Maharashtra: ದೇವೇಂದ್ರ ಫಡ್ನವಿಸ್ ಸಿ.ಎಂ & ಏಕನಾಥ್ ಶಿಂಧೆ ಡಿಸಿಎಂ ಫಿಕ್ಸ್, ಅಜಿತ್ ಪವಾರ್ ಸಸ್ಪೆನ್ಸ್!
Maharashtra government formation: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿವಾಗುತ್ತಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಯು ಭರ್ಜರಿ ಜಯಗಳಿಸಿದ್ದು, ಇದೀಗ ಎರಡನೇ ಬಾರಿ ಮಹಾಯುತಿಯು ಅಧಿಕಾರ ರಚನೆಗೆ ದಾಪುಗಾಲಿಟ್ಟಿದೆ. ಮೂಲಗಳ ಪ್ರಕಾರ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರು ಆಯ್ಕೆಯಾಗುವುದು ಬಹುತೇಕ ಫಿಕ್ಸ್ ಆಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯು ಧೂಳಿಪಟವಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶವು ಇದೇ 23ರಂದು ಪ್ರಕಟವಾಗಿದ್ದು, ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ.
ಮಹಾರಾಷ್ಟ್ರದಲ್ಲಿ ಈ ಹಿಂದೆ ಯಾವುದೇ ಮೈತ್ರಿ ಪಕ್ಷಗಳು ಮಾಡದ ಸಾಧನೆಯನ್ನು ಮಹಾಯುತಿ ಮೈತ್ರಿಕೂಟ ಮಾಡಿದೆ. ಇದೀಗ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ (ಶಿವಸೇನಾ ಬಣದ ನಾಯಕ) ಅವರು ಉಪ ಮುಖ್ಯಮಂತ್ರಿಯಾಗಿ ಆಯ್ಕೆಯುಗುವುದು ಬಹುತೇಕ ಖಚಿತವಾಗಿದೆ. ಇನ್ನು ಅಜಿತ್ ಪವಾರ್ (ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಬಣ) ಅವರಿಗೆ ಯಾವ ಸ್ಥಾನ ಸಿಗಲಿದೆ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ದೇವೇಂದ್ರ ಫಡ್ನವಿಸ್‌ಗೆ ಒಲಿದ ಅದೃಷ್ಟ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಆಯ್ಕೆಯಾಗುತ್ತಿದ್ದು, ಅವರು ಈ ಹಿಂದೆಯೂ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಕಳೆದ ಬಾರಿ ಅಧಿಕಾರದಲ್ಲಿ ಮಹಾಯುತಿ ಸರ್ಕಾರದಲ್ಲಿ ಕೊನೆಯ ಹಂತದಲ್ಲಿ ಅವರು ಉಪ ಮುಖ್ಯಮಂತ್ರಿಯಾಗಿದ್ದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದಾಗ ಹಾಗೂ ಬಿಜೆಪಿ ಸೋಲು ಕಂಡಾಗಲೂ ದೇವೇಂದ್ರ ಫಡ್ನವಿಸ್ ಅವರು ಬಿಜೆಪಿ ನಾಯಕತ್ವವನ್ನು ವಹಿಸಿಕೊಂಡು ಗಟ್ಟಿಯಾಗಿ ಬಿಜೆಪಿಯನ್ನು ಮುನ್ನಡೆಸಿದ್ದರು. ಅಷ್ಟು ಮಾತ್ರವಲ್ಲ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಬೆಂಬಲವೂ ದೇವೇಂದ್ರ ಫಡ್ನವಿಸ್ ಅವರಿಗೆ ಇದೆ.
ಏಕನಾಥ್ ಶಿಂಧೆ: ಇನ್ನು ಏಕನಾಥ್ ಶಿಂಧೆ ಅವರು ಸಹ ಮಹಾಯುತಿ ಮೈತ್ರಿಕೂಟದಲ್ಲಿ ಪ್ರಮುಖ ಸ್ಥಾನವನ್ನು ವಹಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅವರ ಶಿವಸೇನಾ ಪಕ್ಷವು 57 ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ ಅವರು ಎರಡೂವರೆ ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದರು. ಮಹಾಯುತಿ ಮೈತ್ರಿ ಪಕ್ಷಗಳನ್ನು ಒಂದುಗೂಡಿಸಿ ತೆಗೆದುಕೊಂಡು ಹೋಗುವ ಚಾಣಾಕ್ಷತೆ ಅವರಿಗೆ ಇದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಅದು ಈ ಬಾರಿ ಅವರಿಗೆ ವರದಾನವಾಗಿದೆ.

ಶಿವಸೇನಾ (ಏಕನಾಥ್ ಶಿಂಧೆ ಬಣ)ದ ಡಿಮ್ಯಾಂಡ್‌ಗಳೇನು
ಏಕಾನಾಥ್ ಶಿಂಧೆ ಈ ಬಾರಿಯ ಸರ್ಕಾರ ರಚನೆಯಲ್ಲಿ ರೆಬಲ್ ಆಗಲಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ರೀತಿ ಇರುವಾಗಲೇ ಬಿಜೆಪಿ ಹೈಕಮಾಂಡ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರವೇಶಿಸಿದ್ದರು. ಹೀಗಾಗಿ, ಈ ಗೊಂದಲಗಳಿಗೆ ತೆರೆ ಬಿದ್ದಿದೆ. ಇದೀಗ ಅವರ ಪಕ್ಷಕ್ಕೆ 12 ಸಚಿವ ಸ್ಥಾನ ಹಾಗೂ ಸ್ಪೀಕರ್ ಹುದ್ದೆಯನ್ನು ನೀಡಬೇಕು.
ಗೃಹ ಸಚಿವ ಹಾಗೂ ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಅಜಿತ್ ಪವಾರ್ ಅವರೂ ಸಹ ಮಹಾಯುತಿಯ ಮೈತ್ರಿ ಭಾಗವಾಗಿದ್ದು, ಅವರಿಗೆ ಯಾವ ಹುದ್ದೆ ನೀಡಲಾಗುತ್ತದೆ. ಈ ಬಾರಿಯೂ ಮಹಾರಾಷ್ಟ್ರದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆಯೇ ಎನ್ನುವ ಕುತೂಹಲಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.












Click it and Unblock the Notifications