₹13ಗೆ ಪ್ಲಾಸ್ಟಿಕ್‌ ಖರೀದಿಸಿ ರಿಸೈಕ್ಲಿಂಗ್‌ ಬ್ಯುಸಿನೆಸ್‌: ಪ್ರತಿ ತಿಂಗಳು ₹40 ಲಕ್ಷ ಆದಾಯ

ನಾವು ದಿನಾಲೂ ಬಹಳಷ್ಟು ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುತ್ತೇವೆ. ಪ್ಲಾಸ್ಟಿಕ್‌ ಅನ್ನು ಬಳಸುವುದಿಲ್ಲ ಎಂದು ಎಷ್ಟೇ ತೀರ್ಮಾನಿಸಿದರೂ ಕೆಲವೊಂದು ಸಲ ಪ್ಲಾಸ್ಟಿಕ್‌ ಬಳಸಲೇ ಬೇಕಾಗುತ್ತದೆ. ಹೀಗೆ ಬಳಸಿದ ಪ್ಲಾಸ್ಟಿಕ್‌ಗಳನ್ನು ಎಸೆದು ಬಿಡುತ್ತೇವೆ. ಕಸ ಎಂದು ಎಸೆದ ಪ್ಲಾಸ್ಟಿಕ್‌ ತ್ಯಾಜ್ಯದಿಂದಲೇ ಇಲ್ಲೊಬ್ಬ ವ್ಯಕ್ತಿ ತಿಂಗಳಿಗೆ 40 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ. ಇತ್ತೀಚೆಗೆ, ಒಬ್ಬ ಉದ್ಯಮಿಯ ವ್ಯವಹಾರ ಮಾದರಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವರು ಒಂದು ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು 13 ರೂ. ಕೊಟ್ಟು ಖರೀದಿ ಮಾಡುತ್ತಾರೆ. ನಂತರ ಅದನ್ನು ರಿಸೈಕಲ್‌ ಮಾಡುವ ಮೂಲಕ ಮಾರಾಟ ಮಾಡುತ್ತಿದ್ದಾರೆ.

ಪ್ರಥಮ್ ಎಂಬ ಬಳಕೆದಾರರು ತಮ್ಮ ಸೋದರ ಸಂಬಂಧಿಯ ಬಗೆಗಿನ ಆಸಕ್ತಿದಾಯಕ ಕಥೆಯನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಪ್ರಥಮ್ ಫ್ಯಾಮಿಲಿ ಫಂಕ್ಷನ್‌ನಲ್ಲಿ ತಮ್ಮ ಸೋದರಸಂಬಂಧಿಯನ್ನು ಭೇಟಿಯಾಗಿದ್ದಾರೆ. ಅವರು ಲಿಮಿಟೆಡ್‌ ಎಡಿಶನ್‌ ರೋಲೆಕ್ಸ್ ವಾಚ್‌ ಅನ್ನು ಕಟ್ಟಿಕೊಂಡಿರುವುದನ್ನು ಗಮನಿಸಿದ್ದಾರೆ. ಇದರಿಂದ ಪ್ರಥಮ್ ಕುತೂಹಲ ಹೆಚ್ಚಾಗಿದೆ. ತನ್ನ ಸಂಬಂಧಿ ಏನು ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಕೇಳಿದ್ದಾರೆ. ಆಗ ಆ ವ್ಯಕ್ತಿ ಪ್ಲಾಸ್ಟಿಕ್‌ ಬ್ಯುಸಿನೆಸ್‌ ಎಂದು ಸರಳವಾಗಿ ಉತ್ತರಿಸಿದ್ದಾರೆ. ಸಾಮಾನ್ಯ ಪ್ಲಾಸ್ಟಿಕ್ ಬ್ಯುಸುನೆಸ್‌ ಎಂದು ಪ್ರಥಮ್ ಸುಮ್ಮನಾಗಿದ್ದಾರೆ. ಆದರೆ, ಯಾವಾಗ ಈ ವ್ಯವಹಾರದ ಸಂಪೂರ್ಣ ಮರ್ಮ ಅರ್ಥವಾಯಿತೋ ‌ಪ್ರಥಮ್‌ ಕೂಡಾ ಆಶ್ಚರ್ಯಪಟ್ಟಿದ್ದಾರೆ.

