• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಡನ್ ಫಾರ್ಮಾಸ್ಯುಟಿಕಲ್ಸ್ ಕೆಮ್ಮು ಸಿರಪ್ ಉತ್ಪಾದನೆ ಸ್ಥಗಿತ

|
Google Oneindia Kannada News

ಹರಿಯಾಣ, ಅಕ್ಟೋಬರ್‌ 12: ಮೇಡನ್ ಫಾರ್ಮಾಸ್ಯುಟಿಕಲ್ಸ್ ಉತ್ಪಾದಿಸುವ ಕೆಮ್ಮಿನ ಸಿರಪ್‌ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮಾರಕ ಎಂದು ತಿಳಿಸಿದ ಒಂದು ವಾರದ ನಂತರ ಹರಿಯಾಣ ಸರ್ಕಾರವು ಕಂಪನಿಯ ಔಷಧದ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಕೇಂದ್ರ ಮತ್ತು ಹರಿಯಾಣ ರಾಜ್ಯ ಔಷಧ ಇಲಾಖೆಗಳು ನಡೆಸಿದ ಜಂಟಿ ತಪಾಸಣೆಯಿಂದ ಉತ್ಪನ್ನಗಳಲ್ಲಿ 12 ನ್ಯೂನತೆಗಳು ಪತ್ತೆಯಾಗಿವೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದು, ಕೆಮ್ಮು ಸಿರಪ್‌ಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳ ಗುಣಮಟ್ಟ ಪರೀಕ್ಷೆಯನ್ನು ಸಂಸ್ಥೆಯು ಹೊಂದಿಲ್ಲ ಎಂದು ಹರಿಯಾಣ ಔಷಧ ಅಧಿಕಾರಿಗಳು ಐದು ಪುಟಗಳ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಮೇಡನ್ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ದೂರುಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಮೇಡನ್ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ದೂರು

ರಾಜ್ಯ ಡ್ರಗ್ಸ್ ಕಂಟ್ರೋಲರ್ ತನ್ನ ಕಾರ್ಖಾನೆಯಲ್ಲಿ ಗುಣಮಟ್ಟ ಪರೀಕ್ಷೆಯ ಉಲ್ಲಂಘನೆಗಾಗಿ ಮೇಡನ್ ಫಾರ್ಮಾಸ್ಯುಟಿಕಲ್ಸ್‌ಗೆ ಶೋಕಾಸ್ ನೋಟಿಸ್ ಸಹ ನೀಡಿದೆ. ಈ ಶೋಕಾಸ್ ನೋಟಿಸ್‌ಗೆ ನಿಮ್ಮ ಉತ್ತರವು ಈ ಸೂಚನೆಯನ್ನು ಸ್ವೀಕರಿಸಿದ ಏಳು ದಿನಗಳ ಒಳಗಾಗಿ ಈ ಕಚೇರಿಗೆ ತಲುಪಬೇಕು. ವಿಫಲವಾದರೆ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1940 ಮತ್ತು ನಿಯಮಗಳು, 1945 ರ ಪ್ರಕಾರ ನಿಮ್ಮ ವಿರುದ್ಧ ಎಕ್ಸ್-ಪಾರ್ಟೆ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹರಿಯಾಣ ರಾಜ್ಯ ಡ್ರಗ್ಸ್ ಕಂಟ್ರೋಲರ್ ಕಮ್ ಲೈಸೆನ್ಸಿಂಗ್ ಅಥಾರಿಟಿ, ಆಹಾರ ಮತ್ತು ಡ್ರಗ್ಸ್ ಅಡ್ಮಿನಿಸ್ಟ್ರೇಷನ್‌ನ ಮನಮೋಹನ್ ತನೇಜಾ ಅವರು ನೋಟಿಸ್ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಚ್ಚರಿಕೆಯನ್ನು ಅನುಸರಿಸಿ ಸಿರಪ್‌ಗಳನ್ನು ರಫ್ತು ಮಾಡಲು ಉದ್ದೇಶಿಸಿರುವ ಕಂಪನಿಯ ಕೆಮ್ಮಿನ ಸಿರಪ್ ಮಾದರಿಗಳನ್ನು ಪರೀಕ್ಷಿಸುತ್ತಿದ್ದೇವೆ ಎಂದು ಅಧಿಕಾರಿಗಳು ಕಳೆದ ವಾರ ಹೇಳಿದ್ದಾರೆ. ಮೇಡನ್ ಫಾರ್ಮಾಸ್ಯುಟಿಕಲ್ಸ್ ಕಲುಷಿತ ಕೆಮ್ಮಿನ ಸಿರಪ್‌ಗಳ ತಯಾರಿಕೆಗಾಗಿ ವಿವಾದ ಎದುರಿಸುತ್ತದೆ. ಅದರ ಸೇವನೆಯು ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 60 ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾಗಿದೆ.

