The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ನಿಷೇಧಿಸಿದ ಮಮತಾ ಬ್ಯಾನರ್ಜಿ!
ಕೋಲ್ಕತ್ತಾ, ಮೇ.09: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸೋಮವಾರ ಸುದೀಪ್ತೋ ಸೇನ್ ಅವರ ದಿ ಕೇರಳ ಸ್ಟೋರಿ ಚಿತ್ರಕ್ಕೆ ನಿಷೇಧ ಹೇರುವುದಾಗಿ ಘೋಷಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದ ಈ ಸಿನಿಮಾ ಭಾರೀ ವಿವಾದಕ್ಕೆ ಸಿಲುಕಿಕೊಂಡಿದೆ.
ಕೇರಳದಿಂದ 32,000 ಹುಡುಗಿಯರು ನಾಪತ್ತೆಯಾಗಿ, ಮತಾಂತರವಾಗಿ ನಂತರ ಭಯೋತ್ಪಾದಕ ಗುಂಪು ಐಸಿಸ್ ಸೇರಿದ್ದಾರೆ ಎಂದು ಹೇಳಿದ್ದಕ್ಕಾಗಿ ಟ್ರೈಲರ್ ಟೀಕೆಗೆ ಗುರಿಯಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಉಲ್ಲೇಖಿಸಿದ್ದುಮ "ಪಶ್ಚಿಮ ಬಂಗಾಳ ಸರ್ಕಾರವು ಕೇರಳ ಸ್ಟೋರಿ ಚಲನಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ. ದ್ವೇಷದಲ್ಲಿ ದ್ವೇಷ ಮತ್ತು ಹಿಂಸಾಚಾರದ ಯಾವುದೇ ಘಟನೆಯನ್ನು ತಪ್ಪಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದಿದ್ದಾರೆ.

"ಕಾಶ್ಮೀರ ಫೈಲ್ಸ್ ಎಂದರೇನು? ಇದು ಒಂದು ಸಮುದಾಯವನ್ನು ಅವಮಾನಿಸುವುದು. ದಿ ಕೇರಳ ಸ್ಟೋರಿ ಏನು?... ಇದೊಂದು ಪ್ರಪೋಗಾಂಡದ ಕಥೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರ ನಿರ್ಮಾಪಕ ವಿಪುಲ್ ಶಾ, "ಅವರು ಚಿತ್ರವನ್ನು ಬ್ಯಾನ್ ಮಾಡಿದ್ದರೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಏನು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ" ಎಂದಿದ್ದಾರೆ.
ಇತ್ತೀಚೆಗೆ, ಕೇರಳ ಸ್ಟೋರಿಯನ್ನು ತಮಿಳುನಾಡಿನ ಚಿತ್ರಮಂದಿರಗಳಿಂದ ತೆಗೆದುಹಾಕಲಾಗಿದೆ. ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ಅಧ್ಯಕ್ಷ ಎಂ ಸುಬ್ರಮಣ್ಯಂ ಅವರು ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ.

"ಈ ಚಲನಚಿತ್ರವನ್ನು ಪ್ಯಾನ್-ಇಂಡಿಯಾ ಗುಂಪುಗಳ ಒಡೆತನದ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಪ್ರದರ್ಶಿಸಲಾಗಿದೆ. ಯಾವುದೇ ಜನಪ್ರಿಯ ತಾರೆಯರಿಲ್ಲದ ಕಾರಣ ಸ್ಥಳೀಯ ಸ್ವಾಮ್ಯದ ಮಲ್ಟಿಪ್ಲೆಕ್ಸ್‌ಗಳು ಚಿತ್ರವನ್ನು ಪ್ರದರ್ಶಿಸದಿರಲು ಈಗಾಗಲೇ ನಿರ್ಧರಿಸಿದ್ದವು. ಉದಾಹರಣೆಗೆ ಕೊಯಮತ್ತೂರಿನಲ್ಲಿ ಇಲ್ಲಿಯವರೆಗೆ ಎರಡು ಪ್ರದರ್ಶನಗಳಾಗಿವೆ. ಅವೂ ಸಹ ಉತ್ತಮವಾಗಿ ನಡೆಯಲಿಲ್ಲ" ಎಂದು ಹೇಳಿದ್ದಾರೆ.
ದಿ ಕೇರಳ ಸ್ಟೋರಿಯಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುದೀಪ್ತೋ ಸೇನ್ ಅವರು ನಿರ್ದೇಶಿಸಿದ ಮತ್ತು ವಿಪುಲ್ ಅಮೃತ್‌ಲಾಲ್ ಷಾ ನಿರ್ಮಿಸಿದ ಈ ಚಿತ್ರವು ಭಾರೀ ರಾಜಕೀಯ ಗದ್ದಲವನ್ನು ಉಂಟುಮಾಡಿದೆ. ಅನೇಕರು ಇದನ್ನು ಅಜೆಂಡಾದ ಚಿತ್ರ ಎಂದು ಕರೆದಿದ್ದಾರೆ.
ಅನೇಕರು ಚಿತ್ರದ ಮೇಲೆ ನಿಷೇಧವನ್ನು ಕೋರಿದಾಗ, ಚಲನಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿತು. ಬಿಡುಗಡೆಯಾದ ಮೂರನೇ ದಿನದಲ್ಲಿ ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಮೇ 5 ರಂದು ಬಿಡುಗಡೆಯಾದಾಗಿನಿಂದ ಅವರ ಒಟ್ಟು ಗಳಿಕೆ 35 ಕೋಟಿಗಿಂತ ಹೆಚ್ಚಿಗೆ ಗಳಿಸಿದೆ.












Click it and Unblock the Notifications