ಕಾಪಾಡಿ ಪ್ಲೀಸ್.. ಪ್ಲೀಸ್.. ಅಂತಾ ಭಾರತೀಯರ ಕಾಲು ಹಿಡಿದಿದೆ ಈ ದೇಶ!

ಭಾರತ ಬಲಿಷ್ಠ ದೇಶವಾಗಿ ಬೆಳೆದು ನಿಂತಿದ್ದು, ಈಗ ಭಾರತವನ್ನ ಎದುರು ಹಾಕಿಕೊಳ್ಳುವ ಯಾವುದೇ ದೇಶ ಪ್ರಪಂಚದಲ್ಲಿ ಬದುಕುವುದು ತುಂಬಾ ಕಷ್ಟ. ಅದರಲ್ಲೂ ಆರ್ಥಿಕವಾಗಿ, ಭಾರತ ಒಂದು ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ. ಇದೇ ಸಮಯದಲ್ಲಿ ಭಾರತದ ಜೊತೆ ಸುಖಾಸುಮ್ಮನೆ ಕಿರಿಕ್ ಮಾಡಿದ್ದ ಮಾಲ್ಡೀವ್ಸ್‌ಗೆ ಈಗ ಚಳಿ ಬಿಡುತ್ತಿದ್ದು, ಪ್ರವಾಸಿಗರೇ ಇಲ್ಲದೆ ನೊಣ ಹೊಡೆಯುತ್ತಿದ್ದಾರೆ ಮಾಲ್ಡೀವ್ಸ್ ಹೋಟೆಲ್ & ರೆಸ್ಟೋರೆಂಟ್ ಮಾಲೀಕರು!

ಹೌದು, ಯಾವಾಗ ಮಾಲ್ಡೀವ್ಸ್ ಹೊಸ ಅಧ್ಯಕ್ಷ ಚೀನಾ ಪರವಾಗಿ ನಿಂತು ಭಾರತದ ಜೊತೆ ಕಿರಿಕ್ ತೆಗೆಯುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತೋ. ಅಲ್ಲಿಂದಲೇ ನೋಡಿ ತಿಕ್ಕಾಟ ಕೂಡ ಶುರುವಾಗಿದ್ದು. ಭಾರತ & ಮಾಲ್ಡೀವ್ಸ್ ನಡುವೆ ಭೀಕರ ಕಾಳಗ ನಡೆಯುತ್ತಿದೆ, ಈ ಕಿತ್ತಾಟದ ನಡುವೆ ಮಾಲ್ಡೀವ್ಸ್ ಪ್ರವಾಸೋದ್ಯಮ ಬೀದಿಗೆ ಬಿದ್ದಿದೆ. ನೋಡ ನೋಡುತ್ತಲೇ ಮಾಲ್ಡೀವ್ಸ್ ದೇಶಕ್ಕೆ ಬರುತ್ತಿದ್ದ ಪ್ರವಾಸಿಗರು ಖಾಲಿ ಖಾಲಿ ಆಗಿದ್ದಾರೆ. ಒಂದು ಕಾಲದಲ್ಲಿ, ಇದೇ ಮಾಲ್ಡೀವ್ಸ್ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಂಡಿತ್ತು. ಅದರಲ್ಲೂ ಭಾರತದಿಂದ ಲಕ್ಷ ಲಕ್ಷ ಪ್ರವಾಸಿಗರು ಮಾಲ್ಡೀವ್ಸ್ ಟೂರ್ ಹೋಗುತ್ತಿದ್ದರು. ಆದರೆ ಈಗ ನೋಡಿದರೆ ಅಲ್ಲಿ ಹೋಟೆಲ್ಸ್ ಖಾಲಿ ಖಾಲಿ ಆಗಿವೆ.

Maldives Is Requesting Indians To Visit Their Country

ಪ್ರವಾಸೋದ್ಯಮ ಮಕಾಡೆ ಮಲಗಿದೆ!

