ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಕೊಟ್ಟ ತಂಡದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷ ಸಂಘಟನೆಗಾಗಿ ರಚಿಸಿದರುವ ಸಮಿತಿಗಳ ವಿಚಾರದಲ್ಲಿ ಮೊದಲ ಅಪಸ್ವರ ಕೇಳಿಬಂದಿದೆ.

ಮಹಾರಾಷ್ಟ್ರದಲ್ಲಿನ ಪಕ್ಷದ ಪ್ರಧಾನ ಉಸ್ತುವಾರಿ ಕಾರ್ಯದರ್ಶಿಯಾಗಿ ಜೂನ್ ತಿಂಗಳಿನಲ್ಲಿ ನೇಮಕವಾದ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸಲು ಅಧ್ಯಕ್ಷರು ಆಯ್ಕೆ ಮಾಡಿದ ಮೂವರು ನಾಯಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಆರೆಸ್ಸೆಸ್ ಅನ್ನು 'ವಿಷ' ಎಂದು ನಿಂದಿಸಿದ ಮಲ್ಲಿಕಾರ್ಜುನ ಖರ್ಗೆಆರೆಸ್ಸೆಸ್ ಅನ್ನು 'ವಿಷ' ಎಂದು ನಿಂದಿಸಿದ ಮಲ್ಲಿಕಾರ್ಜುನ ಖರ್ಗೆ

ಜೂನ್ ಮತ್ತು ಆಗಸ್ಟ್ ನಡುವೆ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ಖರ್ಗೆ ಅವರ ಜತೆ ಕಾರ್ಯನಿರ್ವಹಿಸಲು ಐವರನ್ನು ನೇಮಿಸಿದ್ದರು.

ಸಮಿತಿಯಲ್ಲಿ ಇರುವವರು

ಸಮಿತಿಯಲ್ಲಿ ಇರುವವರು

ಎಐಸಿಸಿಯ ದೆಹಲಿ ಸಂವಹನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆಶೀಶ್ ದುವಾ, ಗುಜರಾತ್‌ ಮಹಿಳಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಲ್ ಪಟೇಲ್, ತೆಲಂಗಾಣ ಶಾಸಕ ಶಾಸಕರಾದ ಸಂಪತ್ ಕುಮಾರ್, ಚಲ್ಲ ವಂಶಿ ರೆಡ್ಡಿ ಮತ್ತು ರಾಜೀವ್ ಗಾಂಧಿ ಪಂಚಾಯಿತಿ ರಾಜ್ ಸಂಘಟನೆ ಹಾಗೂ ಭಾರತೀಯ ಯುವ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದ ಕರ್ನಾಟಕದವರೇ ಆದ ಬಿ.ಎಂ. ಸಂದೀಪ್ ಸಮಿತಿಯಲ್ಲಿದ್ದರು.

ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಪರಮೇಶ್ವರ ಸ್ಪಷ್ಟನೆಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಪರಮೇಶ್ವರ ಸ್ಪಷ್ಟನೆ

ಸಭೆಯಲ್ಲಿ ಅಸಮಾಧಾನ

ಸಭೆಯಲ್ಲಿ ಅಸಮಾಧಾನ

ಸೆಪ್ಟೆಂಬರ್ 6ರಂದು ಅಹ್ಮದ್ ಪಟೇಲ್ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು ಮತ್ತು ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಖರ್ಗೆ ಅವರ ಅಸಮಾಧಾನ ಸ್ಫೋಟಗೊಂಡಿದೆ ಎನ್ನಲಾಗಿದೆ.

ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಮತ್ತು ನಿಧಿ ಸಂಗ್ರಹ ಮಾರ್ಗೋಪಾಯಗಳ ಬಗ್ಗೆ ಸಮಾಲೋಚನೆ ನಡೆಸುವುದು ಈ ಸಭೆಯ ಗುರಿಯಾಗಿತ್ತು.

ಸಂಸತ್‌ನಲ್ಲಿ ಪ್ರತಿಪಕ್ಷಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಅಧಿಕಾರಿಯ ಪತ್ತೆ ಮಾಡಿದ ಖರ್ಗೆಸಂಸತ್‌ನಲ್ಲಿ ಪ್ರತಿಪಕ್ಷಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಅಧಿಕಾರಿಯ ಪತ್ತೆ ಮಾಡಿದ ಖರ್ಗೆ

ಮೂವರ ವಿರುದ್ಧ ದೂರು

ಮೂವರ ವಿರುದ್ಧ ದೂರು

ತಳಮಟ್ಟದಿಂದ ಕಾರ್ಯನಿರ್ವಹಿಸುವಂತೆ ಅಹ್ಮದ್ ಪಟೇಲ್ ಸಭೆಯಲ್ಲಿ ಸಲಹೆ ನೀಡಿದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ, ತಮ್ಮ ಸಮಿತಿಯ ಕಾರ್ಯದರ್ಶಿಗಳಾದ ಸಂಪತ್, ವಂಶಿ ಮತ್ತು ಸಂದೀಪ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರಿದರು.