ಗಾಂಬಿಯಾದಲ್ಲಿ 66 ಸಾವುಗಳ ತನಿಖೆ

ಗಾಂಬಿಯಾದಲ್ಲಿ 66 ಸಾವುಗಳ ತನಿಖೆ

ತನಿಖೆಯಲ್ಲಿರುವ ನಾಲ್ಕು ಕೆಮ್ಮಿನ ಸಿರಪ್‌ಗಳೆಂದರೆ ಪ್ರೊಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್, ಮ್ಯಾಕೋಫ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್. ತೀವ್ರ ಮೂತ್ರಪಿಂಡದ ಸಮಸ್ಯೆಗಳಿಂದ ಆಗಿರುವ 66 ಸಾವುಗಳನ್ನು ತನಿಖೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಭಾರತದ ಔಷಧ ನಿಯಂತ್ರಕದೊಂದಿಗೆ ಕೆಲಸ ಮಾಡುತ್ತಿದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕಳೆದ ವಾರ ಹೇಳಿದ್ದರು.

ಮಕ್ಕಳಿಗೆ ಮಾರಕವೆಂದು WHO ಎಚ್ಚರಿಸಿದ ಭಾರತದ ಕೆಮ್ಮಿನ ಸಿರಪ್‌ಗಳು ಇವೇ ನೋಡಿ...ಮಕ್ಕಳಿಗೆ ಮಾರಕವೆಂದು WHO ಎಚ್ಚರಿಸಿದ ಭಾರತದ ಕೆಮ್ಮಿನ ಸಿರಪ್‌ಗಳು ಇವೇ ನೋಡಿ...

ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರಾಟ

ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರಾಟ

ಮೇಡನ್ ಫಾರ್ಮಾಸ್ಯುಟಿಕಲ್ಸ್ ಮೊದಲ ಬಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿಲ್ಲ. ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ ಹಲವಾರು ಮಕ್ಕಳ ಸಾವಿನ ನಂತರ ಮತ್ತೊಮ್ಮೆ ಮೇಡನ್ ಫಾರ್ಮಾಸ್ಯುಟಿಕಲ್ಸ್ ಭಾರತದಲ್ಲಿಯೂ ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಆರೋಪ ಹೊತ್ತಿದೆ. ಕಳೆದ 10ರಿಂದ 11 ವರ್ಷಗಳಲ್ಲಿ ಬಿಹಾರ, ಗುಜರಾತ್, ಕೇರಳದಂತಹ ರಾಜ್ಯಗಳಲ್ಲಿ ಮೇಡನ್‌ ವಿರುದ್ಧ ದೂರುಗಳು ಮುನ್ನೆಲೆಗೆ ಬಂದಿವೆ.

ಕಳಪೆ ಗುಣಮಟ್ಟದ ಉತ್ಪನ್ನಗಳು

ಕಳಪೆ ಗುಣಮಟ್ಟದ ಉತ್ಪನ್ನಗಳು

ಬಿಹಾರದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ಅನ್ನು 2011ರಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಮತ್ತೆ ಮೂರು ವರ್ಷಗಳ ನಂತರ ಅಂದರೆ 2015ರಲ್ಲಿ ಗುಜರಾತ್‌ನಲ್ಲೂ ಕಳಪೆ ಗುಣಮಟ್ಟದ ಉತ್ಪನ್ನಗಳು ಪತ್ತೆಯಾಗಿದ್ದವು. 2014 ರಲ್ಲಿ ಭಾರತದ ಹೊರಗೆ ವಿಯೆಟ್ನಾಂನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾದ 39 ಭಾರತೀಯ ಕಂಪನಿಗಳಲ್ಲಿ ಮೇಡನ್ ಹೆಸರು ಕೂಡ ಇತ್ತು.

0.1% ರಿಂದ 2% ರಷ್ಟು ಮಾತ್ರ ಬಳಕೆಗೆ ಅನುಮತಿ

0.1% ರಿಂದ 2% ರಷ್ಟು ಮಾತ್ರ ಬಳಕೆಗೆ ಅನುಮತಿ

1990 ರಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ಅನ್ನು ಸ್ಥಾಪಿಸಲಾಯಿತು. ಇದು ಹರಿಯಾಣದ ಪಾಣಿಪತ್ ಮತ್ತು ಕುಂಡ್ಲಿ ಹೊರತುಪಡಿಸಿ ಹಿಮಾಚಲ ಪ್ರದೇಶದ ಸೋಲನ್‌ನಲ್ಲೂ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದರ ಕಾರ್ಪೊರೇಟ್ ಕಚೇರಿ ದೆಹಲಿಯ ಪಿತಾಂಪುರದಲ್ಲಿದೆ. ಮಾಹಿತಿಯ ಪ್ರಕಾರ ಡೈಎಥಿಲೀನ್ ಗ್ಲೈಕಾಲ್ ಡಿಇಜಿ ಅನ್ನು ಕೆಲವು ಔಷಧಿಗಳಲ್ಲಿ ದ್ರಾವಕವಾಗಿ ಬಳಸಲಾಗುತ್ತದೆ. ಆದರೆ ಭಾರತದಲ್ಲಿ 0.1% ರಿಂದ 2% ರಷ್ಟು ಮಾತ್ರ ಬಳಕೆಗೆ ಅನುಮತಿಸಲಾಗಿದೆ. ಆದರೆ ಔಷಧಿಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ.

English summary
A week after the World Health Organization declared the cough syrup manufactured by Maiden Pharmaceuticals to be deadly, the Haryana government has suspended production of the company's drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X