ಖರಿದೀಸಿದ ದಿನವೇ ಶೋ ರೂಂ ಮೊದಲ ಮಹಡಿಯಿಂದ ₹27 ಲಕ್ಷದ ಮಹೀದ್ರಾ ಥಾರ್ ಕಾರು ಜಂಪ್ ಮಾಡಿಸಿದ ಅಕ್ಕ ಬಾಂಡ್: ಇಲ್ಲಿದೆ ವಿಡಿಯೋ
Mahindra Thar: ಸಾಮಾನ್ಯವಾಗಿ ರಸ್ತೆ ಅಪಘಾತಗಳ ಬಗ್ಗೆ ಹೆಚ್ಚಾಗಿ ಕೇಳಿರುತ್ತೇವೆ. ಆದರೆ, ಇದೀಗ ವಿಚಿತ್ರ ಎಂಬಂತೆ 27,00,000 ರೂಪಾಯಿ ಮೌಲ್ಯದ ಐಷಾರಾಮಿ ಹೊಸ ಮಹೀಂದ್ರಾ ಥಾರ್ ರಾಕ್ಸ್ ಕಾರು ರಸ್ತೆಗಿಳಿಯುವ ಮುನ್ನವೇ ಅಪಘಾತಕ್ಕೀಡಾದ ಘಟನೆ ನಡೆದಿದೆ. ಮಹಿಳೆಯೊಬ್ಬರು ಈ ಕಾರನ್ನು ಶೋಂ ರೂಂ ಮೊದಲ ಮಹಡಿಯಿಂದ ಜಂಪ್ ಮಾಡಿಸಿದ್ದಾರೆ. ಬಳಿಕ ಏನೆಲ್ಲಾ ಆಯ್ತು ಎನ್ನುವ ಸಂಪೂರ್ಣ ವಿವರ ವೈರಲ್ ಆಗಿರುವ ಈ ವಿಡಿಯೋದಲ್ಲಿದೆ ಗಮನಿಸಿ.
ಹೊಸ ಕಾರು ಖರೀದಿ ಮಾಡಬೇಕೆನ್ನುವ ಆಸೆ ಬಹುತೇಕ ಮಂದಿಯಲ್ಲಿರುತ್ತದೆ. ಈ ಆಸೆ ನೆರವೇರಿದರೆ, ಅವರಿಗೆ ಆಗುವ ಖುಷಿನೇ ಬೇರೆ. ಹೀಗೆ ಮಹಿಳೆಯೊಬ್ಬರು ಐಷಾರಾಮಿ ಮಹೀಂದ್ರಾ ಥಾರ್ ರಾಕ್ಸ್ ಕಾರು ಖರೀದಿ ಮಾಡಲು ಶೋ ರೂಂಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಆದರೆ, ಇದೇ ವೇಳೆ ಆ ಮಹಿಳೆಯು ಕಾರನ್ನು ಶೋರೂಂ ಮೊದಲ ಮಹಡಿಯಿಂದಲೇ ಹಾರಿಸಿದ್ದು, ಕಾರು ಕೆಳಗೆ ಬಿದ್ದು ನುಜ್ಜುಗುಜ್ಜಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದುಬಂದಿದೆ.

ಪ್ರತಿಷ್ಠಿತ ಮಹೀಂದ್ರಾ ಕಂಪನಿಯ ಐಷಾರಾಮಿ ಥಾರ್ ರಾಕ್ಸ್ ಕಾರು ಖರೀದಿ ಮಾಡಿದ ತಕ್ಷಣವೇ ಅಪಘಾತಕ್ಕೆ ಒಳಗಾಗಿದೆ. ಹೌದು.. 29 ವರ್ಷದ ಮಹಿಳೆ ಮಾನಿ ಪವಾರ್ ಎಂಬವವರು ಶೋ ರೂಂ ಮೊದಲ ಮಹಡಿಯಿಂದ ಕಾರು ಹಾರಿಸಿದ್ದಾರೆ. ರಸ್ತೆಗಿಳಿಸುವ ಮೊದಲೇ ಅವರು ಶೋರೂಂವೊಳಗೆ ಸಾಂಪ್ರದಾಯಿಕ ಆಚರಣೆ ಮಾಡಲು ನಿರ್ಧಾರ ಮಾಡಿದ್ದರು.