Recycling Business

13 ರೂ. ಮೌಲ್ಯದ ಕಸ 90 ರೂ.ಗೆ ಮಾರಾಟ

ವೈರಲ್ ಆಗಿರುವ ಎಕ್ಸ್-ಪೋಸ್ಟ್ ಪ್ರಕಾರ, ಈ ವ್ಯವಹಾರವು ಸಂಪೂರ್ಣವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವುದರ ಮೇಲೆ ನಿಂತಿದೆ. ಬೇಡವೆಂದು ಎಸೆಯುವ ಪ್ಲಾಸ್ಟಿಕ್‌ ಬಾಟಲಿಗಳು, ಡಬ್ಬಿಗಳು ಮತ್ತು ಪ್ಲಾಸ್ಟಿಕ್ ಸ್ಕ್ರ್ಯಾಪ್‌ಗಳನ್ನು ಪ್ರತಿ ಕಿಲೋಗ್ರಾಂಗೆ ಸುಮಾರು 13 ರೂ ಕೊಟ್ಟು ಖರೀದಿಸುತ್ತಾರೆ. ನಂತರ ಕಾರ್ಖಾನೆಯಲ್ಲಿ ಈ ತ್ಯಾಜ್ಯವನ್ನು ವಿಂಗಡಿಸಿ, ಸ್ವಚ್ಛಗೊಳಿಸಿ, ಸಂಸ್ಕರಿಸಲಾಗುತ್ತದೆ. ಹೀಗೆ ಇದನ್ನು ಸಣ್ಣ ಪ್ಲಾಸ್ಟಿಕ್ ಕಣಗಳಾಗಿ ಪರಿವರ್ತಿಸಲಾಗುತ್ತದೆ. ನಂತರ ಈ ಮರುಬಳಕೆಯ ಕಣಗಳನ್ನು ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 80 ರಿಂದ 90 ರೂ.ಗೆ ಮಾರಾಟ ಮಾಡಲಾಗುತ್ತದೆ.

ಈ ಮರುಬಳಕೆಯ ಪ್ಲಾಸ್ಟಿಕ್ ಅನ್ನು ಎಲ್ಲಿ ಬಳಸಲಾಗುತ್ತದೆ?

ಈ ಮರುಬಳಕೆಯ ಪ್ಲಾಸ್ಟಿಕ್ ಗ್ರ್ಯಾನ್ಯುಲೇಟ್ ಅನೇಕ ಪ್ರಮುಖ ಕೈಗಾರಿಕೆಗಳಿಗೆ ಕಚ್ಚಾ ವಸ್ತುವಾಗುತ್ತದೆ. ಇದನ್ನು ಆಟೋಮೋಟಿವ್ ಭಾಗಗಳು, ಪ್ಯಾಕೇಜಿಂಗ್ ವಸ್ತುಗಳು, ಬಟ್ಟೆ ನಾರುಗಳು, ಪ್ಲಾಸ್ಟಿಕ್ ಪೈಪ್‌ಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ವ್ಯವಹಾರದಲ್ಲಿ ಪ್ರಮುಖ ಕಾರ್ಯವೆಂದರೆ ವಿವಿಧ ರೀತಿಯ ಪ್ಲಾಸ್ಟಿಕ್‌ಗಳನ್ನು ಸರಿಯಾಗಿ ವಿಂಗಡಿಸುವುದು. ಏಕೆಂದರೆ ಪ್ರತಿಯೊಂದು ಪ್ರಕಾರಕ್ಕೂ ವಿಭಿನ್ನ ಸಂಸ್ಕರಣಾ ವಿಧಾನದ ಅಗತ್ಯವಿರುತ್ತದೆ.

ಪ್ರತಿ ತಿಂಗಳು 50 ಟನ್ ಸರಕುಗಳು ಮತ್ತು 40 ಲಕ್ಷ ರೂ.ಗಳ ಮಾರಾಟ

ಆ ಪೋಸ್ಟ್‌ನಲ್ಲಿ ಕಾರ್ಖಾನೆಯು ಪ್ರತಿ ತಿಂಗಳು ಸರಿಸುಮಾರು 50 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸುತ್ತದೆ ಎಂದು ಹೇಳಲಾಗಿದೆ. ಪ್ರತಿ ಕೆಜಿಗೆ 80 ರೂ. ದರದಲ್ಲಿ ಮಾಸಿಕ 50 ಟನ್ ಸರಕುಗಳ ಮಾರಾಟದಿಂದ ಸುಮಾರು 40 ಲಕ್ಷ ರೂ. ಆದಾಯ ಬರುತ್ತದೆ. ಈ 40 ಲಕ್ಷ ಒಟ್ಟು ಮಾರಾಟದ ಅಂಕಿ ಅಂಶವಾಗಿದ್ದು, ತ್ಯಾಜ್ಯವನ್ನು ಖರೀದಿಸುವ ವೆಚ್ಚ, ಸಾಗಣೆ, ವಿದ್ಯುತ್, ಕಾರ್ಮಿಕ ಮತ್ತು ಸಂಸ್ಕರಣೆಯ ವೆಚ್ಚವನ್ನು ಕಡಿತಗೊಳಿಸಿದ ನಂತರ ನಿಜವಾದ ಲಾಭ ಎಷ್ಟು ಎಂದು ನಿರ್ಧಾರವಾಗುತ್ತದೆ.

