Holidays: ಲಾಂಗ್ ವೀಕೆಂಡ್ ಮೋಜು, ಪ್ರವಾಸಿಗರು ಇಷ್ಟಪಟ್ಟು ಬುಕ್ ಮಾಡಿದ ತಾಣಗಳಿವು
ಇದೇ ಜನವರಿ 26ರಂದು ಸೋಮವಾರ ಗಣರಾಜ್ಯೋತ್ಸವ ಆಚರಣೆ ನಡೆಯಲಿದೆ. ಅಂದು ಸಹ ಒಂದು ದಿನ ರಜೆ ಇರಲಿದ್ದು, ಶನಿವಾರ, ಭಾನುವಾರ ಸೇರಿ ಒಟ್ಟು ಮೂರು ದಿನ ಲಾಂಗ್ ವೀಕೆಂಡ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ರಜಾ ದಿನಗಳ ಮಸ್ತಿಗೆ ಜನರು ಅನೇಕ ಸ್ಥಳಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿದ್ದಾರೆ. ಯಾವೆಲ್ಲ ಸ್ಥಳಗಳು ಹೆಚ್ಚು ಹೆಚ್ಚು ಬುಕ್ ಆಗಿವೆ ಎಂದು ಮೇಕ್ ಮೈ ಟ್ರಿಪ್ ಬಹಿರಂಗಪಡಿಸಿದ ವರದಿಯಲ್ಲಿ ಆಸ್ತಿದಾಯಕ ಮಾಹಿತಿ ಸಿಕ್ಕಿದೆ.
ಮೂರು ದಿನ ಸತತ ರಜೆ ಇರುವ ಕಾರಣ ಜನರು ಲಾಂಗ್ ವೀಕೆಂಡ್ ಎಂಜಾಯ್ ಮಾಡಲು ಹಲವು ಪ್ರವಾಸಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿದ್ದಾರೆ. ರಜೆ ವೇಳೆ ವಿಶ್ರಾಂತಿಗಾಗಿ ಜನ ಪ್ರಯಾಣ ಬೆಳೆಸುವುದು ಸಾಮಾನ್ಯ. ಆದರೆ, ಎಲ್ಲಿ ತೆರಳಬೇಕು? ಯಾವ ಪ್ರದೇಶ ಉತ್ತಮ ಎಂದು ಹುಡುಕುವುದೇ ಕಷ್ಟ. ಜನರ ಎಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ ಎಂಬುದನ್ನು ಇತರರು ತಿಳಿಯಲು ಬಯಸುತ್ತಾರೆ. ಜನರು ದೇಶೀಯವಾಗಿ ಗೋವಾ ಆಯ್ದುಕೊಂಡರೆ, ಅಂತಾರಾಷ್ಟ್ರೀಯ ಟ್ರಿಪ್‌ನಲ್ಲಿ ಥೈಲ್ಯಾಂಡ್‌ಗೆ ಹೆಚ್ಚು ಬುಕ್ಕಿಂಗ್ ಆಗಿದೆ ಎಂದು ದೇಶದ ಲೀಡಿಂಗ್ ಆನ್‌ಲೈನ್ ಟ್ರಾವೆಲ್ ಕಂಪನಿ 'ಮೇಕ್ ಮೈ ಟ್ರಿಪ್' ತಿಳಿಸಿದೆ.

ಹೊರ ರಾಜ್ಯಗಳತ್ತ ಪ್ರವಾಸಿಗರ ಆಸಕ್ತಿ
ಜನವರಿ 24 ರಿಂದ 26 ಜನರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಬಯಸಿದ್ದು, ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಇತರ ಜನಪ್ರಿಯ ದೇಶೀಯ ತಾಣಗಳಾದ ಜೈಪುರ, ಉದಯಪುರ, ಮನಾಲಿ, ಪಾಂಡಿಚೇರಿ ಮತ್ತು ಮುನ್ನಾರ್ ಕೂಡ ತಮ್ಮ ಟ್ರಿಪ್ ಪ್ಲಾನ್ ಮಾಡಿದ್ದಾರೆ. ಇನ್ನು, ಈ ಅವಧಿಯಲ್ಲಿ ದೇವಸ್ಥಾನಕ್ಕೆ ತೆರಳುವವರು ಸಹ ಹೆಚ್ಚಿದ್ದಾರೆ. ಪುರಿ, ವಾರಣಾಸಿ, ಅಮೃತಸರ, ಅಯೋಧ್ಯೆ, ತಿರುಪತಿ, ಉಜ್ಜಯಿನಿ ಮತ್ತು ದ್ವಾರಕಾದಂತಹ ಆಧ್ಯಾತ್ಮಿಕ ತಾಣಗಳಿಗೂ ಸಾಕಷ್ಟು ಬುಕ್ಕಿಂಗ್ ಮಾಡಲಾಗಿದೆ.
ಅಂತಾರಾಷ್ಟ್ರೀಯ ತಾಣಗಳು ಬುಕ್ಕಿಂಗ್
ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣ ತಾಣಗಳಲ್ಲಿ ಥೈಲ್ಯಾಂಡ್‌ಗೆ ಹೆಚ್ಚು ಬುಕ್ಕಿಂಗ್ ಆಗಿವೆ. ಇದರೊಟ್ಟಿಗೆ, ವಿಯೆಟ್ನಾಂಗೂ ಸಹ ಈ ಅವಧಿಯಲ್ಲಿ ಹೆಚ್ಚು ಬಿಕ್ಕಿಂಗ್ ಆಗಿದೆ. ಜೊತೆಗೆ, ಯುಎಇ, ಮಲೇಷ್ಯಾ ಮತ್ತು ಸಿಂಗಾಪುರ ದಂತ ಸ್ಥಳಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.
ಈ ಬುಕ್ಕಿಂಗ್ ಬಗ್ಗೆ ಮಾತನಾಡಿರುವ 'ಮೇಕ್ ಮೈ ಟ್ರಿಪ್'ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್, ಲಾಂಗ್ ವೀಕೆಂಡ್ ಸಂದರ್ಭದಲ್ಲಿ ವಿಶ್ರಾಂತಿ ಹಾಗೂ ಮನರಂಜನೆ ಪಡೆಯಲು ಜನ ತಮ್ಮ ಇಷ್ಟದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಮೇಕ್ ಮೈ ಟ್ರೀಪ್ ಹೆಚ್ಚು ಸಹಕಾರಿಯಾಗಿ ಕೆಲಸ ಮಾಡುತ್ತಿದೆ. ಈ ಅವಧಿಯಲ್ಲಿ ಜನ ಯಾವೆಲ್ಲಾ ಸ್ಥಳಗಳಿಗೆ ಹೆಚ್ಚು ಇಷ್ಟಪಟ್ಟು ತೆರಳುತ್ತಾರೆ ಎಂಬದನ್ನು ನಾವು ಹಂಚಿಕೊಂಡಿದ್ದೇವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಜನರು ಹೆಚ್ಚು ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ವಹಿಸಿದ್ದಾರೆ ಎಂದು ಅವರು ತಿಳಿಸಿದರದು.












Click it and Unblock the Notifications