ ತಾವು ಯಾವ ಕೆಲಸವನ್ನು ವಹಿಸಿಕೊಂಡಿರುತ್ತಾರೆಯೋ ಅವುಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾ ಹೋಗುತ್ತಾರೆ.

ಆಫೀಸ್‌ ಕೆಲಸಕ್ಕೆ ಹೋಗುವವರಿಗೆ ತಿಂಗಳ ಸಂಬಳದ ಜೊತೆಗೆ ಒಂದಿಷ್ಟು ರಜೆ, ಪಿಎಫ್‌, ಇಎಸ್‌ಐ, ಪಿಂಚಣಿ ಹೀಗೆ ಬೇರೆ ಬೇರೆ ರೀತಿಯ ಸವಲತ್ತುಗಳು ಸಿಗುತ್ತವೆ. ಆದರೆ ಮನೆಕೆಲಸದವರು ಹಾಗಲ್ಲ. ವರ್ಷಗಳ ಕಾಲ ಕೆಲಸ ಮಾಡಿದರೂ ನೌಕರರು ಸಾಮಾನ್ಯವಾಗಿ ಅನುಭವಿಸುವ ಆರ್ಥಿಕ ಭದ್ರತೆ ಅವರಿಗಿರುವುದಿಲ್ಲ. ಕೆಲವೊಂದು ಕಡೆ ವಾರದ ರಜೆಯೂ ಇರುವುದಿಲ್ಲ.

Man Investing Money On Driver nd Cook Under Kisan Vikas Patra To Provide Finance Stability Viral News

ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಇಬ್ಬರು ಕೆಲಸದವರಿಗೆ ಈ ಆರ್ಥಿಕ ಭದ್ರತೆಯನ್ನು ಕೊಡೋದಕ್ಕೆ ಮುಂದಾಗಿದ್ಧಾರೆ. ಅವರ ಈ ಕೆಲಸಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈ ವ್ಯಕ್ತಿ ತನ್ನ ಕೆಲಸದವರ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಎಲ್ಲರೂ ಇದೇ ರೀತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕೆಲಸದವರಿಗಾಗಿ ಪ್ರತೀ ವರ್ಷ ಹೂಡಿಕೆ

X ಪೋಸ್ಟ್‌ನಲ್ಲಿ, ನರೇಶ್ ಎಂಬ ವ್ಯಕ್ತಿ ತಾನು ಮಾಡಿರುವ ಕೆಲಸದ ಬಗ್ಗೆ ವಿವರಿಸಿದ್ದಾರೆ. ತನ್ನ ಚಾಲಕ ಮತ್ತು ಮನೆಗೆಲಸದವರಿಗೆ ಯಾವುದೇ ರೀತಿಯ ಪಿಂಚಣಿ ಸಿಗುವುದಿಲ್ಲ, ಭವಿಷ್ಯ ನಿಧಿಯೂ ಅವರ ಬಳಿ ಇಲ್ಲ ಎನ್ನುವುದು ತಿಳಿಯುತ್ತದೆ. ಉಳಿತಾಯ, ಪಿಂಚಣಿ ಏನೂ ಇಲ್ಲದೆ ಇವರು ವೃದ್ಧಾಪ್ಯದಲ್ಲಿ ಹಣಕ್ಕಾಗಿ ಏನು ಮಾಡುತ್ತಾರೆ ಎಂದು ಯೋಚಿಸುತ್ತಾರೆ. ಅವರ ಆರ್ಥಿಕ ಭದ್ರತೆಗಾಗಿ ಏನಾದರೂ ಮಾಡಲೇ ಬೇಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಆದ್ದರಿಂದ ಅವರು 25,000 ರೂ. ಹೂಡಿಕೆ ಮಾಡುವ ಮೂಲಕ ಇಬ್ಬರ ಹೆಸರಿನಲ್ಲಿಯೂ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಖಾತೆಗಳನ್ನು ತೆರೆಯುವ ತೀರ್ಮಾನ ಮಾಡುತ್ತಾರೆ. ಅಡುಗೆಯವರು ಮತ್ತು ಚಾಲಕನ ಹೆಸರಿನಲ್ಲಿ 25,000 ರೂ.ಗಳನ್ನು ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡುವ ಮೂಲಕ ಒಂದು ಮುಖ್ಯ ಹೆಜ್ಜೆ ಇಡುತ್ತಾರೆ. ಈ ಮೊತ್ತ 10 ವರ್ಷಗಳಲ್ಲಿ ಡಬಲ್‌ ಆಗುತ್ತದೆ. ಪ್ರತಿ ವರ್ಷ ಅದೇ ಮೊತ್ತವನ್ನು ಠೇವಣಿ ಮಾಡುವ ಬಗ್ಗೆ ನರೇಶ್‌ ಯೋಚಿಸುತ್ತಿದ್ದಾರೆ.

