ಬೆಂಗಳೂರು-ಮುಂಬೈ ವಿಮಾನದಲ್ಲಿ ಹಸ್ತಮೈಥುನ ಮಾಡಿದ ವ್ಯಕ್ತಿಯ ಬಂಧನ

ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ತನ್ನ ಪಕ್ಕದಲ್ಲಿದ್ದ ಮಹಿಳಾ ಪ್ರಯಾಣಿಕರ ಮುಂದೆ ಹಸ್ತ ಮೈಥುನ. 31 ವರ್ಷದ ಸಬೀನ್ ಹಮ್ಜಾ ಎಂಬ ವ್ಯಕ್ತಿಯನ್ನು ಬಂಧಿಸಿದ ಮುಂಬೈ ಪೊಲೀಸರು.

ಮುಂಬೈ, ಜುಲೈ 20: ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ತನ್ನ ಪಕ್ಕದಲ್ಲಿದ್ದ ಮಹಿಳಾ ಪ್ರಯಾಣಿಕರ ಮುಂದೆ ಹಸ್ತ ಮೈಥುನ ಮಾಡಿಕೊಂಡ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಂಗಳವಾರ (ಜು. 18) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜುಲೈ 18ರಂದು ಮುಂಜಾನೆ 6:30ಕ್ಕೆ ಆ ವಿಮಾನ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸಿದೆ. ಅದರಲ್ಲಿ ಕುಳಿತಿದ್ದ 31 ವರ್ಷದ ಸಬೀನ್ ಹಮ್ಜಾ ಪ್ರಯಾಣಿಸಿದ್ದ. ಆತನ ಪಕ್ಕದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಕುಳಿತಿದ್ದರು.

Man arrested for masturbating midair on Bengaluru-Mumbai flight

ವಿಮಾನ ಗಗನಕ್ಕೆ ಹಾರಿದ ಕೆಲವು ನಿಮಿಷಗಳ ನಂತರ, ಆ ಮಹಿಳೆ ಸೊಂಪಾದ ನಿದ್ರೆಗೆ ಜಾರಿದ್ದಾರೆ. ಈ ಸಂದರ್ಭದಲ್ಲಿ, ಹಮ್ಜಾ ವಿಮಾನದಲ್ಲೇ ಹಸ್ತ ಮೈಥುನಕ್ಕೆ ಮುಂದಾಗಿದ್ದಾನೆ. ಅಷ್ಟೇ ಅಲ್ಲ, ತನ್ನ ಮತ್ತೊಂದು ಕೈನಿಂದ ಪಕ್ಕದಲ್ಲಿದ್ದ ಮಹಿಳೆಯ ಕೈ ಮುಟ್ಟಿದ್ದಾನೆ.

ತಕ್ಷಣ ಕಣ್ಣುಬಿಟ್ಟ ಆಕೆ ಪಕ್ಕದಲ್ಲಿ ಆತ ಮಾಡುತ್ತಿದ್ದ ಘನಂದಾರಿ ಕೆಲಸ ನೋಡಿ ಚೀರಿಕೊಂಡಿದ್ದಾಳೆ. ತಕ್ಷಣವೇ ವಿಮಾನದ ಸಿಬ್ಬಂದಿ ಅಲ್ಲಿಗೆ ಧಾವಿಸಿದ್ದಾರೆ. ಆಗ, ಆ ಮಹಿಳೆ ನಡೆದಿದ್ದೆಲ್ಲವನ್ನೂ ವಿವರಿಸಿದ್ದಾರೆ.

ಆಗ, ಮುಂಬೈ ವಿಮಾನ ನಿಲ್ದಾಣದ ಸಿಬ್ಬಂದಿಗೆ ವಿಷಯ ಮುಟ್ಟಿಸಲಾಗಿದೆ. ಹಾಗಾಗಿ, ಮುಂಬೈನಲ್ಲಿ ವಿಮಾನ ಇಳಿಯುತ್ತಿದ್ದಂತೆ, ಆ ಆಸಾಮಿಗೆ ಪೊಲೀಸರೇ 'ಸುಸ್ವಾಗತ' ಕೋರಿದ್ದಾರೆ. ಈತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇಂಥ ಘಟನೆಯು ನಡೆಯುತ್ತಿರುವುದು ಇತ್ತೀಚೆಗೆ ಇದು ಮೂರನೇ ಬಾರಿ. ಕಳೆದ ತಿಂಗಳು ಹೈದರಾಬಾದ್ ನಿಂದ ನವದೆಹಲಿಗೆ ವಿಮಾನದಲ್ಲಿ ಬಂದಿದ್ದ 56 ವರ್ಷದ ವ್ಯಕ್ತಿಯೊಬ್ಬರು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೀಗೆ ವರ್ತಿಸಿ, ಪೊಲೀಸರ ಅತಿಥಿಯಾಗಿದ್ದ.

ಅಷ್ಟೇ ಅಲ್ಲ. ಇತ್ತೀಚೆಗೆ ಮುಂಬೈನಿಂದ ಹೊರಟಿದ್ದ ರೈಲಿನಲ್ಲಿಯುವಕನೊಬ್ಬ ಕಂಪಾರ್ಟ್ ಮೆಂಟ್ ಒಂದರಲ್ಲಿ ಏಕಾಂಗಿಯಾಗಿದ್ದ ಯುವತಿಯೊಬ್ಬಳ ಮುಂದೆಯೇ ಹಸ್ತ ಮೈಥುನ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ಆ ಯುವತಿ ಮಹಿಳಾ ಸಹಾಯವಾಣಿಗೆ ದೂರು ನೀಡಿದರೂ ಅಲ್ಲಿನ ಸಿಬ್ಬಂದಿಯು ನಕ್ಕು ಸುಮ್ಮನಾಗಿದ್ದು ವಿವಾದಕ್ಕೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+