Maldives: ಕೈಯಲ್ಲಿ ಕಾಸು ಇಲ್ಲದೆ ಭಾರತೀಯರ ಬಳಿ ಅಂಗಲಾಚುತ್ತಿದೆ ಮಾಲ್ಡೀವ್ಸ್!
ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡರು ಅನ್ನೋ ಗಾದೆ ಮಾತು ಮಾಲ್ಡೀವ್ಸ್ ದೇಶಕ್ಕಂತು ಸರಿಯಾಗಿ ಅನ್ವಯ ಆಗುತ್ತೆ. ಯಾಕಂದ್ರೆ ಭಾರತ & ಮಾಲ್ಡೀವ್ಸ್ ಸಂಬಂಧ ಸಖತ್ ಆಗಿಯೇ ಇತ್ತು. ಅದರಲ್ಲೂ ಭಾರತೀಯ ಪ್ರವಾಸಿಗರಿಂದ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಲಾಭ ಕೂಡ ಮಾಡಿಕೊಂಡಿತ್ತು ಮಾಲ್ಡೀವ್ಸ್. ಹೀಗಿದ್ದಾಗಲೇ ದಿಢೀರ್ ಭಾರತದ ವಿರುದ್ಧ, ಮಾಲ್ಡೀವ್ಸ್ ಹೊಸ ಅಧ್ಯಕ್ಷ ರೊಚ್ಚಿಗೆದ್ದು ಬಾಯಿಗೆ ಬಂದಂತೆ ಹೇಳಿಕೆ ನೀಡಿಬಿಟ್ಟರು ಎಂಬ ಆರೋಪ ಕೇಳಿಬಂತು. ಈ ಘಟನೆ ನಂತರ ಭಾರತ & ಮಾಲ್ಡೀವ್ಸ್ ನಡುವೆ ದೊಡ್ಡ ಕಿಚ್ಚು ಹೊತ್ತಿಕೊಂಡಿತ್ತು.
ಭಾರತ & ಮಾಲ್ಡೀವ್ಸ್ ನಡುವೆ ಕಿರಿಕ್ ಶುರುವಾದ ಕಾರಣಕ್ಕೆ ಮಾಲ್ಡೀವ್ಸ್ ಪ್ರವಾಸ ಮಾಡ್ತಿದ್ದ ಭಾರತೀಯರ ಸಂಖ್ಯೆ ಕೂಡ ಕಡಿಮೆ ಆಗಿಬಿಟ್ಟಿತು. ಅದು ಎಷ್ಟರಮಟ್ಟಿಗೆ ಅಂದ್ರೆ ಕೊನೆಗೆ, ಮಾಲ್ಡೀವ್ಸ್ ಪ್ರವಾಸೋದ್ಯಮ ಮಕಾಡೆ ಮಲಗಿ, ಪ್ರವಾಸೋದ್ಯಮ ನಂಬಿ ಬದುಕುತ್ತಿದ್ದವರ ಬಾಳು ಬೀದಿಗೆ ಬಿದ್ದಂತೆ ಆಗಿತ್ತು. ಹೀಗಿದ್ದಾಗ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಕಡೆಗೆ ತಿರುಗಿ ಕೂಡ ನೋಡಬಾರದು ಅಂತಾ ನಿರ್ಧಾರ ಕೈಗೊಂಡರು. ಇಷ್ಟೆಲ್ಲದರ ಪರಿಣಾಮ ಈಗ ಮಾಲ್ಡೀವ್ಸ್ ಮೈತುಂಬಾ ಸಾಲ ಮಾಡಿಕೊಂಡಿದ್ದು, ಖುದ್ದು ಮಾಲ್ಡೀವ್ಸ್ ಅಧ್ಯಕ್ಷ ಭಾರತದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

ಭಾರತ ಹೊರಹೋಗಲಿ ಎಂಬ ಉದ್ದೇಶ...
