ಹೊಸ ಅಧ್ಯಾಯ ತೆರೆಯಲಿರುವ ರಕ್ಷಣಾ ಕ್ಷೇತ್ರದ ಭಾರತ- ಅಮೆರಿಕ ಒಪ್ಪಂದ

Posted By:
Subscribe to Oneindia Kannada

ಅಮೆರಿಕದ ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ನ ನಿಯಮಗಳಡಿ ಭಾರತವು, ಅಮೆರಿಕದ ರಕ್ಷಣಾ ಇಲಾಖೆಯ ಪ್ರಮುಖ ಸಹಭಾಗಿತ್ವ ದೇಶವಾಗಿ ಹೊರಹೊಮ್ಮಿರುವುದರಿಂದ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ರಕ್ಷಣೆಗೆ ಸಂಬಂಧಿಸಿದ ಪರಿಕರ, ತಂತ್ರಜ್ಞಾನಗಳ ವಿನಿಯಮದ ಹೊಸ ಅಧ್ಯಾಯವನ್ನೇ ತೆರೆಯಲಿದೆ ಎಂದು ನವದೆಹಲಿಯಲ್ಲಿರುವ ಅಮೆರಿಕ ಧೂತಾವಾಸ ಕಚೇರಿಯಲ್ಲಿ ಚಾರ್ಜ್ ಡಿ ಅಫೇರ್ಸ್ ಅಧಿಕಾರಿಯಾಗಿರುವ ಮೇರಿಕೇ ಕಾರ್ಲ್ ಸನ್ ತಿಳಿಸಿದ್ದಾರೆ.

ಯಲಹಂಕದಲ್ಲಿ ಆಯೋಜನೆಗೊಂಡಿದ್ದ ಬೆಂಗಳೂರು ಏರ್ ಷೋ ಸಂದರ್ಭದಲ್ಲಿ ಅಮೆರಿಕ ನಿರ್ಮಿತ ಪೆವಿಲಿಯನ್ ಅನ್ನು ಉದ್ಘಾಟಿಸಿದ ಅವರು ಈ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಲ್ ನ್, ಭಾರತ ಹಾಗೂ ಅಮೆರಿಕದ ರಕ್ಷಣಾ ಮೈತ್ರಿಯಲ್ಲಿ ಈವರೆಗೆ ಆಗಿರುವ ಸಾಧನೆಗಳು ಹಾಗೂ ಈ ಸಾಧನೆಯ ಹಾದಿಯಲ್ಲಿನ ಪ್ರಮುಖ ಮೈಲುಗಲ್ಲುಗಳನ್ನು ವಿವರಿಸಿದರು.

ಉಭಯ ದೇಶಗಳ ನಡುವೆ ಈವರೆಗೆ ರಕ್ಷಣಾ ಪರಿಕರಗಳ ಆಮದು ಹಾಗೂ ರಫ್ತಿನಲ್ಲಿ ಭಾರತ 15 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 100,57,57,500 ರು.) ನಷ್ಟು ವ್ಯವಹಾರ ಮಾಡಿದೆ ಎಂದರು.

ಅಮೆರಿಕದ 2017 ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ನಿಯಮಗಳ ಪ್ರಕಾರ, ಭಾರತವು ಅಮೆರಿಕದ ರಕ್ಷಣಾ ಇಲಾಖೆಯ ಪ್ರಮುಖ ಸಹಭಾಗಿತ್ವ ದೇಶವಾಗಿ ಹೊರಹೊಮ್ಮಿದ್ದು, ರಕ್ಷಣಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಉಭಯ ದೇಶಗಳ ಬಲವರ್ಧನೆಗೆ ತನ್ನದೇ ಆದ ಮಹತ್ವದ ಕಾಣಿಕೆಯನ್ನು ನೀಡಿದೆ ಎಂದು ಅವರು ವಿವರಿಸಿದರು.

