20% ಬಡ್ಡಿಯ 3 ಲೋನ್ ಇದ್ರೂ ಮ್ಯೂಚ್ಯುವೆಲ್ ಫಂಡ್‌ನಲ್ಲಿ ಹೂಡಿಕೆ: ಕ್ಷೌರಿಕನ ಲೆಕ್ಕಾಚಾರಕ್ಕೆ ನೆಟ್ಟಿಗರು ಶಾಕ್

ಹಣ ದುಡಿಯುವಷ್ಟೇ ಮುಖ್ಯ ಉಳಿತಾಯ ಮಾಡುವುದು. ಒಳ್ಳೆ ರಿಟರ್ನ್ ಕೊಡುವ ಸ್ಕೀಮ್​ ನಲ್ಲಿ ಹೂಡಿಕೆ ಮಾಡಬೇಕು. ಹೆಚ್ಚಿನ ಆದಾಯನ್ನು ಪಡೆಯಲು ಅನೇಕ ಜನರು ಮ್ಯೂಚುವಲ್ ಫಂಡ್ ಗಳಲ್ಲಿ ಇನ್ವೆಸ್ಟ್ ಮಾಡುತ್ತಾರೆ. ಕೆಲವೊಮ್ಮೆ, ಹೂಡಿಕೆ ಮಾಡುವ ಭರದಲ್ಲಿ ಜನ ತಮ್ಮ ಸಾಲವನ್ನೇ ಮರೆತು ಬಿಡುತ್ತಾರೆ. ಅಂತಹದ್ದೇ ಒಂದು ಕೇಸ್ ಬಗ್ಗೆ ಸ್ಟಾರ್ಟ್ ಅಪ್ ಸಿಇಒ ಅಬಿದ್ ಹಸನ್ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸಾಲ ಇದ್ದರೂ ಇನವೆಸ್ಟ್ ಮೆಂಟ್

ಅವರು ಒಂದು ದಿನ ಹೇರ್​ ಕಟ್ ಮಾಡಿಸಿಕೊಳ್ಳುತ್ತಿದ್ದಾಗ ಕ್ಷೌರಿಕ ತಾನು ಮ್ಯೂಚುವಲ್ ಫಂಡ್ ನಲ್ಲಿ ಹಣ ಹಾಕುತ್ತಿರುವ ಬಗ್ಗೆ ಹೇಳಿದ್ದಾರೆ. ತನ್ನ ಮ್ಯೂಚುವಲ್ ಫಂಡ್ ಪೋರ್ಟ್ಫೋಲಿಯೊ ಬಗ್ಗೆ ಅಬಿದ್ ಹಸನ್ ಬಳಿ ಅಭಿಪ್ರಾಯ ಕೇಳಿದ್ದಾರೆ. ಮ್ಯೂಚುವಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡುವುದು ಒಳ್ಳೆಯದೇ. ಆದರೆ ಇಲ್ಲಿ ವ್ಯಕ್ತಿ ಬಳಿ ಮೂರು ಲೋನ್ ಕೂಡಾ ಇದೆ. ಇದರ ಮೇಲೆ ಶೇಕಡಾ 20 ಕ್ಕಿಂತ ಹೆಚ್ಚು ಬಡ್ಡಿ ಕೂಡಾ ಪಾವತಿಸಬೇಕು. ಈ ಘಟನೆಯ ನಂತರ, ಹಸನ್ ಜನರಿಗೆ ಹೂಡಿಕೆ ಮತ್ತು ಸಾಲಕ್ಕೆ ಸಂಬಂಧಿಸಿದ ಪ್ರಮುಖ ಸಲಹೆ ನೀಡಿದ್ದಾರೆ.

Mutual Fund

ಹೆಚ್ಚಿನ ಆದಾಯದ ನಿರೀಕ್ಷೆ

ಒಂದು ಕಡೆ ಇನವೆಸ್ಟ್ ಮೆಂಟ್ ಆದರೆ ಇನ್ನೊಂದು ಕಡೆ ಲೆಕ್ಕಕ್ಕಿಂತ ಹೆಚ್ಚು ಬಡ್ಡಿಯ ಲೋನ್. ಇದು ಎಲ್ಲಿಯ ಲೆಕ್ಕಾಚಾರ ಎಂದು ಹಸನ್ ಕೇಳಿದಾಗ, ತಮ್ಮ ಹೂಡಿಕೆಯಿಂದ ಶೇಕಡಾ 30 ಕ್ಕಿಂತ ಹೆಚ್ಚು ಆದಾಯ ಪಡೆಯುವ ನಿರೀಕ್ಷೆಯಿದೆ ಎನ್ನುವುದು ಕ್ಷೌರಿಕನ ವಾದ.