ಭಾರತ ಜಗತ್ತಿನ ಶಕ್ತಿಶಾಲಿ ದೇಶವಾಗಿ ಬೆಳೆದು ನಿಂತಿದ್ದು, ಜಗತ್ತಿನ ಪ್ರತಿಯೊಂದು ದೇಶಕ್ಕು ಕೂಡ ಭಾರತ ಅತ್ಯಗತ್ಯ. ಹೀಗಿದ್ದಾಗ ಕಿರಿಕ್ ಮಾಡಿ ಮಕಾಡೆ ಮಲಗಿರುವ ಮಾಲ್ಡೀವ್ಸ್ ಈ ಪರಿಸ್ಥಿತಿಯಲ್ಲಿ ಪರದಾಡುತ್ತಿದ್ದು, ಏನು ಮಾಡಬೇಕು? ಅಂತಾನೇ ಮಾಲ್ಡೀವ್ಸ್ ಅಧ್ಯಕ್ಷನಿಗೆ ಗೊತ್ತಾಗುತ್ತಿಲ್ಲ. ಹೀಗಿದ್ದಾಗ, ಭಾರತದ ಜೊತೆಗೆ ಕಿರಿಕ್ ಶುರುವಾಗಿದ್ದ ಸೇನಾ ವಿಚಾರವನ್ನೆ ಇದೀಗ ಪ್ರಸ್ತಾಪ ಮಾಡಿದ್ದಾರೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು.
ಅಂದಹಾಗೆ ಭಾರತದ ಜೊತೆಗಿನ ಮಾಲ್ಡೀವ್ಸ್ ಸಂಬಂಧ ಬಗ್ಗೆ ಮಾತನಾಡಿರುವ ಮೊಹಮ್ಮದ್ ಮುಯಿಝು, ಮಾಲ್ಡೀವ್ಸ್ ನೆಲದಲ್ಲಿ ವಿದೇಶಿ ಸೇನೆ ಇರುವುದು ನಮ್ಮಲ್ಲೇ ಒಂದು ಗಂಭೀರ ಸಮಸ್ಯೆ ಆಗಿತ್ತು. ಹೀಗಂದ ಮಾತ್ರಕ್ಕೆ ಭಾರತ ಹೊರಹೋಗಲಿ ಎಂಬ ಉದ್ದೇಶವನ್ನ ಮಾಲ್ಡೀವ್ಸ್ ಹೊಂದಿಲ್ಲ ಎಂದಿದ್ದಾರೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಎಂದು, ಇದೀಗ ವರದಿಯಾಗಿದೆ. ಈ ಕುರಿತು ಜಾಗತಿಕ ಮಟ್ಟದಲ್ಲಿ ಮತ್ತೊಂದು ರೌಂಡ್ ಚರ್ಚೆಯೂ ಶುರು ಆಗಿದೆ.
ಜಗತ್ತಿಗೆ ಗೊತ್ತಾಯಿತು ಭಾರತದ ಶಕ್ತಿ!
ಮಾಲ್ಡೀವ್ಸ್ & ಭಾರತದ ಸಂಬಂಧಕ್ಕೆ ಹುಳಿ ಹಿಂಡಿದ್ದ ಸಚಿವರ ಬಗ್ಗೆ ಕೂಡ ಮಾಲ್ಡೀವ್ಸ್‌ನ ಸರ್ಕಾರ ಗರಂ ಆಗಿತ್ತು. ತಕ್ಷಣವೇ ಮಾಲ್ಡೀವ್ಸ್ ಸರ್ಕಾರ, ಭಾರತದ ಕುರಿತು ಮಾತನಾಡಿದ್ದ ಸಚಿವರನ್ನು ತೆಗೆದು ಹಾಕಿತ್ತು, ಇದೀಗ ಈ ವಿಚಾರವನ್ನು ಕೂಡ ಪ್ರಸ್ತಾಪ ಮಾಡಲಾಗಿದೆ. ಆ ಮೂಲಕ ಭಾರತ ನಮಗೆ ಮುಖ್ಯ ಎಂಬ ಮಾತನ್ನು, ಮತ್ತೊಮ್ಮೆ ಜಗತ್ತಿಗೆ ತಿಳಿಸುತ್ತಿದೆ ದ್ವೀಪರಾಷ್ಟ್ರ ಮಾಲ್ಡೀವ್ಸ್. ಆದರೆ ಈಗ ಸಮಯ ಕೈಮೀರಿ ಹೋಗಿದ್ದು, ಪರಿಸ್ಥಿತಿ ಇಷ್ಟಕ್ಕೇ ಸರಿಯಾಗುತ್ತಾ? ಮಾಲ್ಡೀವ್ಸ್ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುತ್ತಾ? ಅನ್ನೋದನ್ನ ಇದೀಗ ಕಾದು ನೋಡಬೇಕಿದೆ.












Click it and Unblock the Notifications