ಸಣ್ಣ ಉಳಿತಾಯ ಯೋಜನೆಯಿಂದ ಆರಂಭ

ಕಿಸಾನ್ ವಿಕಾಸ್ ಪತ್ರವು ಸರ್ಕಾರ ನಡೆಸುವ ಸಣ್ಣ ಉಳಿತಾಯ ಯೋಜನೆಯಾಗಿದೆ. ಇದು ಹೂಡಿಕೆದಾರರಿಗೆ ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ಹಣವನ್ನು ಡಬಲ್‌ ಮಾಡಲು ಅವಕಾಶ ನೀಡುತ್ತದೆ. ಇಲ್ಲಿ ಪ್ರತಿ ವರ್ಷವೂ ಇವರಿಬ್ಬರ ಖಾತೆಯಲ್ಲಿ ಹೂಡಿಕೆ ಮಾಡುತ್ತಾ ಹೋಗಬೇಕು ಎನ್ನುವುದು ನರೇಶ್‌ ಅವರ ಆಸೆ. ವರ್ಷಗಳು ಕಳೆಯುತ್ತಿದ್ದ ಹಾಗೆ ಈ ಮೊತ್ತ ಅವರ ಕೆಲಸದವರಿಗೆ ಆರ್ಥಿಕ ಭದ್ರತೆಯನ್ನು ನೀಡುವುದರಲ್ಲಿ ಸಂದೇಹ ಇಲ್ಲ.

ಎಲ್ಲರೂ ಈ ರೀತಿ ಮಾಡುವಂತೆ ಸಲಹೆ

ನಿಮ್ಮಲ್ಲಿ ಕೂಡಾ ನಿಷ್ಠಾವಂತ ಕೆಲಸಗಾರರಿದ್ದರೆ ಅವರ ನಿವೃತ್ತಿಗಾಗಿ ಸಣ್ಣ ಹೂಡಿಕೆ ಮಾಡುವ ಬಗ್ಗೆ ಯೋಚಿಸಬಹುದು ಎಂದು ನರೇಶ್‌ ಸಲಹೆ ಕೊಡ್ತಾರೆ. ಮೊದಲಿಗೆ 10,000 ರೂ.ಗಳಿಂದ ಪ್ರಾರಂಭಿಸಬಹುದು. ಇದು ಅವರ ವೃದ್ಧಾಪ್ಯದಲ್ಲಿ ಅವರಿಗೆ ಸ್ವಲ್ಪ ಮಟ್ಟಿಗಾದರೂ ಹಣದ ಸಹಾಯವನ್ನು ಮಾಡಬಹುದು ಎಂದು ಹೇಳಿದ್ಧಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ

ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ನೌಕರರ ನಿಯಮಿತ ಸಂಬಳವನ್ನು ಮೀರಿ ಅವರ ದೀರ್ಘಕಾಲೀನ ಆರ್ಥಿಕ ಭದ್ರತೆಯ ಬಗ್ಗೆ ಯೋಚಿಸಿದ್ದಕ್ಕಾಗಿ ಅನೇಕರು ನರೇಶ್ ಅವರನ್ನು ಶ್ಲಾಘಿಸಿದ್ದಾರೆ. ಒಬ್ಬರು ಇದು ತುಂಬಾ ಉದಾತ್ತ ಮತ್ತು ಒಳ್ಳೆಯ ಕಾರ್ಯ ಎಂದು ಹೇಳಿದ್ದಾರೆ. ಅವರು ವೃದ್ಧಾಪ್ಯದವರೆಗೆ ಅಥವಾ ದೈಹಿಕವಾಗಿ ಕೆಲಸ ಮಾಡಲು ಸಾಧ್ಯವಾಗುವವರೆಗೆ ನಿಮ್ಮೊಂದಿಗೆ ಇರಬೇಕು ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ಒಳ್ಳೆಯ ಬೆಳವಣಿಗೆ ಆದರೆ ಪ್ರಾಮಾಣಿಕ ಮತ್ತು ನಿಷ್ಠಾವಂತ ಕೆಲಸದವರು ಸಿಗುವುದು ಕಷ್ಟ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ, ನನ್ನ ತಂದೆ ತಮ್ಮ ಲೆಕ್ಕ ಪತ್ರ ನೋಡಿಕೊಳ್ಳುತ್ತಿದ್ದವರಿಗಾಗಿ 25 ವರ್ಷಗಳಿಗೂ ಹೆಚ್ಚು ಕಾಲ ಹೂಡಿಕೆ ಮಾಡಿದ್ದಾರೆ. 2021 ರಲ್ಲಿ ಅವರು ನಿಧನರಾಗುವವರೆಗೂ ಪ್ರತಿ ತಿಂಗಳು ಅವರ ಹೆಸರಿನಲ್ಲಿ 1000 ರೂ.ಗಳ NSC ಖರೀದಿಸುತ್ತಾ ಬಂದಿದ್ದರು. ಇದು ಒಳ್ಳೆಯ ಕೆಲಸ ಇದನ್ನು ಮುಂದುವರಿಸಿ ಎಂದು ಹೇಳಿದ್ಧಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+