ಭಯೋತ್ಪಾದನೆಗೆ ಹಣ ಪೂರೈಸುತ್ತಿದ್ದ ಆರೋಪ: ವ್ಯಕ್ತಿ ಬಂಧನ

ನವದೆಹಲಿ, ಆಗಸ್ಟ್‌ 20: ದೆಹಲಿ ಪೊಲೀಸರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಹವಾಲಾ ಮಾರ್ಗಗಳ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣವನ್ನು ಒದಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ದೆಹಲಿ ಪೊಲೀಸ್ ವಿಶೇಷ ಕೋಶದ ವಿಶೇಷ ಪೊಲೀಸ್ ಆಯುಕ್ತ ಎಚ್‌ಜಿಎಸ್ ಧಲಿವಾಲ್ ಪ್ರಕಾರ, ಈ ವ್ಯಕ್ತಿ ಲಷ್ಕರ್-ಎ-ತೈಬಾ ಮತ್ತು ಅಲ್-ಬದ್ರ್ ಎಂಬ ಭಯೋತ್ಪಾದಕ ಸಂಘಟನೆಗಳಿಗೆ ಹಣವನ್ನು ರವಾನಿಸಿದ್ದಾನೆ. ಹವಾಲಾ ಮಾರ್ಗಗಳ ಮೂಲಕ ಕಳುಹಿಸಲಾದ ಈ ಹಣವನ್ನು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

ಆರೋಪಿ ಮೊಹಮ್ಮದ್ ಯಾಸಿನ್ ದೆಹಲಿಯ ಟರ್ಕ್‌ಮನ್ ಗೇಟ್ ಪ್ರದೇಶದಲ್ಲಿ ವಾಸವಾಗಿದ್ದು, ಗಾರ್ಮೆಂಟ್ ವ್ಯವಹಾರ ನಡೆಸುತ್ತಿದ್ದ. ಕಳೆದ ವಾರ ಕಾಶ್ಮೀರದಲ್ಲಿರುವ ಅಬ್ದುಲ್ ಹಮೀದ್ ಮಿರ್ ಎಂಬ ಭಯೋತ್ಪಾದಕನಿಗೆ ಆತ ಸುಮಾರು 10 ಲಕ್ಷ ರೂಪಾಯಿಗಳನ್ನು ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Man arrested for providing financial support to terrorism

ಈ ಸಂಬಂಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಿರ್‌ನನ್ನು ಬಂಧಿಸಿದ್ದಾರೆ. ಆತನ ವಿಚಾರಣೆಯ ನಂತರ, ಯಾಸಿನ್ ನನ್ನು ಪತ್ತೆಹಚ್ಚಿ ಬಂಧಿಸಲಾಯಿತು. ಆತನಿಂದ ₹ 7 ಲಕ್ಷ ನಗದು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Man arrested for providing financial support to terrorism

ಪೊಲೀಸರ ಪ್ರಕಾರ, ಯಾಸಿನ್ ಹವಾಲಾ ಹಣದ ಪೂರೈಕೆದಾರನಾಗಿ ಆಗಿ ಕೆಲಸ ಮಾಡುತ್ತಿದ್ದ. ಅವರು ವಿದೇಶದಲ್ಲಿರುವ ತನ್ನ ಸಂಪರ್ಕಗಳಿಂದ ಹಣವನ್ನು ಪಡೆಯುತ್ತಿದ್ದರು. ನಂತರ ಈ ಹಣವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳಿಗೆ ರವಾನಿಸಿದ್ದರು. ವಿಚಾರಣೆಯ ವೇಳೆ, ದಕ್ಷಿಣ ಆಫ್ರಿಕಾದಿಂದ ಗುಜರಾತ್‌ನ ಸೂರತ್ ಮತ್ತು ಮುಂಬೈಗೆ ಹವಾಲಾ ನಗದು ರವಾನೆಯಾಗುತ್ತಿದೆ. ಈ ಯಾಸಿನ್ ಹವಾಲಾ ಸಿಂಡಿಕೇಟ್‌ನ ಪ್ರಮುಖ ಸಂಪರ್ಕವಾಗಿದ್ದಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+