Maldives-India Row: ಮಾಲ್ಡೀವ್ಸ್ ಬಹಿಷ್ಕಾರ ಅಭಿಯಾನ ಬೆಂಬಲಿಸಿ 'ಈಸಿ ಮೈ ಟ್ರಿಪ್' ವಿಮಾನ ಟಿಕೆಟ್ ಬುಕ್ಕಿಂಗ್ ರದ್ದು,ವಿವರ
ಬೆಂಗಳೂರು, ಜನವರಿ 08: ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಮಾಲ್ಡಿವ್ಸ್ ಸಚಿವರ ಕೀಳು ಅಭಿರುಚಿಯ ಹೇಳಿಕೆ ವಿರುದ್ಧ ಮಾಲ್ಡಿವ್ಸ್ ಬಹಿಷ್ಕಾರ (#BoycottMaldives) ಸಾಮಾಜಿಕ ಜಾಲತಾಣ ಅಭಿಯಾನ ಎರಡನೇ ದಿನವು ಮುಂದುವರಿದಿದೆ. ಇದೀಗ ಭಾರತ ಬೆಂಬಲಿಸಿರುವ 'ಈಸಿ ಮೈ ಟ್ರಿಪ್' (EaseMyTrip) ಟ್ರಾವೆಲ್ ಏಜೆನ್ಸಿಯು ಮಾಲ್ಡಿವ್ಸ್‌ಗೆ ತೆರಳುವ ವಿಮಾನಗಳ ಬುಕ್ಕಿಂಗ್ ಗಳನ್ನು ರದ್ದುಗೊಳಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಲಕ್ಷದ್ವೀಪ ಭೇಟಿಯ ನಂತರ ಮಾಲ್ಡಿವ್ಸ್ ಮೂವರು ಸಚಿವರು ಮಾಡಿದ ಅವಹೇಳನಕಾರಿ ಪ್ರತಿಕ್ರಿಯೆ ನಂತರ ಮಾಲ್ಡಿವ್ ಬಹಿಷ್ಕಾರ ಜೊತೆಗೆ #ChaloLakshadweep ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಟರು, ಖ್ಯಾತ ಕ್ರಿಕೆಟಿಗರು, ಟ್ರಾವೆಲ್ ಏಜೆನ್ಸಿ ಕಂಪನಿಗಳು ಸೇರಿದಂತೆ ಅನೇಕ ಭಾರತೀಯರು ಸಹ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಾಲ್ಡಿವ್ಸ್ ಬಹಿಷ್ಕಾರದ ಮೂಲಕ 'ಭಾರತ ಎಂದರೆ ನಾವೆಲ್ಲ' ಎಂಬ ಒಗ್ಗಟ್ಟನ್ನು ಹಾಗೂ ಭಾರತಕ್ಕೆ, ದೇಶದ ಪ್ರಧಾನಿಗೆ ಅವಮಾನಿಸಿದರೆ ಸಹಿಸಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತೀಯರು ಮಾಲ್ಡಿವ್ಸ್‌ಗೆ ಅಭಿಯಾನದ ಮೂಲಕ ರವಾನಿಸಿದ್ದಾರೆ.
EaseMyTrip ಸಿಇಒ ಪೋಸ್ಟ್‌ನಲ್ಲೇನಿದೆ?
ಭಾರತದೊಂದಿಗೆ ಇದೀಗ EaseMyTrip ಸಹ ನಿಂತಿದೆ. ಭಾರತೀಯ ಆನ್‌ಲೈನ್ ಟ್ರಾವೆಲ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿಶಾಂತ್ ಪಿಟ್ಟಿ ಅವರು ಸೋಮವಾರ ಬಾಯ್ಕಾಟ್ ಮಾಲ್ಡಿವ್ಸ್ ಅಭಿಯಾನ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಮ್ಮ ರಾಷ್ಟ್ರದೊಂದಿಗೆ ಒಗ್ಗಟ್ಟಿನಿಂದ ಇದ್ದು, EaseMyTrip ಎಲ್ಲಾ ಮಾಲ್ಡೀವ್ಸ್ ವಿಮಾನ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ' ಆನ್‌ಲೈನ್ ಪ್ರಯಾಣ ಪರಿಹಾರ ಪೂರೈಕೆದಾರ ನಮ್ಮ ಸಂಸ್ಥೆಯು ಚಲೋಲಕ್ಷದ್ವೀಪ (#ChaloLakshadweep) ಅಭಿಯಾನಕ್ಕೆ ಭೇಟಿ ನೀಡಲು ಆರಂಭಿಸಿದೆ ಎಂದು ಬರೆದುಕೊಂಡಿದ್ದಾರೆ.
