ಸಿಬಿಐ ನೋಟಿಸ್‌ ಮಲ್ಯ ವಿದೇಶಕ್ಕೆ ಹಾರಲು ನೆರವಾಯಿತೇ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 11 : ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್ ಔಟ್ ನೋಟಿಸ್‌ಅನ್ನು ಒಂದೇ ತಿಂಗಳಿನಲ್ಲಿ ಬದಲಾವಣೆ ಮಾಡಲಾಗಿತ್ತು. ನೋಟಿಸ್‌ ಬದಲಾವಣೆ ಮಾಡಿದ್ದೇ ಅವರು ವಿದೇಶಕ್ಕೆ ತೆರಳಲು ಅನುಕೂಲ ಮಾಡಿಕೊಟ್ಟಂತಾಯಿತೇ? ಎಂಬುದು ಸದ್ಯದ ಪ್ರಶ್ನೆ.

ವಿಜಯ್ ಮಲ್ಯ ಅವರ ವಿರುದ್ಧ ಸಿಬಿಐ ಎರಡು ಬಾರಿ ಲುಕ್ ಔಟ್ ನೋಟಿಸ್ ಜಾರಿ ಮಾಡಿತ್ತು. 2015ರ ಅಕ್ಟೋಬರ್ 12ರಂದು ಮೊದಲ ನೋಟಿಸ್ ಜಾರಿಗೊಳಿಸಲಾಗಿತ್ತು. 2015ರ ನವೆಂಬರ್ 23ರಂದು ಬದಲಾವಣೆ ಮಾಡಿದ ನೋಟಿಸ್ ಜಾರಿಗೊಳಿಸಲಾಯಿತು. [Twitter ಮಾಧ್ಯಮಗಳಿಗೆ ತಿರುಗೇಟು ನೀಡಿದ ಮಲ್ಯ!]

vijay mallya

ಮೊದಲ ನೋಟಿಸ್‌ನಲ್ಲಿ ಬದಲಾವಣೆ ಮಾಡದಿದ್ದರೆ ಮಲ್ಯ ಅವರು ದೇಶ ಬಿಟ್ಟು ಹೋಗಲು ಸಾಧ್ಯವಿರಲಿಲ್ಲ. ಆದರೆ, ಶುಕ್ರವಾರ ಬೆಳಗ್ಗೆ ಟ್ವಿಟ್ವರ್‌ ಮೂಲಕ ತಾವು ದೇಶ ಬಿಟ್ಟು ಹೋಗಿಲ್ಲ ಎಂದು ಮಲ್ಯ ಸ್ಪಷ್ಟಪಡಿಸಿದ್ದಾರೆ. ಮಲ್ಯ ಎಲ್ಲಿದ್ದಾರೆ?. [ಆರ್ಟ್ ಆಫ್ ಲೀವಿಂಗ್: ಮಲ್ಯರಿಗೂ ಮುಂಚೆ ದೇಶ ತೊರೆದವರು]

ವಶಕ್ಕೆ ಪಡೆಯುವ ಅಧಿಕಾರವಿತ್ತು : ಸಿಬಿಐನ ಮೊದಲ ನೋಟಿಸ್ ಪ್ರಕಾರ ಮಲ್ಯ ಅವರು ದೇಶ ಬಿಟ್ಟು ಹೋಗಲು ಪ್ರಯತ್ನ ನಡೆಸಿದರೆ ಅವರನ್ನು ವಶಕ್ಕೆ ಪಡೆಯಲು ಅವಕಾಶವಿತ್ತು. ಆದರೆ, ಬದಲಾವಣೆ ಮಾಡಿದ ನೋಟಿಸ್‌ನಲ್ಲಿ ದೇಶಬಿಟ್ಟು ಹೋಗಬೇಕಾದರೆ ಮಾಹಿತಿ ನೀಡಬೇಕು ಎಂದು ಮಾತ್ರ ಸೂಚಿಸಲಾಗಿತ್ತು. [ಮಲ್ಯ ಬಗ್ಗೆ ಕರ್ನಾಟಕದ ರಾಜಕಾರಣಿಗಳು ಹೇಳುವುದೇನು?]

ವಿಜಯ್ ಮಲ್ಯ ಅವರ ವಿರುದ್ಧ ಯಾವುದೇ ಪ್ರಕರಣದಲ್ಲಿ ಚಾರ್ಜ್ ಶೀಟ್ ದಾಖಲಾಗದ ಕಾರಣ, ಲುಕ್‌ ಔಟ್‌ ನೋಟಿಸ್‌ನಲ್ಲಿ ಬದಲಾವಣೆ ಮಾಡಲಾಗಿತ್ತು. ಸಿಬಿಐ ಮೂರು ಬಾರಿ ಮಲ್ಯ ವಿಚಾರಣೆ ನಡೆಸಿದರೂ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿರಲಿಲ್ಲ. ಯಾವುದೇ ಕೋರ್ಟ್‌ ಸಹ ಅವರ ವಿದೇಶ ಪ್ರವಾಸಕ್ಕೆ ತಡೆ ನೀಡಿರಲಿಲ್ಲ. ಆದ್ದರಿಂದ ಸಿಬಿಐ ನೋಟಿಸ್‌ನಲ್ಲಿ ಬದಲಾವಣೆ ಮಾಡಿತ್ತು.[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ಮಾರ್ಚ್ 2ರಂದು ವಿದೇಶಕ್ಕೆ ಹಾರಿದ ಮಲ್ಯ : ವಿಜಯ್ ಮಲ್ಯ ಅವರು ಮಾರ್ಚ್ 2ರಂದು ವಿದೇಶಕ್ಕೆ ಹಾರಿದ್ದಾರೆ. ಹಿಂದಿನ ದಿನ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿದ್ದ ಅವರು, ಮಾರ್ಚ್ 2ರಂದು ಮಧ್ಯಾಹ್ನ 12.45ಕ್ಕೆ ಜೆಟ್‌ ಏರ್‌ವೇಸ್‌ನ 9W122 ದೆಹಲಿ-ಲಂಡನ್‌ ವಿಮಾನದ ಮೂಲಕ ತೆರಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Central Bureau of Investigation amended the Lookout circular against Vijay Mallya within a month of issuing it. The first lookout circular was issued on October 12, 2015. However on November 23, 2015 an amended lookout circular was issued. Had the first lookout circular not been amended then Vijay Mallya could not have left the country.
Please Wait while comments are loading...