ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೀಡಾ ದುರಂತ: ಆಟದ ನಡುವೆ ಕುಸಿದು ಪ್ರಾಣ ಬಿಟ್ಟ ಸ್ಪರ್ಧಿ

By Mahesh
|
Google Oneindia Kannada News

ತಿರುವನಂತಪುರಂ, ಫೆ.2: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೋಮವಾರ ದುರಂತ ಸಂಭವಿಸಿದೆ. ಮಹಾರಾಷ್ಟ್ರ ಮೂಲದ ನೆಟ್ ಬಾಲ್ ಆಟಗಾರ ಆಟವಾಡುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ನೆಟ್ ಬಾಲ್ ಆಟಗಾರ 21 ವರ್ಷ ವಯಸ್ಸಿನ ಮಯೂರೇಶ್ ಪವಾರ್ ಅವರು ಆಟದ ಮಧ್ಯೆ ಮೈದಾನದಲ್ಲೇ ಸಾವನ್ನಪ್ಪಿರುವ ಘಟನೆ ಆಘಾತ ತಂದಿದೆ. ಎದೆ ಹಿಡಿದುಕೊಂಡು ಕುಸಿದು ಬಿದ್ದ ಆಟಗಾರ ಮಯೂರೇಶ್ ರನ್ನು ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತು. ಅದರೆ, ಆಸ್ಪತ್ರೆಗೆ ಬರುವಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ರಾಷ್ಟ್ರೀಯ ಕ್ರೀಡಾಕೂಟದ ಕಾರ್ಯದರ್ಶಿ ಹೇಳಿದ್ದಾರೆ. [ಎದೆಗೆ ಚೆಂಡು ಬಡಿದು ಯುವ ಕ್ರಿಕೆಟರ್ 'ದುರಂತ' ಸಾವು]

Maharashtra player dies at National Games

ತಿರುವನಂತರಪುರಂನ ಕೃಷಿ ಕಾಲೇಜಿನ ಒಳಾಂಗಣ ಸ್ಟೇಡಿಯಂನಲ್ಲಿ ಚಂಡೀಗಢ್ ಹಾಗೂ ಮಹಾರಾಷ್ಟ್ರ ನಡುವೆ ನೆಟ್ ಬಾಲ್ ಪಂದ್ಯಾವಳಿ ನಡೆಯಿತು. ಮಹಾರಾಷ್ಟ್ರ ಪರ ಮಯೂರೇಶ್ ಪವಾರ್ ಸೋಮವಾರ ಬೆಳಗ್ಗೆ ಪಂದ್ಯವಾಡುತ್ತಿದ್ದರು. ಈ ಸಂದರ್ಭದಲ್ಲಿ ಎದೆ ನೋವು ಎಂದು ಕುಸಿದು ಬಿದ್ದಿದ್ದರು. ಕೂಡಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಅದರೆ, ಫಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ.

ಅದರೆ, ಪವಾರ್ ಅವರು ನೆಟ್ ಬಾಲ್ ಪಂದ್ಯಕ್ಕೂ ಮುನ್ನ ಅಭ್ಯಾಸ ನಿರತರಾಗಿದ್ದಾಗಲೇ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಯುವ ಪ್ರತಿಭೆ ಪವಾರ್ ನಿಧನಕ್ಕೆ ಕೇರಳ ಕ್ರೀಡಾ ಸಚಿವ ರಾಧಾಕೃಷ್ಣನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಪವಾರ್ ಮೃತ ಶರೀರ ರವಾನೆಗೆ ಸಂಬಂಧಿಸಿದಂತೆ ಸಂಪೂರ್ಣ ಖರ್ಚು ವೆಚ್ಚವನ್ನು ಕೇರಳ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ. [ಆತ ದಾಖಲಿಸಿದ ಗೋಲನ್ನೇ ಗೆದ್ದ ಸಾವು!]

ರಾಮನಗರದಲ್ಲಿ ದುರಂತ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರದಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ಖಾಸಗಿ ಸಂಸ್ಥೆ ಉದ್ಯೋಗಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಉತ್ತರಪ್ರದೇಶ ಮೂಲಕ 27 ವರ್ಷ ವಯಸ್ಸಿನ ಪ್ರಕಾಶ್ ಗುಪ್ತ ಎಂಬವರು ಆಂಗಾಗ ದಾನ ಅರಿವುದು ಮೂಡಿಸಲು ಮ್ಯಾರಾಥಾನ್ ನಲ್ಲಿ ಪಾಲ್ಗೊಂಡಿದ್ದರು. ಅದರೆ, ಓಟ ಮುಗಿಸಿದ ಮೇಲೆ ಕುಸಿದು ಬಿದ್ದ ಪ್ರಕಾಶ್ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸೇರಿಸಲು ಕರೆದೊಯ್ಯಲಾಯಿತು. ಅದರೆ, ಮಾರ್ಗಮಧ್ಯೆದಲ್ಲೇ ಪ್ರಕಾಶ್ ಸಾವನ್ನಪ್ಪಿದ ಘಟನೆ ನಡೆದಿದೆ. (ಪಿಟಿಐ)

English summary
Tragedy struck the ongoing National Games as a 21-year-old netball player from Maharashtra died here today following cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X