ಮಾಲ್ಡೀವ್ಸ್ ಒಂದು ಪುಟಾಣಿ ದ್ವೀಪ ರಾಷ್ಟ್ರ, ಅಲ್ಲಿ ಸುತ್ತಲೂ ಸಮುದ್ರ ಇರುವುದು ಬಿಟ್ಟು ಬೇರೆ ಏನೂ ಕಾಣಿಸುವುದಿಲ್ಲ. ಕೃಷಿ ಕೂಡ ಮಾಡಲು ಅಲ್ಲಿ ಯೋಗ್ಯ ಪರಿಸರ ಇಲ್ಲವಾಗಿದೆ. ಈ ಕಾರಣಕ್ಕೆ ಅನ್ನ & ಆಹಾರ ಪದಾರ್ಥಕ್ಕೆ ಕೂಡ, ಮಾಲ್ಡೀವ್ಸ್ ದೇಶ ಭಾರತದ ಬಳಿಯೇ ಬೇಡಬೇಕಿದೆ. ಹೀಗೆ ಭಾರತ ಇಲ್ಲದೆ ಮಾಲ್ಡೀವ್ಸ್ ದೇಶಕ್ಕೆ ಅಸ್ತಿತ್ವ ಇಲ್ಲ ಎನ್ನಬಹುದು. ಈ ನಡುವೆ ಪ್ರವಾಸೋದ್ಯಮ ನಂಬಿ ಬದುಕುತ್ತಿರುವ ದೇಶಕ್ಕೆ ಭಾರತೀಯರು ಕೂಡ ಆಘಾತದ ಏಟು ಕೊಟ್ಟು, ಭಾರತದ ಬಗ್ಗೆ ಮಾತನಾಡಿದ್ದ ಮಾಲ್ಡೀವ್ಸ್ ನಾಯಕರಿಗೆ ಸರಿಯಾಗಿ ಬುದ್ಧಿ ಕಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮಾಲ್ಡೀವ್ಸ್ ಪ್ರವಾಸೋದ್ಯಮ ಮಕಾಡೆ ಮಲಗಿದೆ.

ಕಾಪಾಡಿ.. ಪ್ಲೀಸ್.. ಪ್ಲೀಸ್..!

ಮಾಲ್ಡೀವ್ಸ್ ಪರಿಸ್ಥಿತಿ ಕಠಿಣವಾದ ಬೆನ್ನಲ್ಲೇ, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರು ಇದರ ಬಗ್ಗೆ ಮಾತನಾಡಿದ್ದು. ಮಾಲ್ಡೀವ್ಸ್ ಈಗ ಭಾರತದ ಜೊತೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಬಯಸುತ್ತೆ. ನಾವು ಶಾಂತಿ & ಸೌಹಾರ್ದಯುತ ವಾತಾವರಣ ಬೆಂಬಲಿಸುತ್ತೇವೆ. ನಮ್ಮ ಜನರು ಭಾರತೀಯರ ಆಗಮನಕ್ಕೆ ಆತ್ಮೀಯ ಸ್ವಾಗತ ನೀಡಲಿದ್ದಾರೆ. ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಬೆಂಬಲ ನೀಡಿ ಎಂದು ನಾನು ಪ್ರವಾಸೋದ್ಯಮ ಸಚಿವನಾಗಿ ಭಾರತೀಯರಲ್ಲಿ ಕೇಳಿಕೊಳ್ಳುವೆ ಎಂದಿದ್ದಾರೆ. ಈ ಮೂಲಕ ಭಾರತೀಯರ ಬಳಿ ಮಾಲ್ಡೀವ್ಸ್ ಬೇಡಿಕೊಳ್ಳುತ್ತಿದೆ.

ಲಕ್ಷದ್ವೀಪ ಟೂರ್ ಪ್ಯಾಕೇಜ್!

ಸಾಮಾನ್ಯವಾಗಿ ಲಕ್ಷದ್ವೀಪಕ್ಕೆ ಹೋಗಿ ಬರುವವರು ಟ್ರಾವೆಲ್ಸ್ ಮೊರೆ ಹೋಗುತ್ತಾರೆ, ಯಾಕೆ ಅಂದ್ರೆ ಡಿಸ್ಕೌಂಟ್ ಸಿಗಲಿದೆ ಅಂತಾ. ಸಾಮಾನ್ಯವಾಗಿ ಲಕ್ಷದ್ವೀಪದ ಪ್ಯಾಕೇಜ್ 25 ಸಾವಿರಕ್ಕೆ ಶುರುವಾಗುತ್ತದೆ. 3 ರಾತ್ರಿ ಲಕ್ಷದ್ವೀಪದಲ್ಲಿ ಕಳೆಯೋದಕ್ಕೆ 25 ಸಾವಿರ ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇದರಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಹಾಗೂ ಸಂಜೆ ಸ್ನ್ಯಾಕ್ಸ್, ಮತ್ತು ರಾತ್ರಿ ಊಟ ಕೂಡ ಸೇರುತ್ತೆ ಹಾಗೂ ರೂಂ ಕೂಡ ದೊರೆಯುತ್ತದೆ. ಓಡಾಟದ ಖರ್ಚು ಕೂಡ ಇದರಲ್ಲೇ ಸೇರುತ್ತೆ, ಅದೇ 4 ರಾತ್ರಿಗಳನ್ನು ಅಲ್ಲಿ ಕಳೆಯಲು 45 ಸಾವಿರ ರೂಪಾಯಿ ಹಣವನ್ನ ಖರ್ಚು ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+