20% ಬಡ್ಡಿಯ ಸಾಲದ ನಡುವೆ ಹೂಡಿಕೆ

ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ ಪ್ರತಿ ಬಾರಿಯೂ ಹೆಚ್ಚಿನ ಆದಾಯ ಕೊಟ್ಟೇ ಕೊಡುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಹೂಡಿಕೆಯ ಮೌಲ್ಯ ಕೂಡಾ ಹೆಚ್ಚು ಕಡಿಮೆಯಾಗಬಹುದು. ಮತ್ತೊಂದೆಡೆ, ಸಾಲದ ಮೇಲಿನ ಬಡ್ಡಿ ಪಾವತಿಸದೆ ಇರಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿಯು ತನ್ನ ಸಾಲದ ಮೇಲೆ ಶೇಕಡಾ 20 ರಷ್ಟು ಬಡ್ಡಿ ಪಾವತಿಸುತ್ತಿದ್ದರೆ, ಹೂಡಿಕೆಯಿಂದ ಇದಕ್ಕಿಂತ ಹೆಚ್ಚಿನ ಆದಾಯ ಗಳಿಸುವುದು ಕಷ್ಟವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಮಾರುಕಟ್ಟೆಯಿಂದ ಲಾಭ ನಿರೀಕ್ಷಿಸುವುದಕ್ಕಿಂತ ದುಬಾರಿ ಸಾಲವದಿಂದ ಮುಕ್ತಿ ಪಡೆಯುವುದೇ ಜಾಣತನ.

ಮೊದಲು ಸಾಲ ತೀರಿಸುವುದೇ ಜಾಣತನ

ಯಾರಿಗೆ ಆಗಲಿ ಶೇಕಡಾ 10 ಕ್ಕಿಂತ ಹೆಚ್ಚು ಬಡ್ಡಿಯ ಸಾಲ ಇದ್ದರೆ, ಹೆಚ್ಚುವರಿ ಹೂಡಿಕೆ ಮಾಡುವ ಬದಲು ಸಾಲ ತೀರಿಸಬೇಕು ಎಂದು ಅಬಿದ್ ಹಸನ್ ಸಲಹೆ ನೀಡಿದ್ದಾರೆ. ಇದು ಬಡ್ಡಿ ಹೊರೆ ಕಡಿಮೆ ಮಾಡುತ್ತದೆ. ಆರ್ಥಿಕ ಸ್ಥಿತಿ ಬಲಪಡಿಸಲು ಸಹಾಯ ಮಾಡುತ್ತದೆ.

ಸಾಲದ ಕಂತನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದಿದ್ದರೆ ಫೈನ್ ಕೂಡಾ ಕೊಡಬೇಕಾಗುತ್ತದೆ. ದಂಡ ಮತ್ತು ಹೆಚ್ಚುವರಿ ವೆಚ್ಚಗಳು ಹೆಚ್ಚಾಗಬಹುದು. ಒದು ವೇಳೆ ಭವಿಷ್ಯದಲ್ಲಿ ಕೆಲಸ ಇಲ್ಲ ಎಂದಾದರೆ ಸಾಲ ತೀರಿಸುವುದು ಕಷ್ಟಕರವಾಗಬಹುದು. ಮನೆಗೆಲಸದವರು, ಬ್ಲೂ ಕಾಲರ್ ನೌಕರರು ಮತ್ತು ಕಡಿಮೆ ಅನುಭವ ಹೊಂದಿರುವವರು ಈ ವಿಚಾರ ತಿಳಿದುಕೊಳ್ಳುವುದು ಬಹಳ ಮುಖ್ಯ.

ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕಾಮೆಂಟ್

ಕೆಲವರು ಮ್ಯೂಚುವಲ್ ಫಂಡ್ ಉಳಿತಾಯದ ಸಾಧನ ಎಂದು ಹೇಳಿದ್ದಾರೆ. ಸಾಲವನ್ನು ಪ್ರತ್ಯೇಕ ಜವಾಬ್ದಾರಿಯಾಗಿ ಪರಿಗಣಿಸುತ್ತಾರೆ ಎಂದು ಹೇಳಿದರು. ಒಬ್ಬ ಬಳಕೆದಾರರು ತಮ್ಮ ಸ್ನೇಹಿತ ಸಾಲವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಇದು 24 ಪ್ರತಿಶತಕ್ಕಿಂತ ಹೆಚ್ಚು ಪರಿಣಾಮಕಾರಿ ವಾರ್ಷಿಕ ಬಡ್ಡಿದರವನ್ನು ಹೊಂದಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+