ಇದೇ ವೇಳೆ, ಈ ಬಾರಿಯ ಇಂಡಿಯಾ ಏರೋ ಷೋನಲ್ಲಿ ಅಮೆರಿಕದ ರಕ್ಷಣಾ ವಲಯಕ್ಕೆ ಸಂಬಂಧಿಸಿದ 20 ಕಂಪನಿಗಳು ಭಾಗವಹಿಸುತ್ತಿರುವುದು ಹೆಮ್ಮೆ ತಂದಿದೆ ಎಂದ ಅವರು, ಉಭಯ ದೇಶಗಳ ರಕ್ಷಣೆ ವಿಚಾರದಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರ ಒಪ್ಪಂದಗಳ ಮೂಲಕ ಹೊಸ ಸಾಧ್ಯತೆಗಳತ್ತ ದಾಪುಗಾಲು ಇಡುತ್ತಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು.

 ಏರ್ ಶೋಗೆ ಅಮೆರಿಕದ ರಂಗು

ಏರ್ ಶೋಗೆ ಅಮೆರಿಕದ ರಂಗು

ಏರೋ ಇಂಡಿಯಾ ಷೋದಲ್ಲಿ ನಿರ್ಮಿಸಲಾಗಿದ್ದ ಅಮೆರಿಕದ ಪಾರ್ಟ್ ನರ್ ಶಿಪ್ ಪೆವಿಲಿಯನ್ ಅನ್ನು ಟೇಪ್ ಕತ್ತರಿಸುವ ಉದ್ಘಾಟಿಸಿದ ಅಮೆರಿಕದ ಮೇರಿಕೀ ಕಾರ್ಲ್ ಸನ್

ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಾಕ್ಷಿ

ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಾಕ್ಷಿ

ಉದ್ಘಾಟನೆಯ ವೇಳೆ ನೆರೆದಿದ್ದ ಭಾರತ ಹಾಗೂ ಅಮೆರಿಕದ ಅಧಿಕಾರಿಗಳು, ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಕಾರ್ಲ್ ಸನ್.

ಹೆಚ್ಚಲಿದೆ ಭಾರತದ ಸೇನಾ ಶಕ್ತಿ

ಹೆಚ್ಚಲಿದೆ ಭಾರತದ ಸೇನಾ ಶಕ್ತಿ

ಯುಎಸ್ಎ ಪೆವಿಲಿಯನ್ ನಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಅಮೆರಿಕದ ರಕ್ಷಣಾ ಪರಿಕರ, ಯುದ್ಧ ವಿಮಾನಗಳನ್ನು ವೀಕ್ಷಿಸಿದ ಕಾರ್ಲ್ಸ್ ಸನ್.

ಏರೋ ಷೋ ಬಗ್ಗೆ ಹೆಮ್ಮೆ

ಏರೋ ಷೋ ಬಗ್ಗೆ ಹೆಮ್ಮೆ

ವೀಕ್ಷಣೆ ವೇಳೆ ಭಾರತದಲ್ಲಿ ಜರುಗುತ್ತಿರುವ ಏರೋ ಷೋನಲ್ಲಿ ಭಾಗವಹಿಸಿರುವುದು ಅಮೆರಿಕಕ್ಕೆ ಹೆಮ್ಮೆಯ ವಿಚಾರ ಎಂದು ಕಾರ್ಲ್ಸ್ ಸನ್ ತಿಳಿಸಿದರು.

ಯುದ್ಧ ವಿಮಾನದ ಮುಂದೆ ಫೋಟೋ ಶೂಟ್

ಯುದ್ಧ ವಿಮಾನದ ಮುಂದೆ ಫೋಟೋ ಶೂಟ್

ಏರೋ ಷೋನಲ್ಲಿ ಅಮೆರಿಕ ನಿರ್ಮಿತ ಯುದ್ಧ ವಿಮಾನವೊಂದರ ಮುಂದೆ ನಿಂತು ಫೋಟೋಕ್ಕೆ ಪೋಸು ನೀಡಿದ ಕಾರ್ಲ್ಸ್ ಸನ್.

Photo credit: Capt. Mark Lazane, U.S. Pacific Air Forces Public Affairs

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India’s designation as a Major Defense Partner in the 2017 National Defense Authorization Act of America opens a new chapter in bilateral relationship says MaryKay Carlson, Charge d'Affaires at the U.S. Embassy in New Delhi.
Please Wait while comments are loading...