ಮಹಾರಾಷ್ಟ್ರದಲ್ಲಿ ಬೆಂಕಿ ಅವಘಡ, 20 ಮಂದಿ ಯೋಧರು ಸಾವು

Posted By:
Subscribe to Oneindia Kannada

ನಾಗಪುರ, ಮೇ 31: ಮಹಾರಾಷ್ಟ್ರದ ಪಲಗಾಂವ್​ನ ವಾರ್ಧಾ ಜಿಲ್ಲೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸೇನಾ ಯುದ್ಧ ಸಾಮಗ್ರಿಗಳನ್ನು ಶೇಖರಣೆ ಮಾಡುವ ಡಿಪೋಗೆ ಬೆಂಕಿ ಬಿದ್ದಿದ್ದು, ಇಬ್ಬರು ಸೇನಾಧಿಕಾರಿಗಳು ಸೇರಿದಂತೆ 20 ಯೋಧರು ಮೃತಪಟ್ಟಿದ್ದಾರೆ.

ಸೋಮವಾರ ತಡ ರಾತ್ರಿ ಸಂಭವಿಸಿದ ದುರಂತದಲ್ಲಿ ಅಗ್ನಿ ಅವಘಡದಲ್ಲಿ ಇಬ್ಬರು ಸೇನಾ ಅಧಿಕಾರಿಗಳು(ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್) ಸೇರಿದಂತೆ ಕನಿಷ್ಠ 15 ರಿಂದ 20 ಯೋಧರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 25ಕ್ಕೂ ಜನ ಗಾಯಗೊಂಡಿದ್ದಾರೆ.

Major Fire at Ammunition Depot Maharashtra Over 20 Killed

ಡಿಪೋ ಸುತ್ತಮುತ್ತಲಿನ ಸಾವಿರಾರು ಹಳ್ಳಿಗಳಲ್ಲಿನ ಜನರನ್ನು ಸುರಕ್ಷತೆ ದೃಷ್ಟಿಯಿಂದ ಬೇರೆ ಸ್ಥಳಕ್ಕೆ ರವಾನಿಸಲಾಗಿದೆ.


ನಾಗಪುರದಿಂದ ಸುಮಾರು 110 ಕಿ.ಮೀ ದೂರದಲ್ಲಿ ಪಲಂಗಾವ್ ನಲ್ಲಿ ಈ ಡಿಪೋ ಇದೆ. ಭಾರತದ ಅತಿದೊಡ್ಡ ಯುದ್ಧ ಸಾಮಗ್ರಿ ಶೇಖರಣೆ ಡಿಪೋ ಇದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Twenty army personnel, including two officials, were killed in a massive fire that broke out a military ammunition depot in Pulgaon in Wardha district of Maharashtra early on Tuesday.
Please Wait while comments are loading...