₹18,748 ಕೋಟಿ ನಷ್ಟ, ₹3,705 ಕೋಟಿ ನೆರವು ಬೇಡಿಕೆ: ಪ್ರಧಾನಿ ಮೋದಿಗೆ ಖರ್ಗೆ ಇಟ್ಟ 6 ಪ್ರಮುಖ ಬೇಡಿಕೆ

ಕರ್ನಾಟಕ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ರಾಜ್ಯಕ್ಕೆ ತುರ್ತು ನೆರವು ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಪ್ರಧಾನಿಗೆ ವಿವರವಾದ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಮುಂದೆ ಆರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಖರ್ಗೆ ಅವರು ಇದೇ ಮನವಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 58% ಮಳೆಯ ಕೊರತೆ ಉಂಟಾಗಿದೆ. ಇದರಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕ ಸರ್ಕಾರವು ಅಂದಾಜು ₹18,748.23 ಕೋಟಿ ನಷ್ಟಕ್ಕೆ , NDRF ಮತ್ತು SDRF ನಿಯಮಗಳ ಅಡಿ ₹3,705.30 ಕೋಟಿ ಕೇಂದ್ರ ನೆರವು ಕೋರಿದೆ ಎಂದು ಅವರು ಹೇಳಿದ್ದಾರೆ.

Mallikarjun Kharge Urges Prime Minister Narendra Modi to Release 3 705 Crore Drought Relief for Karnataka

Mallikarjun Kharge: 6 ಬೇಡಿಕೆ ಇಟ್ಟ ಮಲ್ಲಿಕಾರ್ಜುನ್‌ ಖರ್ಗೆ

ಖರ್ಗೆ ಅವರ ಮೊದಲ ಬೇಡಿಕೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ತಂಡವನ್ನು ತಕ್ಷಣ ಕಳುಹಿಸಿ ಬರದಿಂದ ಉಂಟಾಗಿರುವ ಹಾನಿಯನ್ನು ಸ್ಥಳದಲ್ಲೇ ಪರಿಶೀಲಿಸುವುದು. ವಿಳಂಬವಿಲ್ಲದೆ ಕೇಂದ್ರ ತಂಡವು ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎರಡನೇಯದಾಗಿ, ಕರ್ನಾಟಕ ಕೇಳಿರುವ ₹3,705.30 ಕೋಟಿ ಸಂಪೂರ್ಣ ಮೊತ್ತವನ್ನು ಯಾವುದೇ ಅನಗತ್ಯ ಕಡಿತವಿಲ್ಲದೆ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಅರ್ಹ ರೈತರು ಪರಿಹಾರ

ಮೂರನೇಯದಾಗಿ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡುವ ಸಂದರ್ಭದಲ್ಲಿ ಹಳೆಯ 2015-16ರ ಕೃಷಿ ಗಣತಿ ಬದಲಿಗೆ ಕರ್ನಾಟಕದ ನವೀಕೃತ ಭೂಮಿ ಭೂ ದಾಖಲೆಗಳನ್ನು ಆಧಾರವಾಗಿಟ್ಟುಕೊಳ್ಳಬೇಕು ಎಂದು ಖರ್ಗೆ ಹೇಳಿದ್ದಾರೆ. ಇದರಿಂದ ಅರ್ಹ ರೈತರು ಪರಿಹಾರದಿಂದ ಹೊರಗುಳಿಯುವುದನ್ನು ತಪ್ಪಿಸಬಹುದು ಎಂಬುದು ಅವರ ವಾದವಾಗಿದೆ.

ನಾಲ್ಕನೇಯದಾಗಿ, ಪ್ರಸ್ತುತ ಗ್ರೌಂಡ್‌ ಟ್ರೂಥಿಂಗ್ ನಡೆಯುತ್ತಿರುವ 11 ಹೆಚ್ಚುವರಿ ತಾಲೂಕುಗಳು ಸೇರಿದಂತೆ ಮುಂದೆ ಬರಪೀಡಿತವೆಂದು ಅರ್ಹತೆ ಪಡೆಯುವ ತಾಲೂಕುಗಳನ್ನೂ ಒಂದೇ ನಿರಂತರ ಬರ ಪರಿಸ್ಥಿತಿಯ ಭಾಗವಾಗಿ ಪರಿಗಣಿಸಿ ಕೇಂದ್ರ ನೆರವು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕುಡಿಯುವ ನೀರಿನ ಭದ್ರತೆಗೆ ಹೆಚ್ಚುವರಿ ನೆರವು

ಐದನೇ ಬೇಡಿಕೆಯಾಗಿ, ಕುಡಿಯುವ ನೀರಿನ ಭದ್ರತೆಗೆ ಹೆಚ್ಚುವರಿ ನೆರವು ನೀಡಬೇಕು ಎಂದು ಖರ್ಗೆ ತಿಳಿಸಿದ್ದಾರೆ. ಕಾವೇರಿ ಹಾಗೂ ಜಲವಿದ್ಯುತ್ ಜಲಾನಯನ ಪ್ರದೇಶಗಳ ಜಲಾಶಯಗಳಲ್ಲಿ ನೀರಿನ ಮಟ್ಟ ಐತಿಹಾಸಿಕವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಪರ್ಯಾಯ ವಿದ್ಯುತ್ ಪೂರೈಕೆಯ ವೆಚ್ಚಕ್ಕೂ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಆರನೇಯದಾಗಿ, ಕರ್ನಾಟಕಕ್ಕೆ ನೀಡುವ ಬರ ಪರಿಹಾರವನ್ನು ರಾಜಕೀಯ ಪರಿಗಣನೆಗಳಿಂದ ಮುಕ್ತವಾಗಿ, ಅರ್ಹತೆ ಮತ್ತು ತುರ್ತು ಪರಿಸ್ಥಿತಿಯ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ಖರ್ಗೆ ಹೇಳಿದ್ದಾರೆ. ರಾಜ್ಯದ 31 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ತ್ವರಿತ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದ ಬರ ಪರಿಹಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಮಾನವೀಯ ಆದ್ಯತೆಯಾಗಿ ಪರಿಗಣಿಸಬೇಕಾದ ವಿಷಯ ಎಂದು ಖರ್ಗೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೈತರಿಗೆ ಅಗತ್ಯವಿರುವ ಆಹಾರ, ಮೇವು, ಕುಡಿಯುವ ನೀರು ಹಾಗೂ ಜೀವನೋಪಾಯದ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+