LPG: ಅಕ್ಟೋಬರ್ 1ರಿಂದ ಎಲ್‌ಪಿಜಿ ಸಿಲಿಂಡರ್ ದರ ಸೇರಿ ಹಲವು ನಿಯಮಗಳಲ್ಲಿ ಬದಲಾವಣೆ
New Rules: ಸೆಪ್ಟೆಂಬರ್ ಮುಗಿದು ಅಕ್ಟೋಬರ್ ಎಂಟ್ರಿಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಮುಂಬರು ಅಕ್ಟೋಬರ್ ತಿಂಗಳಿನಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಸೇರಿ ಹಲವು ನಿಯಮಗಳಲ್ಲಿ ಬದಲಾವಣೆಗಳು ಆಗಲಿವೆ. ಹಾಗಾದ್ರೆ, ಯಾವೆಲ್ಲಾ ಹೊಸ ನಿಯಮಗಳು ಜಾರಿ ಆಗಲಿವೆ ಹಾಗೂ ಇದರಿಂದ ಪ್ರಯೋಜನಾವಾ ಅಥವಾ ಜನಸಾಮಾನ್ಯರ ಮೇಲೆ ಯಾವೆಲ್ಲಾ ಪರಿಣಾಮಗಳು ಬೀರಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಕ್ಟೋಬರ್ 2025 ನಿಮ್ಮ ಮಾಸಿಕ ವೆಚ್ಚಗಳ ಮೇಲೆ ಪರಿಣಾಮ ಬೀರುವ ಹಲವಾರು ಆರ್ಥಿಕ ಬದಲಾವಣೆಗಳಾಗಲಿವೆ. ಅಕ್ಟೋಬರ್ ತಿಂಗಳ ಎಂಟ್ರಿಗೆ ಕೇವಲ ನಾಲ್ಕು ದಿನಗಳಷ್ಟೇ ಬಾಕಿಯಿವೆ. ಅಕ್ಟೋಬರ್ 1, 2025ರಿಂದ ದೇಶದಲ್ಲಿ ಹಲವು ನಿಯಮಗಳು ಬದಲಾಗಲಿವೆ.

ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ?: ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದ ದಿನಾಂಕದಂದೇ ಹಲವು ನಿಯಮಗಳಲ್ಲಿ ಬದಲಾವಣೆ ಆಗುತ್ತಲಿರುತ್ತದೆ. ಹಾಗೆಯೇ ಮುಂದಿನ ತಿಂಗಳು ಆಕ್ಟೋಬರ್ 1ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ, ರೈಲು ಟಿಕೆಟ್ ಬುಕ್ಕಿಂಗ್, ಯುಪಿಐ ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಬದಲಾವಣೆಯಾದ್ರೆ, ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ.
ಆರ್‌ಬಿನ ಮಾನಿಟರಿ ಪಾಲಿಸಿ ಕಮಿಟಿ ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುತ್ತದೆ. ಆಗಸ್ಟ್ನಲ್ಲಿ ಎಂಪಿಸಿ ಸಭೆ ನಡೆದಿದ್ದು, ಇದೀಗ ಸೆಪ್ಟೆಂಬರ್ 29ರಂದು ಆರಂಭಗೊಂಡು ಮೂರು ದಿನ ಸಭೆ ನಡೆಯಲಿದೆ. ಇನ್ನು ಅಕ್ಟೋಬರ್ 1ರಂದು ಸಭೆಯ ನಿರ್ಧಾರಗಳು ಹೊರಬೀಳಲಿವೆ.
ದೇಶದಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ಪೇಮೆಂಟ್ ವಿಧಾನವಾಗಿರುವ ಯುಪಿಐನಲ್ಲಿ ಒಂದು ಪ್ರಮುಖ ನಿಯಮ ಬದಲಾವಣೆ ಅಕ್ಟೋಬರ್ನಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದೆ. ಇದು ಯುಪಿಐ ಪಿ2ಪಿ ಸೇವೆಗೆ ಸಂಬಂಧಿಸಿದ್ದು ಆಗಿದ್ದು, ಕಲೆಕ್ಟ್ ರಿಕ್ವೆಸ್ಟ್ ಫೀಚರ್ ಅನ್ನು ನಿಲ್ಲಿಸಬಹುದು. ಒಬ್ಬ ಯುಪಿಐ ಬಳಕೆದಾರ ಮತ್ತೊಮ್ಮೆ ಬಳಕೆದಾರರಿಗೆ ಹಣಕ್ಕಾಗಿ ಮನವಿ ಸಲ್ಲಿಸುವ ಕ್ರಮವು ಕಲೆಕ್ಟ್ ರಿಕ್ವೆಸ್ಟ್. ಈ ವಿಧಾನದ ಮೂಲಕ ಕೆಲವರು ವಂಚನೆ ಎಸಗುತ್ತಿದ್ದರು. ಇದನ್ನು ನಿಯಂತ್ರಿಸಲು ಎನ್ಪಿಸಿಐ ಕಲೆಕ್ಟ್ ರಿಕ್ವೆಸ್ಟ್ ಫೀಚರ್ ಅನ್ನೇ ತೆಗೆದುಹಾಕುತ್ತಿದೆ ಎನ್ನಲಾಗುತ್ತಿದೆ.
ಅಕ್ಟೋಬರ್ 1 ರಿಂದ ಆಧಾರ್ ದೃಢೀಕರಿಸಿದ ಪ್ರಯಾಣಿಕರಿಗೆ ರೈಲ್ವೆ ಆದ್ಯತೆ ನೀಡಲಿದೆ. ಅಂತಹ ಪ್ರಯಾಣಿಕರಿಗೆ ರೈಲ್ವೆ ಟಿಕೆಟ್ ಬುಕಿಂಗ್ ಪ್ರಾರಂಭ ಆಗುವ 15 ನಿಮಿಷಗಳ ಮೊದಲೇ ಆದ್ಯತೆಯ ಪ್ರವೇಶವನ್ನು ನೀಡಲಾಗುವುದು. ಅಂದರೆ, ಪ್ರಯಾಣಿಕರು, ಟಿಕೆಟ್ ಬುಕಿಂಗ್ ಆರಂಭವಾಗಿ ಮೊದಲ 15 ನಿಮಿಷಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದು. ಆದರೆ, ಬೇರೆಯವರು 15 ನಿಮಿಷಗಳ ನಂತರ ಬುಕಿಂಗ್‌ಗೆ ಅವಕಾಶ ಇರಲಿದೆ.
ಪ್ರತಿ ತಿಂಗಳ ಮೊದಲ ದಿನದಂದು ಇಂಧನ ಕಂಪನಿಳು ಎಲ್‌ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಣೆ ಮಾಡುತ್ತವೆ. ಇದುವರೆಗೂ ವಾಣಿಜ್ಯ ಸಿಲಿಂಡರ್ ದರಗಳು ಇಳಿಕೆ ಮಾಡುತ್ತಾ ಬರಲಾಗುತ್ತಿದೆ. ಆದರೆ ಗೃಹಬಳಕೆ ಸಿಲಿಂಡರ್ ದರ ಮಾತ್ರ ಇಳಿಕೆಯಾಗುತ್ತಿಲ್ಲ. ಬದಲಾಗಿದೆ ಈ ಹಿಂದೆ ಏರಿಕೆ ಮಾಡಲಾಗಿದೆ. ಇನ್ನೂ ಮುಂದಿನ ತಿಂಗಳು ಅಕ್ಟೋಬರ್‌ನಿಂದಲಾದ್ರೂ ಏರಿಕೆ ಮಾಡುತ್ತಾರಾ ಎಂದು ಜನರು ಕಾದುಕುಳಿತಿದ್ದಾರೆ.












Click it and Unblock the Notifications