ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎದೆಗೆ ಚೆಂಡು ಬಡಿದು ಯುವ ಕ್ರಿಕೆಟರ್ 'ದುರಂತ' ಸಾವು

By Mahesh

ಕರಾಚಿ, ಜ.27: ಆಟದ ವೇಳೆ ಗಾಯಗೊಂಡು ಸಾವನ್ನಪ್ಪಿದ ನತದೃಷ್ಟ ಕ್ರಿಕೆಟರ್ ಗಳ ದುರಂತಪಟ್ಟಿಗೆ ಮತ್ತೊಬ್ಬ ಪಾಕಿಸ್ತಾನಿ ಕ್ರಿಕೆಟರ್ ಸೇರ್ಪಡೆಗೊಂಡಿದ್ದಾರೆ. 18 ವರ್ಷ ವಯಸ್ಸಿನ ಪಾಕಿಸ್ತಾನಿ ಯುವ ಆಟಗಾರ ಎದೆಗೆ ಚೆಂಡು ಬಡಿದು ಸಾವನ್ನಪ್ಪಿದ ದುರ್ಘಟನೆ ಬಗ್ಗೆ ತಡವಾಗಿ ತಿಳಿದು ಬಂದಿದೆ.

ಇಲ್ಲಿನ ಒರಾಂಗಿ ಪಟ್ಟಣದಲ್ಲಿ ನಡೆದ ಕ್ಲಬ್ ಮಟ್ಟದ ಕ್ರಿಕೆಟ್ ಪಂದ್ಯವೊಂದರ ವೇಳೆ 18 ವರ್ಷ ವಯಸ್ಸಿನ ಜೀಷನ್ ಮಹಮ್ಮದ್ ಎದೆಗೆ ಚೆಂಡು ಬಡಿದಿದೆ, ಎದೆ ಹಿಡಿದುಕೊಂಡು ಜೀಸನ್ ಅಲ್ಲೇ ಕುಸಿದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಾಗಿದೆ. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. [ದುರಂತ ಅಂತ್ಯ ಕಂಡ ಕೊಡಗಿನ ಕ್ರಿಕೆಟರ್]

Young Pakistani cricketer hit on the chest, dies, cricket tragedy

ಈ ಹಿಂದೆ 1959ರಲ್ಲಿ ಕರಾಚಿಯಲ್ಲಿ ಆಡುವಾಗ ಅಬ್ದುಲ್ ಅಜೀಜ್ ಎಂಬ ಆಟಗಾರನ ಎದೆಗೆ ಚೆಂಡು ಬಡಿದು ಅವರ ಹೃದಯಬಡಿತವನ್ನೇ ನಿಲ್ಲಿಸಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಇದಾದ ಮೇಲೆ 2013ರಲ್ಲಿ 22 ವರ್ಷದ ಜುಲ್ಫಿಕರ್ ಭಟ್ಟಿ ಕೂಡಾ ಇದೇ ರೀತಿ ದುರಂತ ಅಂತ್ಯ ಕಂಡಿದ್ದರು. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ]

ಜೀಷನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಗೆ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಜೀಷನ್ ಎದೆಗೆ ಭಾರಿ ಪೆಟ್ಟು ಬಿದ್ದಿರುವ ಗುರುತಿಸಿ, ಹೃದಯಾಘಾತವಾಗಿ ಕುಸಿದಿದ್ದಾರೆ. ವೇಗಿ ಎಸೆದ ಚೆಂಡು ಎದೆಗೆ ಬಡಿದಿತ್ತು ಎಂದು ತಿಳಿದು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ. [ಇಂಗ್ಲೆಂಡ್ ವಿಕೆಟ್ ಕೀಪರ್ ದುರಂತ ಕಥೆ]

ಆಕಸ್ಮಿಕ ಮರಣ ಹೊಂದಿದ ಕ್ರಿಕೆಟರ್ ಜೀಷನ್ ಅವರ ಸಾವಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಂಬನಿ ಮಿಡಿದಿದೆ. ಕ್ರಿಕೆಟರ್ ಅಂತ್ಯ ಸಂಸ್ಕಾರವೂ ನಡೆಸಲಾಗಿದೆ. ಅದರೆ, ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ಸಾವಿನ ನಂತರ ಎದ್ದಿದ್ದ ಪ್ರಶ್ನೆ ಮತ್ತೊಮ್ಮೆ ಕೇಳಿ ಬರುತ್ತಿದೆ. ಕ್ರಿಕೆಟ್ ನಲ್ಲಿ ಸುರಕ್ಷಿತ ನಿಯಮಗಳು ಎಷ್ಟರಮಟ್ಟಿಗೆ ಪಾಲಿಸಲಾಗುತ್ತಿದೆ. ಜೀವಕ್ಕೆ ಕುತ್ತುಂಟಾಗುವ ಮಾದರಿ ಆಟಕ್ಕೆ ನಿಯಂತ್ರಣ ಸಾಧ್ಯವಿಲ್ಲವೇ? (ಪಿಟಿಐ)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X