ಕಸದ ಬಗ್ಗೆ ತಜ್ಞರ ಅಭಿಪ್ರಾಯ

ಭಾರತೀಯ ಸಾಮಾಜಿಕ ಉದ್ಯಮಿ ಮತ್ತು ಮಾಜಿ ಸಾಫ್ಟ್‌ವೇರ್ ಎಂಜಿನಿಯರ್ ಪ್ರವೀಣ್ ನಾಯಕ್ ಅವರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಗಾರ್ಬೇಜ್ ಕ್ಲಿನಿಕ್' ಎಂಬ ನವೀನ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಉದ್ಯಮವನ್ನು ಪ್ರಾರಂಭಿಸಿದರು. ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಕಸದಿಂದ ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು ಎಂದು ಹೇಳಿದ್ದಾರೆ.

ಬಿಯರ್ ಕ್ಯಾನ್‌ಗಳ ಮೂಲಕವೂ ಹಣವನ್ನು ಗಳಿಸಬಹುದು. ತ್ಯಾಜ್ಯ ವ್ಯವಹಾರಕ್ಕೆ ಹೋದಾಗ, 3 ಮಾದರಿಗಳಲ್ಲಿ ಗಳಿಕೆಗೆ ಅವಕಾಶ ಇದೆ. ಮೊದಲನೆಯದಾಗಿ, ಹಸಿ ಕಸವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸುವ ಮೂಲಕ ಹಣ ಗಳಿಸಬಹುದು. ಎರಡನೆಯದಾಗಿ, ಒಣ ಕಸವನ್ನು ಅದರ ಗುಣಮಟ್ದ ಆಧಾರದಲ್ಲಿ ಬೇರ್ಪಡಿಸಿ, ಮರುಬಳಕೆದಾರ ಅಥವಾ ಸ್ಕ್ರ್ಯಾಪ್ ಡೀಲರ್‌ಗೆ ಮಾರಾಟ ಮಾಡಿದರೆ, ಅದು ಹೊಸ ಆದಾಯದ ಮೂಲವಾಗುತ್ತದೆ. ಮೂರನೆಯ ವಿಧಾನವೆಂದರೆ ಬಳಕೆದಾರರ ಶುಲ್ಕಗಳು.

ಈ ಬ್ಯುಸಿನೆಸ್‌ ಐಡಿಯಾ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸೆಯುವ ಕಸದಿಂದ ಜನರು ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ ಎಂದು ಒಬ್ಬ ಬಳಕೆದಾರ ಅಭಿಪ್ರಾಯಪಟ್ಟಿದ್ದಾರೆ. ಇದು ತ್ಯಾಜ್ಯದಿಂದ ಸಂಪತ್ತು ಗಳಿಸುವ ದಾರಿ ಎಂದು ಮತ್ತೊಬ್ಬರು ಬರೆದಿದ್ದಾರೆ.

ಏನಿದು ವೇಸ್ಟ್‌ ಟು ವೆಲ್ತ್‌?

ವೇಸ್ಟ್‌ ಟು ವೆಲ್ತ್‌ ಎಂದರೆ ಬೇಡ ಎಂದು ಎಸೆಯುವ ತ್ಯಾಜ್ಯವನ್ನು ಮರುಬಳಕೆ ಮೂಲಕ ಸಂಸ್ಕರಿಸುವ ಪ್ರಕ್ರಿಯೆಯಾಗಿದೆ. ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವುದು ಮತ್ತು ಆ ತ್ಯಾಜ್ಯದಿಂದ ಹೊಸ ವ್ಯವಹಾರಗಳು, ಉತ್ಪನ್ನಗಳು ಅಥವಾ ಉದ್ಯೋಗವನ್ನು ಸೃಷ್ಟಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಕಸದ ಬುಟ್ಟಿಗೆ ಎಸೆಯುವ ತ್ಯಾಜ್ಯವನ್ನು ಸರಿಯಾದ ತಂತ್ರಜ್ಞಾನ ಮತ್ತು ಆಲೋಚನೆಯನ್ನು ಬಳಸಿಕೊಂಡು ಹಣ ಅಥವಾ ಉಪಯುಕ್ತ ಸಂಪನ್ಮೂಲಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+