ಕೇರಳ: ಕ್ಯೂನಲ್ಲಿ ನಿಂತಿದ್ದ ವ್ಯಕ್ತಿಸಾವು, ಮತ್ತೊಬ್ಬ ಆತ್ಮಹತ್ಯೆ

Posted By:
Subscribe to Oneindia Kannada

ತಿರುವನಂತಪುರಂ, ನವೆಂಬರ್, 22: ನೋಟು ನಿಷೇಧ ಪರಿಣಾಮದಿಂದ ಮತ್ತಿಬ್ಬರ ಜೀವನ ದಾರುಣವಾಗಿ ಅಂತ್ಯಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಸಹಕಾರಿ ಬ್ಯಾಂಕ್ ವೊಂದರಲ್ಲಿ ಹಣ ಉಳಿತಾಯ ಮಾಡಿದ್ದ ಹಿರಿಯ ನಾಗರಿಕರೊಬ್ಬರು ತಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.[33 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು!]

Man Commits Suicide, Another Collapses And Dies In Kerala

ಕೊಟ್ಟಾಯಂ ಜಿಲ್ಲೆ ಪಂಬಾ ಕಣಿವೆಯ ಚೆರುವಿಲ್ಲಾಯಿಲ್ ಗ್ರಾಮದ ಒಮನಕುಟ್ಟನ್ ಪಿಳ್ಳೈ (73) ಎಂಬುವವರು ಸೋಮವಾರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಳ್ಳೈ ಅವರು ಸ್ಥಳೀಯ ಸಹಕಾರಿ ಬ್ಯಾಂಕ್ ವೊಂದರಲ್ಲಿ ರೂ. 5ಲಕ್ಷ ಹಣ ಖಾತೆಗೆ ಜಮಾ ಮಾಡಿದ್ದರು. ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಮಾಡಿದ ನಂತರ ತನ್ನ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ಹಣ ವಿನಿಮಯಕ್ಕಾಗಿ ಕ್ಯೂಲೈನ್ ನಲ್ಲಿ ನಿಂತಿದ್ದ ಕೊಲ್ಲಂ ಜಿಲ್ಲೆಯ ಚಂದ್ರಶೇಖರನ್(68) ಎಂಬುವವರು ಸಾವನ್ನಪ್ಪಿದ್ದಾರೆ.

ಚಂದ್ರಶೇಖರನ್ ಬಿಎಸ್ ಎನ್ ಎಲ್ ನಲ್ಲಿ ನಿವೃತ್ತ ಉದ್ಯೋಗಿಯಾಗಿದ್ದರು. ಟ್ರಾವಂಕೂರ್ ಸ್ಟೇಟ್ ಬ್ಯಾಂಕ್ ನ ನಳ್ಳಿಲಾ ಶಾಖೆಯಲ್ಲಿ ಹಣವಿನಿಮಯಕ್ಕಾಗಿ ಕ್ಯೂಲೈನ್ ನಲ್ಲಿ ನಿಂತಿದ್ದ ವೇಳೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An elderly man in Kerala allegedly ended his life fearing he would not be able to withdraw money deposited in a co-operative bank due to demonetisation and another person collapsed and died while standing in a queue in a bank, police said on Tuesday.
Please Wait while comments are loading...