In solidarity with our nation, @EaseMyTrip has suspended all Maldives flight bookings ✈ #TravelUpdate #SupportingNation #LakshadweepTourism #ExploreIndianlslands #Lakshadweep#ExploreIndianIslands @kishanreddybjp @JM_Scindia @PMOIndia @tourismgoi @narendramodi @incredibleindia https://t.co/wIyWGzyAZY
— Nishant Pitti (@nishantpitti) January 7, 2024
'ಲಕ್ಷದ್ವೀಪವು ನೀರು ಮತ್ತು ಬೀಚ್‌ಗಳು ಮಾಲ್ಡೀವ್ಸ್/ಸೆಶೆಲ್ಸ್‌ನಂತೆಯೇ ಉತ್ತಮವಾಗಿವೆ. ನಾವು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚೆಗೆ ಭೇಟಿ ನೀಡಿದ ಈ ಪ್ರಾಚೀನ ತಾಣವನ್ನು ಪ್ರಚಾರ ಮಾಡಲು ಅಸಾಮಾನ್ಯ ವಿಶೇಷ ಕೊಡುಗೆಗಳೊಂದಿಗೆ ಬರುತ್ತೇವೆ'' ಎಂದು EaseMyTrip ನ ನಿಶಾಂತ್ ಪಿಟ್ಟಿ ತಿಳಿಸಿದ್ದಾರೆ.
ಟ್ರೆಂಡಿಂಗ್ ಆದ #BoycottMaldives
ಹೌದು, ಲಕ್ಷದ್ವೀಪದ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಹಂಚಿಕೊಂಡ ಬಳಿಕ ಕೀಳು ಹೇಳಿಕೆ ನೀಡಿದ ಮಾಲ್ಡಿವ್ಸ್ ಸಚಿವರನ್ನು ಅಲ್ಲಿನ ಸರ್ಕಾರ ಅಮಾನತು ಮಾಡಿದೆ. ಅವರ ಹೇಳಿಕೆಗಳು ಬಹಿರಂಗವಾಗುತ್ತಿದ್ದಂತೆ X ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ #BoycottMaldives, #ChaloLakshadweep ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ನಾವು ಭಾರತವನ್ನು, ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೇವೆ ಎಂದು ಅಭಿಯಾನ ಆರಂಭವಾಗಿದೆ.
ಭಾರತೀಯ ಪ್ರವಾಸ ನಿರ್ವಾಹಕರ ಸಂಘವು ಮುಂದಿನ 20-25 ದಿನಗಳಲ್ಲಿ ಬಹಿಷ್ಕಾರದ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ರಜಾದಿನದ ಮೋಜಿಗಾಗಿ ಮಾಲ್ಡವ್ಸ್ ಪ್ಲಾನ್‌ಗಳನ್ನು ರದ್ದುಗೊಳಿಸಿದ್ದಾರೆ. ಸದ್ಯ ಮಾಲ್ಡೀವ್ಸ್‌ಗೆ ಪ್ರವಾಸವನ್ನು ಕಾಯ್ದಿರಿಸುವುದಿಲ್ಲ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ರಾಜೀವ್ ಮೆಹ್ರಾ ಹೇಳಿದ್ದಾರೆ.

ದೇಶದ ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ಮೆಚ್ಚಿನ ಪ್ರವಾಸಿ ತಾಣವಾಗಿದ್ದ ಈ ಮಾಲ್ಡಿವ್ಸ್‌ಗೆ ಡಿಸೆಂಬರ್ 2023 ರವರೆಗೆ ಭಾರತೀಯ ಪ್ರವಾಸಿಗರು ಹೆಚ್ಚು (ಒಟ್ಟು 2,09,198) ಭೇಟಿ ಕೊಟ್ಟಿದ್ದಾರೆ. ಭಾರತದ ನಂತರ ರಷ್ಯಾ (2,09,146) ಹಾಗೂ ನಂತರ ಚೀನಾ ದೇಶದವರು (1,87,118) ಮಾಲ್ಡಿವ್ಸ್ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆಗಿದ್ದೇನು?
ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಲಕ್ಷದ್ವೀಪಕ್ಕೆ ಇತ್ತೀಚೆಗೆ ಪ್ರಧಾನಿ ಮೋದಿ ತೆರಳಿದ್ದರು. ಬಳಿಕ ಅಲ್ಲಿನ ಸುಂದರ ತಾಣಗಳ ಫೋಟೊಗಳನ್ನು ಹಂಚಿಕೊಂಡಿದ್ದರು. ಮಾಲ್ಡಿವ್ಸ್‌ಗೆ ಲಕ್ಷದ್ವೀಪ ಪರ್ಯಾಯ ತಾಣವಾಗಲು ಕಾರಣವಾಗಿದ್ದಾರೆ ಪ್ರಧಾನಿ ಮೋದಿ ಎಂದು ಮಾಲ್ಡಿವ್ಸ್‌ನ ಸಚಿವರು ಭಾರತದ ಕುರಿತು ಲಘುವಾಗಿ ಮಾತನಾಡಿದ್ದರು. ಇದು ಬಹಿರಂಗವಾಗುತ್ತಿದ್ದಂತೆ ಮಾಲ್ಡಿವ್ಸ್ ಬಹಿಷ್ಕಾರ, ವಿಮಾನ ಟಿಕೆಟ್ ಬುಕ್ಕಿಂಗ್ ರದ್ದು ಮಾಡುವ ಜೊತೆಗೆ ಚಲೋ ಲಕ್ಷದ್ವೀಪ್ ಅಭಿಯಾನ ಆರಂಭವಾಗಿದೆ.












Click it and Unblock the Notifications