ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಎನ್ ಕೌಂಟರ್ : ಮೇಜರ್ ಜನರಲ್ ಸೇರಿ 6 ಮಂದಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ಗುವಾಹಟಿ, ಅಕ್ಟೋಬರ್ 15: ಸರಿ ಸುಮಾರು 24 ವರ್ಷ ಹಳೆಯ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಜನರಲ್ ಸೇರಿದಂತೆ 7 ಮಂದಿ ಸೇನಾ ಸಿಬ್ಬಂದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೇನಾ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ.

ದಿಬ್ರುಗಢದಲ್ಲಿರುವ ಭಾರತೀಯ ಸೇನಾ ಘಟಕದ ನೆಲೆಯಿಂದ ಈ ಮಾಹಿತಿ ಪ್ರಕಟಿಸಲಾಗಿದ್ದು, ಎಲ್ಲರ ವಿರುದ್ಧದ ಆರೋಪಿಗಳು ಸಾಬೀತಾಗಿವೆ. 1994ರಲ್ಲಿ ಅಸ್ಸಾಂನ ತೀನ್‌ಸುಕಿಯಾದಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದರು.

ಮಣಿಪುರ ನಕಲಿ ಎನ್ ಕೌಂಟರ್ ಪ್ರಕರಣ, ಸಿಬಿಐಗೆ ಸುಪ್ರೀಂ ತಪರಾಕಿಮಣಿಪುರ ನಕಲಿ ಎನ್ ಕೌಂಟರ್ ಪ್ರಕರಣ, ಸಿಬಿಐಗೆ ಸುಪ್ರೀಂ ತಪರಾಕಿ

ಮೇಜರ್ ಜನರಲ್ ಎ.ಕೆ. ಲಾಲ್, ಕರ್ನಲ್ ಥೋಮಸ್ ಮ್ಯಾಥ್ಯೂ, ಕರ್ನಲ್ ಆರ್.ಎಸ್. ಸಿಬಿರೆನ್, ಕ್ಯಾಪ್ಟನ್ ದಿಲೀಪ್ ಸಿಂಗ್, ಕ್ಯಾಪ್ಟನ್ ಜಗದೇವ್ ಸಿಂಗ್, ನಾಯಕ್ ಅಲ್ಬಿಂದರ್ ಸಿಂಗ್ ಹಾಗೂ ನಾಯಕ್ ಶಿವೇಂದರ್ ಸಿಂಗ್‌ ಅವರಿಗೆ ಸೇನಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

 Major General, 6 Others Sentenced To Life For Fake Encounter

1984 ಫೆಬ್ರವರಿ 18ರಂದು ಅಸ್ಸಾಂನ ತೀನ್‌ಸುಕಿಯಾ ಜಿಲ್ಲೆಯ ವಿವಿಧ ಪ್ರದೇಶದಿಂದ ಸೇನೆ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು ಎಂದು ಅಸ್ಸಾಂನ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಜಗದೀಶ್ ಭುಯಾನ ಹೇಳಿದ್ದಾರೆ. ಇವರಲ್ಲಿ 5 ಮಂದಿಯನ್ನು ಯೋಧರು ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆಗೈದಿದ್ದರು. ಕೆಲವು ದಿನಗಳ ನಂತರ ಈ ಹತ್ಯೆಯನ್ನು ಉಲ್ಫಾ ಉಗ್ರರು ನಡೆಸಿದರು ಎನ್ನಲಾಗಿತ್ತು. ಮಿಕ್ಕ ನಾಲ್ವರನ್ನು ಬಿಡುಗಡೆ ಮಾಡಿದ್ದರು.

ಗಡಿ ನುಸುಳಲು ಯತ್ನಿಸಿದ ಮತ್ತೆ ಮೂವರು ಉಗ್ರರಿಗೆ ಸೇನೆ ಗುಂಡುಗಡಿ ನುಸುಳಲು ಯತ್ನಿಸಿದ ಮತ್ತೆ ಮೂವರು ಉಗ್ರರಿಗೆ ಸೇನೆ ಗುಂಡು

ಜುಲೈ 16, 2018ರಂದು ಆರಂಭವಾದ ಕೋರ್ಟ್ ಮಾರ್ಷಲ್, ಜುಲೈ 27ರಂದು ವಿಚಾರಣೆ ಮುಕ್ತಾಯಗೊಳಿಸಿತ್ತು. ದೇಶದ ಕಾನೂನು, ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದೆ ಎಂದು ಬಿಜೆಪಿ ನಾಯಕ ಜಗದೀಶ್ ಭುಯಾನ ಪ್ರತಿಕ್ರಿಯಿಸಿದ್ದಾರೆ.

English summary
Seven military personnel, including a Major General, have been convicted by an army court in a 24-year-old fake encounter case in Assam. They have been sentenced to life in prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X