ಸಾಮಾನ್ಯವಾಗಿ ಹೊಸ ವಾಹನ ಖರೀದಿ ಮಾಡಿದಾಗ ಸಂಪ್ರದಾಯದಂತೆ ಚಕ್ರಗಳಿಗೆ ನಿಂಬೆಹಣ್ಣು ಇಟ್ಟು ಪೂಜೆ ಮಾಡಲಾಗುತ್ತದೆ. ಅದರಂತೆಯೇ ಈ ಮಹಿಳೆ ಕಾರಿನ ಟೈರ್ ಕೆಳಗೆ ಇಟ್ಟಿದ್ದ ನಿಂಬೆಹಣ್ಣಿನ ಮೇಲೆ ಕಾರು ಹತ್ತಿಸುವ ವೇಳೆ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿ ಹಿಡಿದಿದ್ದಾರೆ. ಆಗ ಕಾರು ಶೋ ರೂಂನ ಮೊದಲ ಮಹಡಿಯಿಂದ ಕೆಳಗಡೆ ಬಿದ್ದಿದೆ. ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಾನಿ ಪವಾರ್ ಅವರು ಸೆಪ್ಟೆಂಬರ್ 8ರ ಸೋಮವಾರ ಸಂಜೆ ನವದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿ ಇರುವ ಮಹೀಂದ್ರಾ ಶೋರೂಮ್‌ಗೆ ಭೇಟಿ ನೀಡಿ 27,00,000 ರೂಪಾಯಿ ಮೌಲ್ಯದ ತಮ್ಮ ಹೊಸ ಥಾರ್ ಕಾರಿನ ಡೆಲಿವರಿ ಪಡೆದರು. ಶೋರೂಮ್‌ನಿಂದ ಕಾರನ್ನು ರಸ್ತೆಗಿಳಿಸುವ ಮೊದಲು ಪೂಜೆ ಮಾಡುವ ವೇಳೆ ಈ ಘಟನೆ ನಡೆದಿದೆ.
ಮಾನಿ ಪವಾರ್ ಅವರು ನಿಧಾನವಾಗಿ ಎಕ್ಸ್‌ಲೇಟರ್ ಮೇಲೆ ಒತ್ತಿದ್ದರೆ, ಏನು ಆಗುತ್ತಿರಲಿಲ್ಲ. ಅವರು ಹಾಗೇ ಆಕ್ಸಲೇಟರ್ ಮೇಲೆ ಬಲವಾಗಿ ಒತ್ತಿ ಹಿಡಿದ ಕಾರಣ ಕಾರು ಶೋಂರೂಂ ಮೊದಲ ಮಹಡಿಯಿಂದ ಕೆಳಗೆ ಜಂಪ್ ಮಾಡಿದೆ. ಅಪಘಾತ ಸಂಭವಿಸಿದ ತಕ್ಷಣವೇ ಏರ್‌ಬ್ಯಾಗ್‌ಗಳು ಓಪನ್ ಆಗಿದ್ದು, ಗಾಯಾಳುಗಳನ್ನು ಕೂಡಲೇ ಸಮೀಪದ ಮಲಿಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿದ್ದರಿಗೆ ಹೆಚ್ಚಿನ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಶೋರೂಂ ಮಾಲೀಕರು ಮಾತನಾಡಿ, ಎಕ್ಸಲೇಟರ್ ಅನ್ನು ಆಕಸ್ಮಿಕವಾಗಿ ತುಳಿದ ಕಾರಣ ಈ ಘಟನೆ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications