ಮಲ್ಯರನ್ನು ಭೇಟಿ ಮಾಡಿದ ಜೇಟ್ಲಿ ರಾಜೀನಾಮೆಗೆ ಆಗ್ರಹಿಸಿದ ರಾಹುಲ್

ನವದೆಹಲಿ, ಸೆಪ್ಟೆಂಬರ್ 14: ಉದ್ಯಮಿ ವಿಜಯ್ ಮಲ್ಯ ಅವರು ಮಾಡಿರುವ ಆರೋಪಗಳು ಗಂಭೀರವಾಗಿದ್ದು ಈ ಬಗ್ಗೆ ಸ್ವತಂತ್ರವಾದ ತನಿಖೆಗೆ ಪ್ರಧಾನಿ ಮೋದಿ ಅವರು ಆದೇಶಿಸಬೇಕಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಲಿ ಎಂದು ಎಐಸಿಸಿ ಅಧ್ಯಕ್ಷೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯ ಮಲ್ಯ ಲಂಡನ್​​ಗೆ ಪಲಾಯನ ಮಾಡುವ ವಿಚಾರ ಜೇಟ್ಲಿ ಅವರಿಗೆ ಗೊತ್ತಿದ್ದರು ಕೇಂದ್ರ ತನಿಖಾ ಸಂಸ್ಥೆಗಳಿಗೇಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿದರು.

Mallyas allegations ‘serious, Jaitley should step down: Rahul Gandhi

ಮಾರ್ಚ್​ 1, 2016ರಂದು ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಜೇಟ್ಲಿ ಮತ್ತು ಮಲ್ಯ ನಡುವೆ ನಡೆದ ಮಾತುಕತೆಯನ್ನು ಕಾಂಗ್ರೆಸ್​​ ಮುಖಂಡ ಪಿ.ಎಲ್​. ಪುನಿಯಾ ಅವರು ನೋಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಿಸಿಟಿವಿ ನೆರವು ಪಡೆಯಬಹುದು ಎಂದು ರಾಹುಲ್ ಸಲಹೆ ನೀಡಿದ್ದಾರೆ.

ಮಲ್ಯ ಪರಾರಿಗೆ ನೆರವು: ಜೇಟ್ಲಿ ಹಾಗೂ ಮಲ್ಯ ನಡುವೆ ರಹಸ್ಯ ಒಪ್ಪಂದಗಳು ನಡೆದಿರುವ ಸಾಧ್ಯತೆಯಿದೆ. ಮಲ್ಯ ಅವರು ಪರಾರಿಯಾಗಲು ನೆರವಾಗಿದ್ದಾರೆ. ಜೇಟ್ಲಿ ಅವರು ರಾಜಿನಾಮೆ ನೀಡಬೇಕು. ಈ ಸಂಬಂಧ ತನಿಖೆ ನಡೆಯಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.

ಮಲ್ಯ ಅವರ ಹಸ್ತಾಂತರ ಕುರಿತಾಗಿ ಲಂಡನ್ನಿನ ವೆಸ್ಟ್​ಮಿನಿಸ್ಟರ್ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಯ ಅವರು ಜೇಟ್ಲಿ ಅವರನ್ನು ಭೇಟಿ ಮಾಡಿದ್ದು, ಸಾಲ ತೀರಿಸಲು ಒನ್ ಟೈಮ್ ಸೆಟ್ಲ್ ಮೆಂಟ್ ವ್ಯವಸ್ಥೆ ಕೋರಿದ್ದರ ಬಗ್ಗೆ ಹೇಳಿದ್ದರು.

ರಾಜ್ಯಸಭಾ ಸದಸ್ಯ ಮಲ್ಯರನ್ನು ಸಂಸತ್ತಿನಲ್ಲಿ ಅಕಸ್ಮಾತ್ ಭೇಟಿ ಮಾಡಿದ್ದೆ, ಅದು ಅನೌಪಚಾರಿಕವಾಗಿ ಭೇಟಿಯಾಗಿತ್ತು. 2014ರ ನಂತರ ಅವರನ್ನು ಭೇಟಿಯಾಗಿಲ್ಲ. ಸಾಲ ಮರು ಪಾವತಿಯ ಬಗ್ಗೆ ಬ್ಯಾಂಕ್ ಜತೆ ಮಾತನಾಡಿ ಎಂದಷ್ಟೇ ಹೇಳಿದ್ದೆ ಎಂದು ಅರುಣ್​​ ಜೇಟ್ಲಿ ಅವರು ಸಮರ್ಥನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+