ದೊಡ್ಡ ರಾಜ್ಯದ ಜವಾಬ್ದಾರಿ

ದೊಡ್ಡ ರಾಜ್ಯದ ಜವಾಬ್ದಾರಿ

'ಮಹಾರಾಷ್ಟ್ರದಂತಹ ದೊಡ್ಡ ರಾಜ್ಯದ ಜವಾಬ್ದಾರಿಯನ್ನು ನೀಡಿದ್ದೀರಿ. ಆದರೆ, ನನ್ನ ಕೆಳಗಿನ ಮೂವರು ಕೆಲಸವನ್ನೇ ಮಾಡುತ್ತಿಲ್ಲ. ಹೀಗಿರುವಾಗ ತಳಮಟ್ಟದಲ್ಲಿ ಪಕ್ಷದ ಕಾರ್ಯಯೋಜನೆಯನ್ನು ಹೇಗೆ ಅಳವಡಿಸಿ ಫಲಿತಾಂಶ ನೀಡಲು ಸಾಧ್ಯ?' ಎಂದು ಖರ್ಗೆ ಅಸಮಾಧಾನ ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.

ಸಂದೀಪ್ ಬಗ್ಗೆಯೂ ಅಸಮಾಧಾನ

ಸಂದೀಪ್ ಬಗ್ಗೆಯೂ ಅಸಮಾಧಾನ

ಕರ್ನಾಟಕದವರೇ ಆಗಿದ್ದರೂ ಸಂದೀಪ್ ಅವರ ನೇಮಕದ ಬಗ್ಗೆ ಖರ್ಗೆ ಅತೃಪ್ತಿ ಹೊರಹಾಕಿದ್ದಾರೆ. ಸಂದೀಪ್ ಅವರನ್ನು ತಮ್ಮ ಅಡಿಯಲ್ಲಿ ಕಾರ್ಯದರ್ಶಿಯಾಗಿ ನೇಮಿಸುವ ಮುನ್ನ ತಮ್ಮ ಅಭಿಪ್ರಾಯವನ್ನು ಪಡೆದುಕೊಂಡಿಲ್ಲ ಎನ್ನುವುದು ಖರ್ಗೆ ಅವರ ಅಸಮಾಧಾನಕ್ಕೆ ಕಾರಣ.

ತೆಲಂಗಾಣದ ಬಗ್ಗೆಯೇ ಚಿಂತೆ

ತೆಲಂಗಾಣದ ಬಗ್ಗೆಯೇ ಚಿಂತೆ

ಮಹಾರಾಷ್ಟ್ರಕ್ಕಿಂತಲೂ ತೆಲಂಗಾಣದ ರಾಜಕೀಯ ಚಟುವಟಿಕೆಗಳ ಕುರಿತು ಸಂಪತ್ ಮತ್ತು ವಂಶಿ ಹೆಚ್ಚು ಚಿಂತೆಗೀಡಾಗಿದ್ದಾರೆ. ಹೀಗಾಗಿ ಅವರು ತೆಲಂಗಾಣದಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಮುಂದಾಗಿದ್ದಾರೆ. ಹೀಗಾಗಿ 2019ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಚುನಾವಣೆ ಮುಂಚೆಯೇ ನಡೆಯುವ ಸಾಧ್ಯತೆ ಇದೆ.

ರಾಹುಲ್ ಗಾಂಧಿ ಮುಂದೆ ಪ್ರಸ್ತಾಪ

ರಾಹುಲ್ ಗಾಂಧಿ ಮುಂದೆ ಪ್ರಸ್ತಾಪ

ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಸೆ. 12ರಂದು ಮರಳಲಿದ್ದು, ಆಗ ಈ ವಿಚಾರ ಅವರ ಮುಂದೆ ಬರಲಿದೆ. ಖರ್ಗೆ ಅವರು ಹಿರಿಯ ನಾಯಕರಾಗಿರುವುದರಿಂದ ಅವರ ಆಕ್ಷೇಪಗಳನ್ನು ರಾಹುಲ್ ಗಾಂಧಿ ಪರಿಗಣಿಸುವ ನಿರೀಕ್ಷೆಯಿದೆ. ಮೂವರು ಕಾರ್ಯದರ್ಶಿಗಳನ್ನು ಬದಲಿಸುವ ಸಾಧ್ಯತೆ ಇದೆ.

English summary
Congress senior leader Mallikarjun Kharge is not happy with the team Rahul Gandhi given him to strengthen the party in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X